ಬೆಂಗಳೂರು: ಖ್ಯಾತ ಮಲಯಾಳಂ ನಟ ದಿಲೀಪ್‌ಕುಮಾರ್ ಅವರು ಬಹುಭಾಷಾ ನಟಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪವನ್ನ ಹೊತ್ತಿದ್ದರು.
ಈ ಸಂಬಂಧ ಎಂಟು ವರ್ಷಗಳ ಹಿಂದೆ ಜೈಲು ಕಂಬಿಯನ್ನ ಎಣಿಸಿದ್ದರು. ಇದೀಗ ಈ ಪ್ರಕರಣದಲ್ಲಿ ನಿರ್ದೋಷಿ ಅಂತಾ ತೀರ್ಪು ಹೊರಬಿದ್ದಿದೆ. ನಟನಿಗೆ ಅಂಟಿದ್ದ ಕಳಂಕದಿಂದ ಮುಕ್ತಿ ಹೊಂದಿದ್ದಾರೆ.
ಸುಮಾರು 8 ವರ್ಷಗಳ ನಡೆದ ಈ ಪ್ರಕರಣದಲ್ಲಿ ನಟ ದಿಲೀಪ್ ಅವರನ್ನ ನಿರ್ದೋಷಿ ಎಂದು ಆದೇಶ ಹೊರಬಿದ್ದಿದೆ. ಈ ಆದೇಶ ಹೊರ ಬೀಳುವ ಮುನ್ನ ವಿವಾದಾದ್ಮಕ ಗಾಯಕಿ ಚಿನ್ಮಯಿ ಶ್ರೀಪಾದ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದರು.
ಪೋಸ್ಟ್‌ನಲ್ಲಿ ಆದೇಶ ಯಾವ ಕಡೆಗೆ ಬಂದರೂ ಸಂತ್ರಸ್ತೆಯ ಪರವಾಗಿ ನಿಲ್ಲುವುದಾಗಿ ಬಹಿರಂಗ ಪಡಿಸಿದ್ದರು.
ಈ ಪ್ರಕರಣದ ವಿಚಾರಣೆಯು ಇಂದು (ಡಿ.8) ಕೇರಳ ನ್ಯಾಯಾಲಯ ತೀರ್ಪು ಪ್ರಕಟಿಸುವ ಮೂಲಕ ಅಂತ್ಯಗೊಳಿಸಿದೆ. ನಟ ದಿಲೀಪ್ ಈ ಪ್ರಕರಣದಲ್ಲಿ ಖುಲಾಸೆಯಾಗಿದ್ದು, ಈ ತೀರ್ಪು ಪ್ರಕಟವಾಗ್ತಿದ್ದಂತೆ ಗಾಯಕಿ ಚಿನ್ಮಯಿ ಶ್ರೀಪಾದ `ವಾವ್ಹ್ ಜಸ್ಟ್ ವಾವ್ಹ್ ಎಂದು ವಿಡಂಬನಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ. ಈ ಪೋಸ್ಟ್ ಇದೀಗ ಸಾಕಷ್ಟು ಚರ್ಚೆಯನ್ನ ಹುಟ್ಟುಹಾಕಿದೆ.