Publish Date: Mon, 31 Aug 2026 (08:53 IST)
Updated Date: Mon, 31 Aug 2026 (08:58 IST)
ವಿದೇಶಿ ಮಣ್ಣಿನಲ್ಲಿ ಭಾರತದ ಹಿರಿಮೆ ಮತ್ತು ತ್ರಿವರ್ಣ ಧ್ವಜವನ್ನು ಅವಮಾನಿಸಲು ಯತ್ನಿಸುವ ಶಕ್ತಿಗಳಿಗೆ ಭಾರತೀಯರ ದೇಶಭಕ್ತಿ ಎಂತಹ ಪ್ರತ್ಯುತ್ತರ ನೀಡಬಲ್ಲದು ಎಂಬುದಕ್ಕೆ ನ್ಯೂಯಾರ್ಕ್‌ನ ಬೀದಿಗಳಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. ಬೃಹತ್ ಸಂಖ್ಯೆಯಲ್ಲಿ ನೆರೆದು ಭಾರತ ವಿರೋಧಿ ಘೋಷಣೆಗಳನ್ನು ಕೂಗುತ್ತಿದ್ದ ಖಾಲಿಸ್ತಾನಿ ಬೆಂಬಲಿಗರ ಗುಂಪನ್ನು, ಕೈಯಲ್ಲಿ ಭಾರತದ ಧ್ವಜ ಹಿಡಿದ ಏಕೈಕ ದೇಶಭಕ್ತ ಭಾರತೀಯ ಧೈರ್ಯವಾಗಿ ಎದುರಿಸಿ ನಿಂತ ದೃಶ್ಯ ಜಾಗತಿಕ ಮಟ್ಟದಲ್ಲಿ ದೊಡ್ಡ ಮಟ್ಟದ ಸದ್ದು ಮಾಡಿದೆ.
ನ್ಯೂಯಾರ್ಕ್‌ನ ಬೀದಿಯಲ್ಲಿ ನಡೆದಿದ್ದೇನು?
ನ್ಯೂಯಾರ್ಕ್‌ನಲ್ಲಿ ಖಾಲಿಸ್ತಾನಿ ಪ್ರತ್ಯೇಕತಾವಾದಿ ಗುಂಪುಗಳು ಉಪಟಳ ನೀಡಲು ಮತ್ತು ಭಾರತ ವಿರೋಧಿ ಪ್ರಚಾರ ಮಾಡಲು ಯೋಜಿಸಿ ಸಾರ್ವಜನಿಕ ಸ್ಥಳದಲ್ಲಿ ನೆರೆದಿದ್ದವು. ದೊಡ್ಡ ಸಂಖ್ಯೆಯಲ್ಲಿದ್ದ ಈ ಪುಂಡರು ಭಾರತದ ವಿರುದ್ಧ ನಿಂದನೀಯ ಘೋಷಣೆಗಳನ್ನು ಕೂಗುತ್ತಾ ಆಕ್ರೋಶ ವ್ಯಕ್ತಪಡಿಸುತ್ತಿದ್ದರು.
ಆ ಸಮಯದಲ್ಲಿ, ಯಾವುದೇ ಹಿಂಜರಿಕೆಯಾಗಲೀ ಅಥವಾ ಭಯವಾಗಲೀ ಇಲ್ಲದೆ ಒಬ್ಬನೇ ಒಬ್ಬ ಭಾರತೀಯ ಪ್ರಜೆ ಆ ಗುಂಪಿನ ಮುಂದೆ ಬಂದು ನಿಂತರು. ಭಾರತದ ಧ್ವಜವನ್ನು ಕಾಲಡಿಯಲ್ಲಿ ಹಾಕಿ ತುಳಿಯುತ್ತಿದ್ದವರ ಮುಂದೆ ಡೋಲು ಬಾರಿಸುತ್ತಾ ಅವರ ವರ್ತನೆಯನ್ನು ಖಂಡಿಸಿದರು. ಅಲ್ಲದೆ, ಅವರ ಮುಂದೆಯೇ ಭಾರತ್ ಮಾತಾ ಕೀ ಘೋಷಣೆ ಕೂಗಿದರು. ಈ ವೇಳೆ ಇನ್ನಷ್ಟು ಜನ ಬಂದು ಅವರಿಗೆ ಬೆಂಬಲ ನೀಡಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಪ್ರಪಂಚದಾದ್ಯಂತ ಇರುವ ಭಾರತೀಯರು ಈ ವ್ಯಕ್ತಿಯ ಅಪ್ರತಿಮ ಧೈರ್ಯವನ್ನು ಶ್ಲಾಘಿಸಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ