BBK12: ಕಿಚ್ಚ ಸುದೀಪ್ ಬಗ್ಗೆಯೇ ಗಂಭೀರ ಆರೋಪ ಮಾಡಿದ ಧ್ರುವಂತ್

Krishnaveni K
ಮಂಗಳವಾರ, 11 ನವೆಂಬರ್ 2025 (12:26 IST)
ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಕಿಚ್ಚ ಸುದೀಪ್ ಮಾತಿಗೆ ಒಂದು ತೂಕವಿರುತ್ತದೆ. ಅವರ ಮಾತು ಎಲ್ಲಾ ಸ್ಪರ್ಧಿಗಳೂ ಕೇಳುತ್ತಾರೆ. ಆದರೆ ಈಗ ಕಿಚ್ಚ ಸುದೀಪ್ ಬಗ್ಗೆಯೇ ಸ್ಪರ್ಧಿ ಧ್ರುವಂತ್ ಗಂಭೀರ ಆರೋಪ ಮಾಡಿದ್ದು ವಿಡಿಯೋ ವೈರಲ್ ಆಗಿದೆ.

ಕರಾವಳಿ ಹುಡುಗಿ ರಕ್ಷಿತಾ ಶೆಟ್ಟಿ ಮೇಲೆ ಧ್ರುವಂತ್ ಸಿಕ್ಕಾಪಟ್ಟೆ ಸಿಟ್ಟಾಗಿದ್ದಾರೆ. ಆ ಸಿಟ್ಟನ್ನು ಸಹ ಸ್ಪರ್ಧಿಯ ಜೊತೆ ಹಂಚಿಕೊಳ್ಳುವಾಗ ಕಿಚ್ಚ ಸುದೀಪ್ ಬಗ್ಗೆಯೇ ಗಂಭೀರ ಆರೋಪವನ್ನು ಧ್ರುವಂತ್ ಮಾಡಿದ್ದಾರೆ. ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.

ರಕ್ಷಿತಾ ಮಾತಿನ ಶೈಲಿ ಧ್ರುವಂತ್ ಗೆ ಇಷ್ಟವಾಗುತ್ತಿಲ್ಲ. ಆದರೆ ಇದನ್ನು ಕಿಚ್ಚ ಸುದೀಪ್ ತಳ್ಳಿ ಹಾಕಿದ್ದಾರೆ. ನಮಗೆ ರಕ್ಷಿತಾ ಭಾಷೆ ಯಾವುದೇ ಸಮಸ್ಯೆಯಲ್ಲ ಎಂದಿದ್ದರು. ಇದೇ ಕಾರಣಕ್ಕೆ ಧ್ರುವಂತ್ ಕಿಚ್ಚನ ಮೇಲೆ ಆರೋಪ ಮಾಡಿದ್ದಾರೆ.

‘ರಕ್ಷಿತಾ ವಿಷಯಕ್ಕೆ ಬಂದಾಗ ನನಗೆ ಮಾತನಾಡಲು ಸ್ಪೇಸ್ ಕೊಡುವವರೆಗೂ ಮಾತನಾಡಲ್ಲ. ಸುದೀಪ್ ಅವರು ನನಗೆ ಮಾತನಾಡಲು ಸ್ಪೇಸ್ ಕೊಡಲ್ಲ. ನಾನು ಮಾತಾಡ್ತೀನಿ ಅಂತ ಕೊಡಲ್ಲ’ ಎಂದು ಆರೋಪ ಮಾಡಿದ್ದಾರೆ. ಇದಕ್ಕೆ ನೆಟ್ಟಿಗರೂ ಗರಂ ಆಗಿದ್ದಾರೆ. ಈ ಎಲ್ಲಾ ಬೆಳವಣಿಗೆ ಬಗ್ಗೆ ವಾರಂತ್ಯಕ್ಕೆ ಕಿಚ್ಚನ ಪ್ರತಿಕ್ರಿಯೆ ಹೇಗಿರುತ್ತದೆ ನೋಡಬೇಕಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರಕ್ಷಿತಾಳ ಭಾಷೆ ಬಗ್ಗೆ ಮಾತನಾಡುವ ಯಾವ ಹಕ್ಕು ನಿಮಗಿಲ್ಲ

ಧರ್ಮೇಂದ್ರ ಸಾವಿನ ವದಂತಿ ಬೆನ್ನಲ್ಲೇ ಮಗಳಿಂದ ಸ್ಪಷ್ಟನೆ

ಇದೊಂದು ಭಯಾನಕ ಘಟನೆ: ದೆಹಲಿ ಸ್ಫೋಟಕ್ಕೆ ಅಲ್ಲು ಅರ್ಜುನ್ ಸಂತಾಪ

ದರ್ಶನ್ ಜೈಲಿನಲ್ಲಿ, ಬರ್ತಡೇ ದಿನ ವಿಜಯಲಕ್ಷ್ಮಿ ಏನ್‌ ಮಾಡಿದ್ರೂ ಗೊತ್ತಾ

BBK12: ಕಿಚ್ಚ ಸುದೀಪ್ ಬಗ್ಗೆಯೇ ಗಂಭೀರ ಆರೋಪ ಮಾಡಿದ ಧ್ರುವಂತ್

ಮುಂದಿನ ಸುದ್ದಿ
Show comments