Select Your Language

Notifications

webdunia
webdunia
webdunia
webdunia

ಕನ್ನಡದಲ್ಲಿ ಸೆಟ್ಟೇರುತ್ತಿದೆ ಮಲ್ಟಿ ಹೀರೋಯಿನ್ ಗಳ ಸಿನಿಮಾ

ಕನ್ನಡದಲ್ಲಿ ಸೆಟ್ಟೇರುತ್ತಿದೆ ಮಲ್ಟಿ ಹೀರೋಯಿನ್ ಗಳ ಸಿನಿಮಾ
, ಶುಕ್ರವಾರ, 12 ಫೆಬ್ರವರಿ 2016 (11:33 IST)
ಇದುವರೆಗೂ ನೀವು ಕನ್ನಡದಲ್ಲಿ ಮಲ್ಟಿ ಸ್ಟಾರರ್ ಸಿನಿಮಾಗಳನ್ನು ನೋಡಿದ್ದೀರಾ. ಶಿವರಾಜ್ ಕುಮಾ ರವಿಚಂದ್ರನ್, ರಮೇಶ್,ರಾಮ್ ಕುಮಾರ್, ಶಶಿಕುಮಾರ್, ವಿಷ್ಣುವರ್ಧನ್ ಅಂಬರೀಶ್, ಸುದೀಪ್ ಶಿವರಾಜ್ ಕುಮಾರ್ ಹೀಗೆ ಅನೇಕ ತಾರೆಯರು ಒಂದೇ ಸಿನಿಮಾದಲ್ಲಿ ಕಾಣಿಸಿಕೊಂಡ ಅನೇಕ ಸಿನಿಮಾಗಳು ಕನ್ನಡದಲ್ಲಿ ಬಂದು ಹೋಗಿವೆ. ಇದೀಗ ಇದೇ ರೀತಿ ಮೂವರು ಹೀರೋಯಿನ್ ಗಳು ಇರುವ ಸಿನಿಮಾವೊಂದು ಕನ್ನಡದಲ್ಲಿ ತಯಾರಾಗುತ್ತಿದೆ.

ಪ್ರದೀಪ್ ವರ್ಮಾ ಎನ್ನುವವರು ನಿರ್ದೇಶಿಸುತ್ತಿರುವ ಊರ್ವಿ ಸಿನಿಮಾದಲ್ಲಿ ಮೂವರು ನಾಯಕಿಯರು ಜೊತೆಯಾಗಿ ನಟಿಸುತ್ತಿದ್ದಾರೆ. ಲೂಸಿಯಾ ಸಿನಿಮಾ ಖ್ಯಾತಿಯ ಶೃತಿ ಹರಿಹರನ್, ಸಿಂಪಸ್ ಸಿಂಪಲ್ ಹುಡುಗಿ ಶ್ವೇತಾ ಶ್ರೀವಾತ್ಸವ್,ಮಾಸ್ಟರ್ ಪೀಸ್ ಸಿನಿಮಾ ಖ್ಯಾತಿಯ ಶ್ರದ್ಧಾ ಶ್ರೀನಾಥ್ ಈ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಅಂದ್ಹಾಗೆ ಊರ್ವಿ ಸಿನಿಮಾ ಮಹಿಳೆಯರ ಜೀವನದ ಕುರಿತು ಬೆಳಕು ಚೆಲ್ಲುವ ಸಿನಿಮಾವಂತೆ. ಅಲ್ಲದೇ ಕನ್ನಡದಲ್ಲಿ ಇದುವೆರೆಗೂ ಈ ರೀತಿಯ ಯಾವುದೇ ಸಿನಿಮಾಗಳು ಬಂದಿಲ್ಲವಂತೆ. ಅಂತಹ ಹೊಸ ಪ್ರಯತ್ನಕ್ಕೆ ಪ್ರದೀಪ್ ಕೈ ಹಾಕಿದ್ದಾರೆ.
 
ಇನ್ನು ಇಂತಹದ್ದೊಂದು ಸಿನಿಮಾದಲ್ಲಿ ಅಭಿನಯಿಸುತ್ತಿರೋದಕ್ಕೆ ನಟಿ ಶೃತಿ ಹರಿಹರನ್ ಸಂತಸ ವ್ಯಕ್ತಪಡಿಸಿದ್ದಾರೆ. ಕನ್ನಡದಲ್ಲಿ ಇಂತಹ ಸಿನಿಮಾಗಳು ಬರೋದು ಅಪರೂಪ. ಪ್ರದೀಪ್ ಒಂದು ಹೊಸ ಸಾಹಸಕ್ಕೆ ಮುಂದಾಗಿದ್ದಾರೆ. ನಟಿಯರನ್ನು ಬಿಟ್ಟರೆ ಇಲ್ಲಿ ಎಲ್ಲಾ ಪುರುಷರೇ ಹಾಗಾಗಿ ಸಿನಿಮಾದ ಬಗ್ಗೆ ನನಗೆ ಸಾಕಷ್ಟು ಕುತೂಹಲಗಳಿವೆ ಅಂತಾ ಅವರು ಹೇಳಿದ್ದಾರೆ.

Share this Story:

Follow Webdunia kannada