Select Your Language

Notifications

webdunia
webdunia
webdunia
webdunia

'ಗ್ರೇಟ್ ಗ್ರಾಂಡ್ ಮಸ್ತಿ' ಚಿತ್ರದಿಂದ ನಿಧಿ ಸುಬ್ಬಯ್ಯ ಔಟ್

'ಗ್ರೇಟ್ ಗ್ರಾಂಡ್ ಮಸ್ತಿ' ಚಿತ್ರದಿಂದ ನಿಧಿ ಸುಬ್ಬಯ್ಯ ಔಟ್
, ಶನಿವಾರ, 27 ಜೂನ್ 2015 (10:12 IST)
ನಿಧಿ ಸುಬ್ಬಯ್ಯ ಕನ್ನಡದ ಹುಡುಗಿ ಆಗಿದ್ದರೂ, ಈಗ ಬಾಲಿವುಡ್ ಕಡೆಗೆ ತಮ್ಮ ಚಿತ್ತ ನೆಟ್ಟಿದ್ದಾರೆ. ಅದರ ಅನ್ವಯ ಆಕೆಗೆ ಅವಕಾಶಗಳು ಸಿಗುತ್ತಿವೆ. ಆಕೆ ಗ್ರೇಟ್ ಗ್ರಾಂಡ್ ಮಸ್ತಿ ಎನ್ನುವ ಚಿತ್ರಕ್ಕೆ ಆಯ್ಕೆ ಆಗಿದ್ದರು. ಎಲ್ಲವೂ ಸರಿಯಾಗಿ ಇದ್ದಿದ್ದರೆ ಆಕೆಯೇ ಆ ಚಿತ್ರದ ನಾಯಕಿ ಆಗಿರುತ್ತಿದ್ದರು, ಆದರೆ ಹಾಗೆ ಆಗಿಲ್ಲ. ಸೆಕ್ಸ್ ಕಾಮಿಡಿ ಚಿತ್ರ  ಗ್ರೇಟ್ ಗ್ರಾಂಡ್ ಮಸ್ತಿ ಚಿತ್ರವು ಗ್ರಾಂಡ್ ಮಸ್ತಿ ಚಿತ್ರದ ಸೀಕ್ವಲ್ ಆಗಿದೆ. 
ಗ್ರೇಟ್ ಗ್ರಾಂಡ್ ಮಸ್ತಿ ಚಿತ್ರದಲ್ಲಿ ಮೂರು ತುಂಟ ಹುಡುಗರಾದ  ವಿವೇಕ್ ಒಬೆರಾಯ್ , ರಿತೇಶ್ ದೇಶ್ ಮುಖ್ ಮತ್ತು ಅಫ್ತಾಬ್ ಶಿವ್ದಾಸಾನಿ ನಟಿಸುತ್ತಿದ್ದಾರೆ. ಮೊದಲ ಚಿತ್ರದಲ್ಲಿ ಸಹ ಇವರೇ ಇದ್ದರು, ಈಗ ಹೀರೋಯಿನ್ ಗಳು ಮಾತ್ರ ಬದಲಾಗುತ್ತಿದ್ದಾರೆ. 
 
ಈ ಚಿತ್ರಕ್ಕೆ ನಿಧಿ ಕೇವಲ ಆಯ್ಕೆ ಆಗಿದ್ದಲ್ಲ ಆಕೆ ಒಂದಷ್ಟು ದೃಶ್ಯಗಳ ಚಿತ್ರೀಕರಣದಲ್ಲೂ ಸಹಿತ ಭಾಗವಹಿಸಿದ್ದರು. ಆದರೆ ಈಗ ಆ ಜಗದಲ್ಲಿ 2009ರಲ್ಲಿ ಮಿಸ್ ಇಂಡಿಯ ಆಗಿದ್ದ ಪೂಜಾ ಚೋಪ್ರ ಆಯ್ಕೆಯಾಗಿದ್ದಾರೆ. ನಿಧಿ ಜಾಗಕ್ಕೆ ಪೂಜಾ ಬಂದಿದ್ದು, ಈಗ ಆ ಚಿತ್ರದ ಚಿತ್ರೀಕರಣ ಆರಂಭವಾಗಿದೆ. ಪೂಜಾ  ಜಾಗಕ್ಕೆ ಮತ್ತೆ ಬೇರೆಯವರು ಬರದೆ ಇರಲಿ ಎನ್ನುವ ಆಶಯ ನಮ್ಮದು. 

Share this Story:

Follow Webdunia kannada