Select Your Language

Notifications

webdunia
webdunia
webdunia
webdunia

ಕೋಮಲ್ ಭೂತ ಇಂದು ನಮೋ ಭೂತಾತ್ಮ ಅಂತ ಎಲ್ಲರನ್ನು ಕಾಡುತ್ತದೆ ..

ಕೋಮಲ್ ಭೂತ ಇಂದು ನಮೋ ಭೂತಾತ್ಮ ಅಂತ  ಎಲ್ಲರನ್ನು ಕಾಡುತ್ತದೆ ..
, ಶುಕ್ರವಾರ, 28 ನವೆಂಬರ್ 2014 (11:03 IST)
ಇಂದು ಕೋಮಲ್ ಕುಮಾರ್ ಅವರ ಅಭಿನಯದ ಬಹು ನಿರೀಕ್ಷಿತ  ಚಿತ್ರ ನಮೋ ಭೂತಾತ್ಮ ಬಿಡುಗಡೆ ಆಗುತ್ತಿದೆ. ಈ ಚಿತ್ರದಲ್ಲಿ ಅವರು ಆಸ್ತಿಗಾಗಿ ಒದ್ದಾಡುವ ಯುವಕನ ಪಾತ್ರಧಾರಿಯಾಗಿದ್ದಾರೆ. ಹಾಸ್ಯ ಪ್ರಧಾನ ಪಾತ್ರಗಳಲ್ಲಿ ನಟಿಸಿರುವ ಕೋಮಲ್ ಅವರು ಮೊಟ್ಟ ಮೊದಲ ಬಾರಿಗೆ ಹಾರರ್ ಕಾಮಿಡಿ ಚಿತ್ರದಲ್ಲಿ ನಟಿಸಿದ್ದಾರೆ. 

ಇಂತಹ ಚಿತ್ರಗಳು ಕೇವಲ ಹಾಲಿವುಡ್ ನಲ್ಲಿ ಕಂಡು ಬರುತ್ತದೆ. ಆದರೆ ಕನ್ನಡದಲ್ಲಿ ಈ ರೀತಿಯ ಹಾರರ್ ಕಾಮಿಡಿ ಚಿತ್ರಗಳು ಬಂದಿಲ್ಲ ಎಂದಿರುವ ಕೋಮಲ್ ಅವರ ಜೊತೆ ನಾಲ್ಕು ಹೀರೋಯಿನ್ ಗಳು ನಟಿಸಿದ್ದಾರೆ. 
 
ಐಶ್ವರ್ಯ ಮೆನನ್, ಅನಶ್ವರ  ಕುಮಾರ್,  ಗಾಯತ್ರಿ ಅಯ್ಯರ್, ನಿಖಿತ ತುಕ್ರಾಲ್  ಇವರೇ ಆ ನಾಲ್ಕು ಜನರು. ಈ ಚಿತ್ರದಲ್ಲಿ ದಲೇರ್ ಮೆಹಂದಿ ಮತ್ತು ಕೋಮಲ್ ಕುಮಾರ್ ಹಾಡಿರುವ ಹಾಡುಗಳು ಸಿಕ್ಕಾಪಟ್ಟೆ ಜನಪ್ರಿಯವಾಗಿದೆ. ಕೊರಿಯಾಗ್ರಾಫರ್ ಮುರಳಿ ಅವರು ಮೊಟ್ಟ ಮೊದಲ ಬಾರಿಗೆ ನಿರ್ದೇಶಕರ ಸ್ಥಾನ ಹಿಡಿದ್ದಾರೆ. ಈ ಚಿತ್ರದಲ್ಲಿ ಕೋಮಲ್ ಅವರು ಭಿನ್ನ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಭೂತ ಇದೆಯೇ ಇಲ್ಲವೇ ಎನ್ನುವುದರ ಅಡಿಯಲ್ಲಿ   ಚಿತ್ರ ನಿರ್ಮಿತ ಗೊಂಡಿದೆ. 

Share this Story:

Follow Webdunia kannada