ಭಾರತದಲ್ಲಿ ಕಂಪನಿ ಆರಂಭಿಸಲು ಆಪಲ್ ಇಂಕ್ ಕಂಪನಿ ಮುಂದಾಗಿದೆ. ಆಪಲ್ ಉತ್ಪನ್ನಗಳನ್ನು ಸ್ಥಳೀಯವಾಗಿ ಉತ್ಪಾದಿಸಬೇಕು ಎಂಬ ಉದ್ದೇಶದಿಂದ ಭಾರತ ಸರಕಾರ ಜೊತೆಗೆ ಮಾತುಕತೆ ನಡೆಸುತ್ತಿದೆ ಎಂದು ವಾಲ್‌ಸ್ಟ್ರೀಟ್ ಜರ್ನಲ್ ಪತ್ರಿಕೆ ತಿಳಿಸಿದೆ.
ಪ್ರಪಂಚದಲ್ಲಿ ಎರಡನೇ ಅತಿದೊಡ್ದ ಮೊಬೈಲ್ ಫೋನ್ ಮಾರುಕಟ್ಟೆ ಆಗಿರುವ ಭಾರತದಲ್ಲಿ ಘಟಕವನ್ನು ತೆರೆಯುವ ಮೂಲಕ ಇಲ್ಲಿನ ಮಾರುಕಟ್ಟೆ ಮೇಲೆ ಹಿಡಿತ ಸಾಧಿಸಬಹುದು ಎಂದು ಆಪಲ್ ಕಂಪನಿ ಯೋಚಿಸುತ್ತಿದೆ. ಇನ್ನೊಂದು ಕಡೆ ಪ್ರಧಾನಿ ನರೇಂದ್ರ ಮೋದಿ ಅವರ ’ಮೇಕಿಂಗ್ ಇಂಡಿಯಾ’ ಯೋಜನೆ ಆಪಲ್ ಕಂಪನಿ ಭಾರತಕ್ಕೆ ಬರಲು ಪ್ರಮುಖ ಕಾರಣವಾಗಿದೆ.
ಸ್ಥಳೀಯವಾಗಿಯೇ ಉತ್ಪಾದಿಸುವ ಕಂಪನಿಗಳಿಗೆ ಸರಕಾರ ಕೆಲವೊಂದು ರಿಯಾಯಿತಿಗಳನ್ನು ಕೊಡುವುದರಿಂದ ಆಪಲ್ ಕಂಪನಿ ಇಲ್ಲೇ ಘಟಕ ತೆರೆಯಲು ಇನ್ನೊಂದು ಕಾರಣ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸರಕಾರಕ್ಕೆ ನವೆಂಬರ್ ತಿಂಗಳಲ್ಲೇ ಆಪಲ್ ಕಂಪನಿ ಪತ್ರವನ್ನೂ ಬರೆದಿದೆ.
ಆದರೆ ಸರಕಾರದಿಂದ ಇನ್ನೂ ಯಾವುದೇ ನಿರ್ಧಾರ ಹೊರಬಿದ್ದಿಲ್ಲ. ಭಾರತದಲ್ಲಿ ಮ್ಯಾನ್ಯುಪೆಕ್ಚರಿಂಗ್ ಯುನಿಟ್ ಆರಂಭಿಸುವುದರಿಂದ ರಿಟೇಲ್ ಮಳಿಗೆಗಳನ್ನು ತೆರೆಯುವ ಅವಕಾಶ ಆಪಲ್ ಕಂಪನಿಗೆ ಸಿಗಲಿದೆ. ಭಾರತ ಮಾರುಕಟ್ಟೆಯಲ್ಲಿ ಆಪಲ್ ಸ್ಮಾರ್ಟ್‍ಫೋನ್‍ಗಳ ಮಾರಾಟ ಶೇ.2ಕ್ಕಿಂತಲೂ ಕಡಿಮೆ ಇದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.