Select Your Language

Notifications

webdunia
webdunia
webdunia
webdunia

ದ್ರಾವಿಡ್ ರೀತಿಯಲ್ಲಿ ವಾಟ್ಸನ್ ಕೂಡ ಶಾಂತಚಿತ್ತರು: ಅಜಿಂಕ್ಯ ರಹಾನೆ

ದ್ರಾವಿಡ್ ರೀತಿಯಲ್ಲಿ ವಾಟ್ಸನ್ ಕೂಡ ಶಾಂತಚಿತ್ತರು: ಅಜಿಂಕ್ಯ ರಹಾನೆ
, ಶುಕ್ರವಾರ, 2 ಮೇ 2014 (14:56 IST)
ನವದೆಹಲಿ: ಅಜಿಂಕ್ಯ ರಹಾನೆ ರಾಜಸ್ಥಾನ ರಾಯಲ್ಸ್‌ನಲ್ಲಿ ರಾಹುಲ್ ದ್ರಾವಿಡ್ ಸಾರಥ್ಯದಲ್ಲಿ ಆಡುವಾಗ ಬೆಳಕಿಗೆ ಬಂದರು. ಪ್ರಸಕ್ತ ನಾಯಕ ಶೇನ್ ವಾಟ್ಸನ್ ಅವರು ಕೂಡ ಪೂರ್ವ ನಾಯಕನಂತೆ ಶಾಂತಚಿತ್ತರಾಗಿರುತ್ತಾರೆ ಎಂದು ರಹಾನೆ ತಿಳಿಸಿದರು. ವಾಟ್ಸನ್ ಅದ್ಭುತ ವ್ಯಕ್ತಿ. ಅನೇಕ ವಿಧಗಳಲ್ಲಿ ನಾಯಕನಾಗಿ ರಾಹುಲ್ ಭಾಯಿಗೆ ಹೋಲುತ್ತಾರೆ. ಶೇನ್ ವಾಟ್ಸನ್ ಕೂಡ ಅವರಂತೆ ಶಾಂತ ಮನಸ್ಥಿತಿಯೊಂದಿಗೆ ನಿರ್ಧಾರ ಕೈಗೊಳ್ಳುತ್ತಾರೆ ಎಂದು ರಹಾನೆ ಹೇಳಿದ್ದಾರೆ.

ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಜಸ್ಥಾನ್ ರೋಚಕ ಜಯದಲ್ಲಿ ಮುಖ್ಯಪಾತ್ರ ವಹಿಸಿದ ರಹಾನೆ ಒತ್ತಡದ ಸನ್ನಿವೇಶಗಳಲ್ಲಿ ಶಾಂತಚಿತ್ತರಾಗಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಇಬ್ಬರಿಗೂ ಇದೆ ಎಂದು ಹೇಳಿದರು.

ರಹಾನೆ 59 ಎಸೆತಗಳಲ್ಲಿ 72 ರನ್ ಸಿಡಿಸಿ ರಾಜಸ್ಥಾನ್ ಐದು ವಿಕೆಟ್‌ಗಳಿಗೆ 152 ರನ್ ಬಾರಿಸಲು ನೆರವಾದರು. ರಾಜಸ್ಥಾನ್ ಡೆತ್ ಓವರುಗಳಲ್ಲಿ ಕೆಕೆಆರ್ ತಂಡವನ್ನು ಕೂಡ 152 ರನ್‌ಗೆ ತಡೆದು ಸೂಪರ್ ಓವರ್‌ಗೆ ಪಂದ್ಯವನ್ನು ಒಯ್ದಿತ್ತು.

Share this Story:

Follow Webdunia kannada