Select Your Language

Notifications

webdunia
webdunia
webdunia
webdunia

ಕೆಜಿಎಫ್ 2 ರ ಅಧೀರನ ಲುಕ್ ಬಹಿರಂಗ! ಕನ್ನಡಿಗರಿಗೆ ‘ಅಧೀರ’ ಸಂಜಯ್ ದತ್ ಸಂದೇಶ

ಕೆಜಿಎಫ್ 2 ರ ಅಧೀರನ ಲುಕ್ ಬಹಿರಂಗ! ಕನ್ನಡಿಗರಿಗೆ ‘ಅಧೀರ’ ಸಂಜಯ್ ದತ್ ಸಂದೇಶ
ಬೆಂಗಳೂರು , ಬುಧವಾರ, 29 ಜುಲೈ 2020 (10:13 IST)
ಬೆಂಗಳೂರು: ಕೆಜಿಎಫ್ 2 ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಅಭಿನಯಿಸುತ್ತಿರುವ ಬಾಲಿವುಡ್ ಸಂಜಯ್ ದತ್ ‘ಅಧೀರ’ ಲುಕ್ ಬಹಿರಂಗವಾಗಿದೆ.


ಇಂದು ಸಂಜು ಬಾಬ ಬರ್ತ್ ಡೇ ಇದ್ದು, ಆ ನಿಮಿತ್ತ ಕೆಜಿಎಫ್ ಚಿತ್ರತಂಡ ಅವರ ‘ಅಧೀರ’ ಲುಕ್ ಬಹಿರಂಗಗೊಳಿಸಿದೆ. ಕ್ರೂರ ಅಧೀರನ ಲುಕ್ ಭರ್ಜರಿಯಾಗಿದೆ.

ಜತೆಗೆ ಈ ಪೋಸ್ಟರ್ ಬಿಡುಗಡೆಯಾದ ಬಳಿಕ ಸಂಜಯ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕೆಜಿಎಫ್ 2 ಚಿತ್ರತಂಡಕ್ಕೆ, ಸ್ಯಾಂಡಲ್ ವುಡ್ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ. ಇದಕ್ಕಿಂತ ಉತ್ತಮ ಬರ್ತ್ ಡೇ ಉಡುಗೊರೆ ನನಗೆ ಬೇರೆಲ್ಲೂ ಸಿಗದು. ನನ್ನನ್ನು ಈ ಸಿನಿಮಾದ ಭಾಗವಾಗಿಸಿದ್ದಕ್ಕೆ ಧನ್ಯವಾದಗಳು. ಈ ಸಿನಿಮಾದ ಭಾಗವಾಗಿರುವುದು ನನ್ನ ಅದೃಷ್ಟ. ನನ್ನನ್ನು ಬೆಂಬಲಿಸುತ್ತಿರುವ ಎಲ್ಲರಿಗೂ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಜಿಎಫ್ 2 ನ ಕ್ರೂರಿಯ ಸ್ವಾಗತಿಸಲು ಅಭಿಮಾನಿಗಳು ರೆಡಿ