BBK12: ಜಾನ್ವಿ ಡಿವೋರ್ಸ್ ಬಗ್ಗೆ ಶಾಕಿಂಗ್ ವಿಚಾರ ಹೊರಹಾಕಿದ ಮಾಜಿ ಪತಿ ಕಾರ್ತಿಕ್

Krishnaveni K
ಭಾನುವಾರ, 5 ಅಕ್ಟೋಬರ್ 2025 (10:15 IST)
Photo Credit: Social media
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ ಸ್ಪರ್ಧಿಯಾಗಿರುವ ಆಂಕರ್ ಜಾನ್ವಿ ತನ್ನ ವಿಚ್ಛೇದನಕ್ಕೆ ಕಾರಣವೇನೆಂದು ಬಹಿರಂಗಪಡಿಸಿದ್ದರು. ಇದೀಗ ಮಾಜಿ ಪತಿ ಕಾರ್ತಿಕ್ ಇದಕ್ಕೆ ತಿರುಗೇಟು ನೀಡಿದ್ದಾರೆ.

ಅಶ್ವವೇಗ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ಮಾಜಿ ಪತಿ ಕಾರ್ತಿಕ್ ಬಿಗ್ ಬಾಸ್ ಸ್ಪರ್ಧಿ ಜಾನ್ವಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ನನ್ನ ಎದುರಲ್ಲೇ ಪರಪುರುಷನಿಗೆ ಖಾಸಗಿ ಫೋಟೋಗಳನ್ನು ಕಳುಹಿಸಿದರೆ ನಾನು ಹೇಗೆ ಸುಮ್ಮನಿರಲಿ ಎಂದು ಕೇಳಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಜಾನ್ವಿ ಇತ್ತೀಚೆಗೆ ನನ್ನ ಗಂಡ ಡಿವೋರ್ಸ್ ಗೆ ಮೊದಲೇ ಬೇರೊಂದು ಮದುವೆಯಾಗಿದ್ದರು, ಅವರಿಗೆ ಮಗುವೂ ಆಗಿತ್ತು. ಹೀಗಾಗಿ ಹೊಂದಾಣಿಕೆ ಸಾಧ್ಯವಿಲ್ಲ ಎಂದು ಬಿಟ್ಟೆ ಎಂದಿದ್ದರು.

ಜಾನ್ವಿ ಆರೋಪಗಳಿಗೆ ಈಗ ಕಾರ್ತಿಕ್ ತಿರುಗೇಟು ಕೊಟ್ಟಿದ್ದಾರೆ. ‘ಆಕೆ ಒಂದು ಹೆಣ್ಣು ಎಂಬ ಕಾರಣಕ್ಕೆ ಇಷ್ಟು ದಿನ ಸುಮ್ಮನಿದ್ದೆ. ಆದರೆ ನನಗೂ ಕುಟುಂಬವಿದೆ. ನಾನು ವಿಚ್ಛೇದನದ ಬಳಿಕವೇ ಇನ್ನೊಂದು ಮದುವೆಯಾಗಿದ್ದು. ಆಕೆಯ ಹೇಳಿಕೆಗಳು ನನ್ನ ಕುಟುಂಬಕ್ಕೆ ಡಿಸ್ಟರ್ಬ್ ಮಾಡುತ್ತದೆ’ ಎಂದಿದ್ದಾರೆ.

‘ಮದುವೆಯಾಗಿ ಎರಡು ವರ್ಷ ಎಲ್ಲವೂ ಚೆನ್ನಾಗಿತ್ತು. ಮೊದಲು ಬಾಡಿಗೆ ಮನೆ ಮಾಡೋಣ ಎಂದಳು. ಹಾಗಾಗಿ ಬಾಡಿಗೆ ಮನೆಗೆ ಶಿಫ್ಟ್ ಆದೆವು. ಬಳಕ ಅಪಾರ್ಟ್ ಮೆಂಟ್ ಮಾಡೋಣ ಎಂದಳು. ಅಪಾರ್ಟ್ ಮೆಂಟ್ ಕೂಡಾ ಮಾಡಿದ್ವಿ. ಅವಳು ಬರೀ ಬೇರೆ ಪುರುಷರೊಂದಿಗೆ ಮಾತನಾಡುವುದು ಮಾತ್ರವಲ್ಲ, ಬೇರೆಯವರಿಗೆ ಖಾಸಗಿ ಫೋಟೋಗಳನ್ನು ಶೇರ್ ಮಾಡುತ್ತಿದ್ದಳು. ಎರಡು ವರ್ಷ ನಾವು ದೂರವಿದ್ದೆವು. ಕೊನೆಗೆ ವಿಚ್ಛೇದನ ಪಡೆದುಕೊಂಡೆವು. ಆಕೆ ಬೇರೆ ವ್ಯಕ್ತಿ ಜೊತೆ ಮಾತನಾಡುವುದನ್ನು ನೋಡುತ್ತಾ ಸುಮ್ಮನೆ ಕೂರಲು ಸಾಧ್ಯವಿಲ್ಲ. ಹೀಗಾಗಿ ಕುಡಿದು ಬಂದು ಹೊಡೆದಿದ್ದೇನೆ’ ಎಂಬಿತ್ಯಾದಿ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಪ್ರೇಮಕಾವ್ಯ ಸೀರಿಯಲ್ ನಟಿ ವೈಷ್ಣವಿ ಎದೆ ದರ್ಶನಕ್ಕೆ ಒಳ್ಳೆ ಡ್ರೆಸ್ ತಗೊಳ್ಳಮ್ಮ ಎಂದು ನೆಟ್ಟಿಗರ ಟ್ರೋಲ್ video

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಟ ಧರ್ಮೇಂದ್ರ: ಅಭಿಮಾನಿಗಳ ಹಾರೈಕೆ ಫಲಿಸಿತು

ಪ್ರಜ್ಞೆ ತಪ್ಪಿ ಕುಸಿದುಬಿದ್ದ ಬಾಲಿವುಡ್ ನಟ ಗೋವಿಂದ, ಆಸ್ಪತ್ರೆಗೆ ದಾಖಲು

ರಕ್ಷಿತಾಳ ಭಾಷೆ ಬಗ್ಗೆ ಮಾತನಾಡುವ ಯಾವ ಹಕ್ಕು ನಿಮಗಿಲ್ಲ

ಧರ್ಮೇಂದ್ರ ಸಾವಿನ ವದಂತಿ ಬೆನ್ನಲ್ಲೇ ಮಗಳಿಂದ ಸ್ಪಷ್ಟನೆ

ಮುಂದಿನ ಸುದ್ದಿ
Show comments