Webdunia - Bharat's app for daily news and videos

Install App

ಪೆಸಿಫಿಕ್ ಸಮುದ್ರದ ಬಳಿ ಪ್ರಬಲ ಭೂಕಂಪನ: ರಷ್ಯಾದ ಪೆನಿನ್ಸುಲಾಗೆ ಸುನಾಮಿ ಎಚ್ಚರಿಕೆ

Sampriya
ಭಾನುವಾರ, 20 ಜುಲೈ 2025 (14:24 IST)
Photo Credit X
ಮಾಸ್ಕೊ: ಪೆಸಿಫಿಕ್ ಸಮುದ್ರದ ಬಳಿ ಇಂದು 7.4 ತೀವ್ರತೆಯಲ್ಲಿ ಎರಡು ಭಾರಿ ಭೂಕಂಪನ ಸಂಭವಿಸಿದೆ. ಇದರ ಬೆನ್ನಲ್ಲೇ ರಷ್ಯಾದ ಕಾಂಚತ್ಕಾ ಪೆನಿನ್ಸುಲಾಗೆ ಸುನಾಮಿ ಮುನ್ನೆಚ್ಚರಿಕೆ ನೀಡಲಾಗಿದೆ.

ಪೂರ್ವ ಪೆಟ್ರೊಪವ್ಲಾವ್ಸ್ಕ್ ಕಾಂಚತಸ್ಕ್ಸಿ ನಗರದಿಂದ 20 ಕಿಮೀ (12 ಮೈಲಿ) ಆಳದಲ್ಲಿ ಭೂಕಂಪನದ ಕೇಂದ್ರ ಬಿಂದು ಇತ್ತು ಎಂದು ಅಮೆರಿಕ ಭೌಗೋಳಿಕ ಸರ್ವೇಕ್ಷಣಾ ಸಂಸ್ಥೆ ಹೇಳಿದೆ. ಇದಾದ ಕೆಲವೇ ನಿಮಿಷಗಳಲ್ಲಿ ಸಮೀಪದಲ್ಲೇ 6.7 ತೀವ್ರತೆಯ ಮತ್ತೊಂದು ಭೂಕಂಪನ ದಾಖಲಾಗಿದೆ ಎಂದೂ ತಿಳಿಸಿದೆ.

ಇಂದು ಮುಂಜಾನೆ ರಶ್ಯದ ದೂರದ ಪೂರ್ವ ಪ್ರಾಂತ್ಯವಾದ ಕಾಂಚತ್ಕಾದ ಕರಾವಳಿಯ ಬಳಿ ಸುಮಾರು 6.5ಗಿಂತ ಹೆಚ್ಚು ತೀವ್ರತೆ ಹೊಂದಿದ್ದ ಅವಳಿ ಭೂಕಂಪಗಳು ಸಂಭವಿಸಿವೆ ಎಂದು ಜರ್ಮನ್ ಭೌಗೋಳಿಕ ವಿಜ್ಞಾನಗಳ ಕೇಂದ್ರ ಹೇಳಿದೆ. ಸುಮಾರು 10 ಕಿಮೀ (6 ಮೈಲಿ) ಆಳದಲ್ಲಿ ಕ್ರಮವಾಗಿ 6.6 ಹಾಗೂ 6.7 ತೀವ್ರತೆಯಲ್ಲಿ ಈ ಭೂಕಂಪ ಸಂಭವಿಸಿದೆ ಎಂದು ಅದು ತಿಳಿಸಿದೆ.

ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (ಯುಎಸ್ಜಿಎಸ್) ಪ್ರಕಾರ, ಈ ಪ್ರದೇಶದಲ್ಲಿ ಒಟ್ಟು ಐದು ಭೂಕಂಪಗಳು ಸಂಭವಿಸಿವೆ. ಎಲ್ಲವೂ ಸುಮಾರು 10 ಕಿಲೋಮೀಟರ್ ಆಳದಲ್ಲಿವೆ. ಅಧಿಕಾರಿಗಳು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಭೂಕಂಪಗಳಿಂದ ಗಮನಾರ್ಹ ಹಾನಿ ಅಥವಾ ಸಾವುನೋವುಗಳ ಬಗ್ಗೆ ಈವರೆಗೆ ಯಾವುದೇ ವರದಿಗಳು ಬಂದಿಲ್ಲ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಗರ್ಭಕಂಠದ ಕ್ಯಾನ್ಸರ್​ ತಡೆಯಲು ಹೆಣ್ಣುಮಕ್ಕಳಿಗೆ ಹೆಚ್​ಪಿವಿ ಲಸಿಕೆ ನೀಡಲು ರಾಜ್ಯ ಸರ್ಕಾರ ನಿರ್ಧಾರ

ಆರ್ಥಿಕ ಒತ್ತಡ ಶಂಕೆ: ಪದಾರ್ಥ ಸೇವಿಸಿ ಒಂದೇ ಕುಟುಂಬದ ಐವರು ಸಾಮೂಹಿಕ ಆತ್ಮಹತ್ಯೆ

ಸಂಪ್ರದಾಯವನ್ನು ಒಪ್ಪಿಕೊಂಡು ಒಂದೇ ಯುವತಿಯನ್ನು ಅಪ್ಪಿಕೊಂಡ ಇಬ್ಬರು ಸಹೋದರರು

ಎರಡು ದಶಕಗಳ ಕಾಲ ಕೋಮಾದಲ್ಲಿದ್ದ ಸೌದಿ ಅರೇಬಿಯಾದ ರಾಜಕುಮಾರ ಸ್ಲೀಪಿಂಗ್ ಪ್ರಿನ್ಸ್ ನಿಧನ

ಕರಾವಳಿ ಜಿಲ್ಲೆಯಲ್ಲಿ ಭಾರಿ ಮಳೆ ನಿರೀಕ್ಷೆ: ದಕ್ಷಿಣ ಕನ್ನಡ, ಉಡುಪಿಯಲ್ಲಿ ರೆಡ್‌ ಅಲರ್ಟ್‌ ಘೋಷಣೆ

ಮುಂದಿನ ಸುದ್ದಿ
Show comments