Select Your Language

Notifications

webdunia
webdunia
webdunia
webdunia

‘ಜೋಗಿ’ ಸಿನಿಮಾಗೆ 15 ವರ್ಷ: ಅಭಿಮಾನಿಗಳಿಂದ ಅದ್ಧೂರಿ ಸಂಭ್ರಮಾಚರಣೆ

‘ಜೋಗಿ’ ಸಿನಿಮಾಗೆ 15 ವರ್ಷ: ಅಭಿಮಾನಿಗಳಿಂದ ಅದ್ಧೂರಿ ಸಂಭ್ರಮಾಚರಣೆ
ಬೆಂಗಳೂರು , ಸೋಮವಾರ, 3 ಆಗಸ್ಟ್ 2020 (11:25 IST)
ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯಿಸಿದ್ದ, ಪ್ರೇಮ್ ನಿರ್ದೇಶನದ ‘ಜೋಗಿ’ ಸಿನಿಮಾಗೆ ಆಗಸ್ಟ್ 19 ರಂದು 15 ವರ್ಷ ತುಂಬುತ್ತಿದೆ.

 

ಈ ಸಂಭ್ರಮವನ್ನು ಅದ್ಧೂರಿಯಾಗೇ ಆಚರಿಸಲು ಶಿವಣ್ಣನ ಅಭಿಮಾನಿಗಳು ನಿರ್ಧರಿಸಿದ್ದಾರೆ. ಶಿವಣ್ಣನಿಗೆ ಬ್ರೇಕ್ ಕೊಟ್ಟ, ಪ್ರೇಮ್ ಗೆ ನಿರ್ದೇಶಕನಾಗಿ ಸ್ಯಾಂಡಲ್ ವುಡ್ ನಲ್ಲಿ ಸ್ಥಾನ ಕಲ್ಪಿಸಿಕೊಟ್ಟ ಮ್ಯೂಸಿಕಲ್ ಹಿಟ್, ಮಾಸ್ ಸಿನಿಮಾ ಜೋಗಿ ಎಂದರೆ ಇಂದಿಗೂ ಅಭಿಮಾನಿಗಳಿಗೆ ವಿಶೇಷ ಪ್ರೀತಿಯಿದೆ.

ಇದೀಗ ಈ ಸಿನಿಮಾದ 15 ವರ್ಷದ ಸಂಭ್ರಮವನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಆಚರಿಸಲು ಸಿದ್ಧತೆ ನಡೆಸಿದ್ದಾರೆ. ವಿಶೇಷ ಸಿಡಿಪಿಯನ್ನು ಆಗಸ್ಟ್ 18 ರಂದು ಲಾಂಚ್ ಮಾಡಲಿದ್ದಾರೆ. ಅಷ್ಟೇ ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಜೋಗಿ ಟ್ರೆಂಡ್ ಸೃಷ್ಟಿಸಲು ನಿರ್ಧರಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಫಿಲ್ಮ್ ಫೆಸ್ಟಿವಲ್ ಟೊರಾಂಟೊದಲ್ಲಿ ಪ್ರದರ್ಶನವಾಗಲಿದೆ ತೆಲುಗಿನ ಈ ಚಿತ್ರ