Select Your Language

Notifications

webdunia
webdunia
webdunia
webdunia

ಕ್ರೇಜಿಬಾಯ್ ಸಿನಿಮಾದ ಆಡಿಯೋ ಲಾಂಚ್

ಕ್ರೇಜಿಬಾಯ್ ಸಿನಿಮಾದ ಆಡಿಯೋ ಲಾಂಚ್
, ಗುರುವಾರ, 7 ಜುಲೈ 2016 (08:35 IST)
ಈ ಹಿಂದೆ ಆಕಾಶ್,ಅರಸು,ಮೆರವಣಿಗೆ ಮುಂತಾದ ಹಿಟ್ ಸಿನಿಮಾಗಳನ್ನು ಮಾಡಿರುವ ನಿರ್ದೇಶಕ ಮಹೇಶ್ ಬಾಬು ಅವರು ಇದೀಗ ಮತ್ತೊಂದು ಸಿನಿಮಾ ಮಾಡಿದ್ದಾರೆ. ಹೊಸ ಪ್ರತಿಭೆಗಳನ್ನು ಇಟ್ಟುಕೊಂಡು ಕ್ರೇಜಿಬಾಯ್ ಅನ್ನೋ ಸಿನಿಮಾ ಮಾಡಿದ್ದಾರೆ. ಮೊನ್ನೆ ಈ ಸಿನಿಮಾದ ಆಡಿಯೋ ಲಾಂಚ್ ಆಯ್ತು.

ಅಂದ್ಹಾಗೆ ದಿಲೀಪ್‌ ಪ್ರಕಾಶ್‌ ಎಂಬ ಯುವನಟ ನಾಯಕನಾಗಿ ಅಭಿನಯಿಸುತ್ತಿರುವ ಸಿನಿಮಾ ಕ್ರೇಜಿಬಾಯ್. ಇತ್ತೀಚೆಗೆ ಈ ಸಿನಿಮಾದ ಆಡಿಯೋ ಲಾಂಚ್ ನ್ನು ಅದ್ಧೂರಿಯಾಗಿ ಮಾಡಲಾಯ್ತು. ಕಾಲಿವುಡ್ ನ ಖ್ಯಾತ ನಟ ಸಂತಾನಂ ಅವರು ಸಿನಿಮಾದ ಆಡಿಯೋ ಲಾಂಚ್ ಮಾಡಿದ್ರು. ಇದರ ಜೊತೆಗೆ ಸಿನಿಮಾದ ಟ್ರೇಲರ್ ನ್ನು ಕಬೂಡ ರಿಲೀಸ್ ಮಾಡಲಾಯ್ತು. ಅಂದ್ಹಾಗೆ ಕ್ರೇಜಿಬಾಯ್ ಸಿನಿಮಾ ಲವ್ , ಆಕ್ಷನ್ ಹಾಗೇ ಫ್ಯಾಮಿಲಿ ಸೆಂಟಿಮೆಂಟ್ ಇರುವ ಸಿನಿಮಾವಾಗಿದೆ.ಇನ್ನು ಚಿತ್ರಕ್ಕೆ ಕಥೆ ಬರೆದಿರುವುದು ಸೆಂಟಿಮೆಂಟ್‌ ಚಿತ್ರಗಳಿಗೆ ಕಥೆ ಬರೆದು ಹೆಸರು ಮಾಡಿರುವ ಅಜಯ್‌ ಕುಮಾರ್‌. 
 
ಸಿನಿಮಾದಲ್ಲಿ ದಿಲೀಪ್ ಪ್ರಕಾಶ್ ಅವರಿಗೆ ನಾಯಕಿಯಾಗಿ ಅಶಿಕಾ ಅವರು ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ಹಿರಿಯ ನಟ ಅನಂತ್ ನಾಗ್ , ರಂಗಾಯಣ ರಘು, ಸಾಧುಕೋಕಿಲ, ರವಿಶಂಕರ್ ಮುಂತಾದವರು ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಡಿ.ಪಿ.ಎ ಫಿಲ್ಮ್  ನಡಿ ಚಂದ್ರು ಗೋವಿಂದರಾಜ್‌ ನಿರ್ಮಿಸುತ್ತಿದ್ದು, ಚಿತ್ರಕ್ಕೆ ಜೆಸ್ಸಿಗಿಫ್ಟ್ ಸಂಗೀತ, ಶೇಖರ್‌ ಚಂದ್ರ ಛಾಯಾಗ್ರಹಣವಿದೆ.  

Share this Story:

Follow Webdunia kannada

ಮುಂದಿನ ಸುದ್ದಿ

ಕಲೆಕ್ಷನ್ ನಲ್ಲಿ ದಾಖಲೆ ನಿರ್ಮಿಸಿದ ಜೂಮ್ ಸಿನಿಮಾ