Select Your Language

Notifications

webdunia
webdunia
webdunia
webdunia

50ನೇ ಸಿನಿಮಾದ ಖುಷಿಯಲ್ಲಿರುವ ನಟ ರವಿಶಂಕರ್

50ನೇ ಸಿನಿಮಾದ ಖುಷಿಯಲ್ಲಿರುವ ನಟ ರವಿಶಂಕರ್
, ಗುರುವಾರ, 23 ಜೂನ್ 2016 (09:52 IST)
2012ರಲ್ಲಿ ರಿಲೀಸ್ ಆದ ಸುದೀಪ್ ಅಭಿನಯದ ಕೆಂಪೇಗೌಡ ಸಿನಿಮಾ ನೋಡಿದವರಿಗೆಲ್ಲಾ ಇಂದಿಗೂ ನೆನಪಿನಲ್ಲಿ ಉಳಿದಿರುವ ಪಾತ್ರಗಳಲ್ಲಿ ಒಂದು ಆರ್ಮುಗಂ. ರವಿಶಂಕರ್ ಅವರ ಅದ್ಭುತ ಅಭಿನಯವನ್ನು ಯಾರೂ ಕೂಡ ಮರೆಯೋದಕ್ಕೆ ಸಾಧ್ಯಾನೇ ಇಲ್ಲ. ಅಷ್ಟೊಂದು ಸುಂದರವಾಗಿ ಅಭಿನಯಿಸಿದ್ದರು ರವಿ. 

ಅಲ್ಲಿಂದ ಆರಂಭವಾದ ರವಿ ಪಯಣ ಇಲ್ಲಿವರೆಗೂ ಹಾಗೇ ಮುಂದುರೆದಿದೆ.ಅಂದ್ಹಾಗೆ ಸುದೀಪ್ ಅವರ ಕೆಂಪೇಗೌಡ ಸಿನಿಮಾದ ಮೂಲಕ ಪರಿಚಯವಾದ ರವಿಶಂಕರ್ ಅವರು ಇದೀಗ ಸುದೀಪ್ ನಿರ್ಮಾಣದ ಜಿಗರ್ ಥಂಡ ಸಿನಿಮಾದಲ್ಲೂ ಅಭಿನಯಿಸಿದ್ದಾರೆ. ಖುಷಿಯ ವಿಚಾರ ಅಂದ್ರೆ ಇದು ರವಿಶಂಕರ್ ಅವರ 50ನೇ ಸಿನಿಮಾ.ಅಂದ್ಹಾಗೆ ಈಗಾಗಲೇ ರವಿಶಂಕರ್ ಸ್ಯಾಂಡ್ಲಲ್ ವುಡ್ ನ ಖ್ಯಾತ ನಾಮ ನಟರೊಂದಿಗೆ ಅಭಿನಯಿಸಿದ್ದಾರೆ. ಪುನೀತ್ ರಾಜ್ ಕುಮಾರ್,ಗಣೇಶ್, ಯಶ್ ಮುಂತಾದವರೊಂದಿಗೆ ತೆರೆ ಹಂಚಿಕೊಂಡಿರುವ ರವಿಶಂಕರ್ ಅವರಿಗೆ ಸುದೀಪ್ ಅವರೇ ನಿರ್ಮಾಣ ಮಾಡಿದ ಜಿಗರ್ ಥಂಡ್ ಸಿನಿಮಾದಲ್ಲಿ ಅಭಿನಯಿಸಿರೋದು ತುಂಬಾನೇ ಖುಷಿಯಾಗಿದೆಯಂತೆ. ಈ ಸಿನಿಮಾ ಇದೇ ವಾರ ರಿಲೀಸ್ ಆಗುತ್ತಿದೆ.
 
ಇನ್ನು  ರವಿಶಂಕರ್ ಅವರು ಈ ಸಿನಿಮಾವನ್ನು ಎರಡು ವರ್ಷಗಳ ಹಿಂದೇನೇ ತಮಿಳಿನಲ್ಲಿ ನೋಡಿದ್ರಂತೆ. ಇನ್ನು ಇದೇ ಸಿನಿಮಾವನ್ನು ತಾನು ಕನ್ನಡದಲ್ಲಿ ಮಾಡುತ್ತಿರೋದಾಗಿ ಸುದೀಪ್ ಅವರು ಹೇಳಿ ಅವರನ್ನು ಮಾತುಕತೆ ಗಾಗಿ ಕರೆದ್ರಂತೆ. ಈ ವೇಳೆ ಸುದೀಪ್ ನಾನು ಈ ಪಾತ್ರವನ್ನು ನೀವೇ ಮಾಡಬೇಕು ಅಂತಾ ಅಂದುಕೊಂಡಿದ್ದೇನೆ. ನೀವು ಮಾಡಿದ್ರಷ್ಟೇ ಈ ಪಾತ್ರ ತೆರೆ ಮೇಲೆ ಅದ್ಭುತವಾಗಿ ಮೂಡಿ ಬರುತ್ತೆ ಅಂತಾ ಹೇಳಿದ್ರಂತೆ. ಇದನ್ನು ಕೇಳಿ ರವಿಶಂಕರ್ ಅವ ಖುಷಿಗೆ ಪಾರವೇ ಇರಲಿಲ್ಲವಂತೆ. ಇದು ನನ್ನ ಮನೆಯಲ್ಲಿ ಹಬ್ಬದ ಸಂಭ್ರಮವನ್ನು ತಂದಿತ್ತು ಅಂತಾ ರವಿಶಂಕರ್ ಹೇಳಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ದಾಖಲೆಗೆ ಸಾಕ್ಷಿಯಾಗಲಿದೆ ದೊಡ್ಮನೆ ಹುಡುಗ ಸಿನಿಮಾ