ಪ್ರಿಯಾಮಣಿ ಲವ್ ಯು ಎಂದಿದ್ದು ಯಾರಿಗೆ..?!

ಸೋಮವಾರ, 22 ಡಿಸೆಂಬರ್ 2014 (09:29 IST)
ದಕ್ಷಿಣ ಭಾರತದ ಮುದ್ದಾದ  ನಟಿ  ಹಾಗೂ ಸೆಕ್ಸಿ ನಟಿ ಪ್ರಿಯಾಮಣಿ. ಆಕೆ ಇತ್ತೀಚಿಗೆ ಕನ್ನಡಚಿತ್ರ ಅಂಬರೀಶದಲ್ಲಿ ಅಭಿನಯಿಸಿದ್ದರು. ಕಳೆದ ಕೆಲವು ವರ್ಷಗಳಿಂದ ಚಿತ್ರರಂಗದಲ್ಲಿ ಇರುವ ಈ ಚೆಲುವೆ ಅನೇಕ ತಮಿಳು, ತೆಲುಗು ಮಲೆಯಾಳಂ ಮತ್ತು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾಳೆ. ಅಲ್ಲದೆ ರಾವಣ್ ಚಿತ್ರದಲ್ಲಿ ಅಭಿಷೇಕ್ ಬಚ್ಚನ್  ಸಹೋದರಿಯಾಗಿ ಶಾರುಖ್ ಖಾನ್ ಅವರ ಜೊತೆ ಚೆನ್ನೈ ಎಕ್ಸ್ಪ್ರೆಸ್ ಸಿನಿಮಾದಲ್ಲಿ ಐಟಂ ನಂಬರ್ ನಲ್ಲಿ  ಕಾಣಿಸಿಕೊಂಡು ಪಡ್ಡೆ ಹೈಕಳ ಹೃದಯದ ಬಡಿತ ಹೆಚ್ಚಿಸಿದ್ದಳು. 
ಈ ಪಂಚಭಾಷ ತಾರೆ ಈಗ ಮತ್ತೊಂದು ಸಾಧನೆ ಮಾಡಿದ್ದಾಳೆ. ಆಕೆ ತನ್ನ ಟ್ವಿಟ್ಟರ್ ಅಕೌಂಟ್ ನಲ್ಲಿ ಮಾಡಿರುವ ಸಾಧನೆ ಬಗ್ಗೆ ಹೇಳೋಕೆ ನಾವು ಹೊರಟಿರುವುದು. ಪ್ರಿಯಾಮಣಿ ಟ್ವಿಟ್ಟರ್  ಪೇಜ್ ನಲ್ಲಿ 5,00,000 ಕ್ಕೂ ಅಧಿಕ ಮಂದಿ ಹಿಂಬಾಲಿಸುತ್ತಿದ್ದಾರೆ. ಆಕೆಗೆ ಈ ಸಂಗತಿ ಹೆಚ್ಚು ಖುಷಿ ಕೊಟ್ಟಿದೆ. 
 
ಈ ಬಗ್ಗೆ ಎಲ್ಲರಿಗೂ ಧನ್ಯವಾದ ಅರ್ಪಿಸಿ ತಾನು ಇನ್ನು ಹೆಚ್ಚು ಕಷ್ಟಪಟ್ಟು ದುಡಿದು ಎಲ್ಲರನ್ನು ಮನರಂಜಿಸುವುದಾಗಿ ಹೇಳಿದ್ದಾಳೆ. ಅದರ ಬಗ್ಗೆ ಆಕೆ ಟ್ವೀಟಿಸಿದ್ದು ಒಹ್ ಮೈ ಗಾಡ್ ..500k  ಫಾಲೋಯರ್ಸ್ . ಪ್ರತಿಯೊಬ್ಬರಿಗೂ ಧನ್ಯವಾದಗಳು. ನಾನು ಮತ್ತಷ್ಟು ಕಷ್ಟ ಪಟ್ಟು ಕೆಲಸ ಮಾಡ್ತೀನಿ ಮತ್ತು ನಿಮ್ಮನ್ನು  ರಂಜಿಸುತ್ತೇನೆ. ಲವ್ ಯು ಆಲ್ ಅಂದಿದ್ದಾಳೆ. 

ವೆಬ್ದುನಿಯಾವನ್ನು ಓದಿ