₹60ಕೋಟಿ ವಂಚನೆ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ ಮೊರೆ ಹೋದ ಶಿಲ್ಪಾ ಶೆಟ್ಟಿ

Sampriya
ಸೋಮವಾರ, 10 ನವೆಂಬರ್ 2025 (17:11 IST)
s
Photo Credit X
ಮುಂಬೈ: ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಹಾಗೂ ಪತಿ ರಾಜ್ ಕುಂದ್ರಾ ಅವರು ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಆ.14ರಂದು ಸಾಲ ಮತ್ತು ಹೂಡಿಕೆ ಒಪ್ಪಂದದಲ್ಲಿ ಉದ್ಯಮಿಯೊಬ್ಬರಿಗೆ ₹60 ಕೋಟಿ ವಂಚಿಸಿದ ಆರೋಪದಲ್ಲಿ ಮುಂಬೈ ಪೊಲೀಸರ ಆರ್ಥಿಕ ಅಪರಾಧ ವಿಭಾಗವು ಪ್ರಕರಣ ದಾಖಲಿಸಿತ್ತು.

'ಎಫ್‌ಐಆರ್ ರದ್ದುಗೊಳಿಸುವಂತೆ ಕೋರುವುದರ ಜೊತೆಗೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಪಟ್ಟಿ ಸಲ್ಲಿಸದಂತೆ ಹಾಗೂ ಅರ್ಜಿಗಳ ವಿಚಾರಣೆ ನಡೆಯುವವರೆಗೆ ನಮ್ಮ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ನಿರ್ದೇಶನ ನೀಡುವಂತೆ' ಶಿಲ್ಪಾ ಶೆಟ್ಟಿ ಮತ್ತು ಕುಂದ್ರಾ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ನವೆಂಬರ್ 20ಕ್ಕೆ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಚಂದ್ರಶೇಖರ್ ಮತ್ತು ನ್ಯಾಯಮೂರ್ತಿ ಗೌತಮ್ ಅಂಕಡ್ ಅವರಿದ್ದ ಪೀಠವು ಮುಂದೂಡಿದೆ.

ಕಂಪನಿಯ ಕುಸಿತಕ್ಕೆ ಅನಿರೀಕ್ಷಿತ ಆರ್ಥಿಕ ಪರಿಸ್ಥಿತಿಗಳು ಕಾರಣ. ಉದ್ಯಮ ಮತ್ತು ಹೂಡಿಕೆಯಲ್ಲಿ ನಷ್ಟವಾಗಿದೆ ಹೊರತು ನಾವು ವಂಚಿಸಿಲ್ಲ ಎಂದು ದಂಪತಿ ಅರ್ಜಿಯಲ್ಲಿ ತಿಳಿಸಿದ್ದಾರೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮತ್ತೇ ಆಸ್ಪತ್ರೆಗೆ ದಾಖಲಾದ ನಟ ಧರ್ಮೇಂದ್ರ, ಆರೋಗ್ಯ ಸ್ಥಿತಿ ಹೇಗಿದೆ ಗೊತ್ತಾ

ರಿಯಲ್ ಲೈಫ್‌ನಲ್ಲಿ ಒಂದಾದ ಕನ್ನಡದ ರೀಲ್ಸ್ ಜೋಡಿ, ಜಿಮ್‌ ಟ್ರೈನರ್ ಕೈಹಿಡಿದ ನಟಿ ರಜಿನಿ

ಜೈಲಿನಲ್ಲಿ ದರ್ಶನ್‌ ಸಂಕಷ್ಟ ನೋಡಲಾಗದೆ ಧನ್ವೀರ್ ಈ ರೀತಿ ಮಾಡಿದ್ರಾ

ಉಗ್ರರಿಗೆ, ವಿಕೃತ ಕಾಮಿಗೆ ಪರಪ್ಪನ ಅಗ್ರಹಾರ ಜೈಲಲ್ಲಿ ವಿಐಪಿ ಟ್ರೀಟ್ಮೆಂಟ್: ದರ್ಶನ್ ಫ್ಯಾನ್ಸ್ ಆಕ್ರೋಶ

ಬಿಗ್‌ಬಾಸ್‌ನಿಂದ ಬಂದ್ಮೇಲೆ ಹೊಸ ಅಧ್ಯಾಯ ಶುರು ಮಾಡಿದ ಉಗ್ರಂ ಮಂಜು

ಮುಂದಿನ ಸುದ್ದಿ
Show comments