ನಿತ್ಯಾ ಪಾತ್ರ ನೋಡಿ ಕೆಟ್ಟ ಕಾಮೆಂಟ್ ಗೆ ಬೇಸರಗೊಂಡ ನಮ್ರತಾ ಗೌಡ ಹೇಳಿದ್ದೇನು

Krishnaveni K
ಶನಿವಾರ, 4 ಅಕ್ಟೋಬರ್ 2025 (14:26 IST)
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಕರ್ಣ ಧಾರವಾಹಿಯಲ್ಲಿ ನಿತ್ಯಾ ಪಾತ್ರ ಮಾಡುತ್ತಿರುವ ನಟಿ ನಮ್ರತಾ ಗೌಡ ಸೋಷಿಯಲ್ ಮೀಡಿಯಾದಲ್ಲಿ ಬಂದ ನೆಗೆಟಿವ್ ಕಾಮೆಂಟ್ ಗೆ ಬೇಸರಗೊಂಡು ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

ಕರ್ಣ ಧಾರವಾಹಿಯಲ್ಲಿ ಈಗ ಬಿಗ್ ಟ್ವಿಸ್ಟ್ ಬರುತ್ತಿದೆ. ನಿಧಿ ಪ್ರೀತಿಸಿದ ಹುಡುಗ ಕರ್ಣನನ್ನು ಆಕೆಯ ಅಕ್ಕ ಅನಿರೀಕ್ಷಿತ ತಿರುವಿನಲ್ಲಿ ಮದುವೆಯಾಗುತ್ತಾಳೆ. ಈ ಪ್ರೋಮೋಗಳು ಈಗಾಗಲೇ ಹೊರಬಿದ್ದಿದೆ.

ನಿತ್ಯಾ ಪಾತ್ರವನ್ನು ನಮ್ರತಾ ಮಾಡುತ್ತಿದ್ದು ಆಕೆ ಕರ್ಣನನ್ನು ಮದುವೆಯಾಗುತ್ತಿರುವುದು ವೀಕ್ಷಕರಿಗೆ ತೀರಾ ಬೇಸರ ತರಿಸಿದೆ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ನಮ್ರತಾ ಗೌಡರನ್ನು ಹಿಗ್ಗಾ ಮುಗ್ಗಾ ಬೈಯುತ್ತಿದ್ದಾರೆ. ಇದು ಅವರಿಗೆ ಬೇಸರ ತರಿಸಿದೆ.

ಈ ಬಗ್ಗೆ ಅವರು ಪೋಸ್ಟ್ ಮಾಡಿದ್ದು ಸುಮಾರು 23 ವರ್ಷಗಳ ಸುದೀರ್ಘ ನಟನೆಯ ಅನುಭವದಲ್ಲಿ ಸಾಕಷ್ಟು ವಿಭಿನ್ನ ಪಾತ್ರಗಳು.. ಕೊಂಚ ಬ್ರೇಕ್ ನ ನಂತರ ಕೇಳಿದ ಪಾತ್ರವೇ ನಿತ್ಯ. ಕತೆ ಮತ್ತು ಪಾತ್ರದ ಆಳ ಕೇಳಿದಾಗ ನನಗೆ ತುಂಬಾ ಹಿಡಿಸಿದವಳು ಬಲಿಷ್ಠಳು, ಸ್ವತಂತ್ರಗಳು. ಸದಾ ತನಗಿಂದ ಇತರರ ಅಗತ್ಯಗಳನ್ನು ಮೊದಲು ಯೋಚಿಸುವವಳು. ಇಷ್ಟೆಲ್ಲಾ ಲೇಯರ್ಸ್ ಗಳನ್ನು ಒಳಗೊಂಡಿರುವ ಪಾತ್ರವನ್ನು ಒಲ್ಲೆ ಎನ್ನಲು ಮನಸ್ಸಾಗಲಿಲ್ಲ.. ಇತ್ತೀಚೆಗಿನ ಪ್ರೋಮೋ ಕಂಡು ನಿತ್ಯಾಳ ಮೇಲೆ ನೀವು ತೋರಿಸುತ್ತಿರುವ ಧ್ವೇಷ ಕಂಡು ಬೇಸರವುಂಟಾಯಿತು. ಇಟ್ಸ್ ಓಕೆ. ನಿತ್ಯ ನಾನು ಪೋಷಿಸಿದ ಪಾತ್ರ, ತುಂಬಾ ಪ್ರೀತಿಯಿಂದ ಒಪ್ಪಿದ ಪಾತ್ರ. ಅವಳೊಂದಿಗೆ ನಾನಿದ್ದೇನೆ. ಅವಳನ್ನು ನನ್ನನ್ನು ಪ್ರೀತಿಸುವ ಅಭಿಮಾನಿಗಳು ಸದಾ ನಮ್ಮೊಂದಿಗೆ ಇರುವರು ಎಂದು ಭಾವಿಸುವೆ’ ಎಂದು ಬೇಸರಿಂದಲೇ ಬರೆದುಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರಕ್ಷಿತಾಳ ಭಾಷೆ ಬಗ್ಗೆ ಮಾತನಾಡುವ ಯಾವ ಹಕ್ಕು ನಿಮಗಿಲ್ಲ

ಧರ್ಮೇಂದ್ರ ಸಾವಿನ ವದಂತಿ ಬೆನ್ನಲ್ಲೇ ಮಗಳಿಂದ ಸ್ಪಷ್ಟನೆ

ಇದೊಂದು ಭಯಾನಕ ಘಟನೆ: ದೆಹಲಿ ಸ್ಫೋಟಕ್ಕೆ ಅಲ್ಲು ಅರ್ಜುನ್ ಸಂತಾಪ

ದರ್ಶನ್ ಜೈಲಿನಲ್ಲಿ, ಬರ್ತಡೇ ದಿನ ವಿಜಯಲಕ್ಷ್ಮಿ ಏನ್‌ ಮಾಡಿದ್ರೂ ಗೊತ್ತಾ

BBK12: ಕಿಚ್ಚ ಸುದೀಪ್ ಬಗ್ಗೆಯೇ ಗಂಭೀರ ಆರೋಪ ಮಾಡಿದ ಧ್ರುವಂತ್

ಮುಂದಿನ ಸುದ್ದಿ
Show comments