ಅಳುತ್ತಿದ್ದ ಹರೀಶ್ ರಾಯ್‌ ಮಗನ ಕೈಹಿಡಿದು ಧೈರ್ಯ ತುಂಬಿದ ರಾಕಿಬಾಯ್ ಯಶ್‌

Sampriya
ಗುರುವಾರ, 6 ನವೆಂಬರ್ 2025 (19:21 IST)
Photo Credit X
ಬೆಂಗಳೂರು: ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನಟ, ಕೆಜಿಎಫ್ ಸಿನಿಮಾದ ಚಾಚಾ ಎಂದೇ ಖ್ಯಾತಿ ಪಡೆದ ಹರೀಶ್ ರಾಯ್ ಂತಿಮ ದರ್ಶನವನ್ನು ನಟ ರಾಕಿಂಗ್ ಸ್ಟಾರ್ ಯಶ್ ಪಡೆದರು. 

ತಮ್ಮ ಟಾಕ್ಸಿಕ್ ಚಿತ್ರದ ಕೆಲಸದಲ್ಲಿ ಬ್ಯುಸಿ ಮಧ್ಯೆಯೂ ಹರೀಶ್ ರಾಯ್ ಅಂತಿಮ ದರ್ಶನ ಪಡೆದು ಪೂಜೆಯನ್ನು ಸಲ್ಲಿಸಿದರು. ಿನ್ನೂ ಅಳುತ್ತಿದ್ದ ಹರೀಶ್‌ ಮಗ ಹಾಗೂ ಪತ್ನಿಯ ಕೈಹಿಡಿದು ಸಮಾಧಾನವನ್ನು ಹೇಳಿದರು. 

ಕ್ಯಾನ್ಸರ್‌ ರೋಗದಿಂದ ಬಳಲುತ್ತಿದ್ದ ಹರೀಶ್ ರಾಯ್ ಅವರ ಆರೋಗ್ಯ ಸ್ಥಿತಿ ಈಚೆಗೆ ತುಂಬಾನೇ ಹದಗೆಟ್ಟಿತ್ತು.  ಇನ್ನೂ ಹರೀಶ್ ಅವರಿಗೆ ಯಶ್ ಅವರು ಆರ್ಥಿಕ ಸಹಾಯವನ್ನು ನೀಡಿದ್ದರು ಎಂದು ಸ್ವತಃ ಅವರೇ ಹೇಳಿದ್ದರು. 

ಇದೀಗ ಅದೇ ಸ್ನೇಹಿತನ ಅಂತಿಮ ದರ್ಶನಕ್ಕೆ ರಾಕಿ ಭಾಯ್ ಬಂದೇ ಬಿಟ್ಟಿದ್ದಾರೆ. 

ಕೆಜಿಎಫ್ ಚಿತ್ರದಲ್ಲಿ ಸಾಕಷ್ಟು ಪಾತ್ರಗಳು ಇವೆ. ಆದರೆ, ಈಗಲೂ ಈ ಚಿತ್ರದ ಒಂದು ಪಾತ್ರಗಳು ಜನರ ಮನದಲ್ಲಿದೆ. ಅದು ಬೇರೆ ಯಾವುದೋ ಅಲ್ಲ. ಅದು ಹರೀಶ್ ರಾಯ್ ನಿರ್ವಹಿಸಿದ ಖಾಸಿಂ ಚಾಚಾ ಪಾತ್ರವೇ ಆಗಿದೆ.

ಈ ಪಾತ್ರದ ಖದರ್ ಬೇರೆ ಇತ್ತು. ರಾಕಿ ಭಾಯ್‌ಗೆ ಸಾಥ್ ಕೊಡುವ ಪಾತ್ರವೇ ಇದಾಗಿತ್ತು. ಈ ಪಾತ್ರದಿಂದ ಹರೀಶ್ ರಾಯ್‌ಗೆ ಇನ್ನಷ್ಟು ಖ್ಯಾತಿ ತಂದುಕೊಟ್ಟಿತ್ತು. <>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರಕ್ಷಿತಾಳ ಭಾಷೆ ಬಗ್ಗೆ ಮಾತನಾಡುವ ಯಾವ ಹಕ್ಕು ನಿಮಗಿಲ್ಲ

ಧರ್ಮೇಂದ್ರ ಸಾವಿನ ವದಂತಿ ಬೆನ್ನಲ್ಲೇ ಮಗಳಿಂದ ಸ್ಪಷ್ಟನೆ

ಇದೊಂದು ಭಯಾನಕ ಘಟನೆ: ದೆಹಲಿ ಸ್ಫೋಟಕ್ಕೆ ಅಲ್ಲು ಅರ್ಜುನ್ ಸಂತಾಪ

ದರ್ಶನ್ ಜೈಲಿನಲ್ಲಿ, ಬರ್ತಡೇ ದಿನ ವಿಜಯಲಕ್ಷ್ಮಿ ಏನ್‌ ಮಾಡಿದ್ರೂ ಗೊತ್ತಾ

BBK12: ಕಿಚ್ಚ ಸುದೀಪ್ ಬಗ್ಗೆಯೇ ಗಂಭೀರ ಆರೋಪ ಮಾಡಿದ ಧ್ರುವಂತ್

ಮುಂದಿನ ಸುದ್ದಿ
Show comments