Webdunia - Bharat's app for daily news and videos

Install App

ತರುಣ್‌ರ 'ಸೀನ' ಧ್ವನಿ ಸುರುಳಿ ಬಿಡುಗಡೆ

Webdunia
MOKSHENDRA
ತರುಣ್ ನಟಿಸಿರುವ ಸೀನ ಚಿತ್ರದ ಧ್ವನಿಸುರುಳಿಯನ್ನು ಇತ್ತೀಚೆಗೆ ಬೆಲ್ ಹೊಟೇಲಿನಲ್ಲಿ ಆಯೋಜಿಸಲಾಗಿತ್ತು. ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣ ಗೌಡ, ನಟಿ ತಾರಾ, ಧ್ವನಿ ಸುರುಳಿಯನ್ನು ಬಿಡುಗಡೆಗೊಳಿಸಿದರು.

ಚಿತ್ರದ ಕಥೆ, ಸಂಭಾಷಣೆ, ಸಾಹಿತ್ಯ ನಿರ್ದೇಶನವನ್ನು ಬಸವರಾಜ ಬಳ್ಳಾರಿ ವಹಿಸಿಕೊಂಡಿದ್ದಾರೆ. ಇದೊಂದು ವಿಭಿನ್ನ ಚಿತ್ರ ಎನ್ನುವುದು ಬಸವರಾಜು ಅಭಿಪ್ರಾಯ. ಸಕಲೇಶಪುರ, ಹಂಪಿ, ಬಳ್ಳಾರಿಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಎ.ಟಿ.ರವೀಶ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

ಚಿತ್ರದಲ್ಲಿ ಆರು ಹಾಡುಗಳಿವೆ. ಕುನಾಲ್ ಗಾಂಜಾವಾಲಾ, ಹರಿಹರನ್, ಹರ್ಷಿಣಿ, ಅನುರಾಧ ಭಟ್ ಮೊದಲಾದವರು ಹಾಡಿದ್ದಾರೆ. ಹಾಡುಗಳನ್ನು ಸನ್ನಿವೇಶಕ್ಕೆ ತಕ್ಕಂತೆ ಮಾಡಲಾಗಿದೆ ಎಂದರು ಬಸವರಾಜು.

ನಾಯಕ ತರುಣ್‌ಗೆ ಇದು ನಾಲ್ಕನೇ ಚಿತ್ರ. ಚಿತ್ರದ ಹಾಸ್ಯ ಪಾತ್ರದಲ್ಲಿ ಸಾಧು ಕೋಕಿಲ ಕಾಣಿಸಿಕೊಂಡಿದ್ದಾರೆ. ಅನಾಥ ಮಕ್ಕಳನ್ನು ಆಧಾರವಾಗಿಟ್ಟುಕೊಂಡು ಮಾಡಿದ ಸಿನಿಮಾ ಇದು. ಚಿತ್ರದಲ್ಲಿ ತುಂಬಾ ಒಳ್ಳೆಯ ಸಂದೇಶ ಇದೆ. ಕಾಮಿಡಿಯೂ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಂದರು.

ಬರುವ ಫೆಬ್ರವರಿಯಲ್ಲಿ ಅಪ್ಪಟ ಕನ್ನಡ ಆಡಿಯೋ ಕಂಪೆನಿಯೊಂದನ್ನು ಕನ್ನಡ ರಕ್ಷಣಾ ವೇದಿಕೆ ಆರಂಭಿಸಲಿದೆ ಎಂದು ನಾರಾಯಣಗೌಡ ಹೇಳಿದರು.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments