Select Your Language

Notifications

webdunia
webdunia
webdunia
webdunia

ಶಿಕ್ಷಕರಿಗೆ ಜೀನ್ಸ್ ನಿಷೇಧಿಸಿದ ಪಾಕಿಸ್ತಾನ

ಶಿಕ್ಷಕರಿಗೆ ಜೀನ್ಸ್ ನಿಷೇಧಿಸಿದ ಪಾಕಿಸ್ತಾನ
ಪಾಕಿಸ್ತಾನ , ಶುಕ್ರವಾರ, 10 ಸೆಪ್ಟಂಬರ್ 2021 (12:09 IST)
ಮಹಿಳೆಯರ ಉಡುಪುಗಳ ಬಗ್ಗೆ ಕಟ್ಟುನಿಟ್ಟಿನ ನಿಯಮಗಳನ್ನು ಹೇರುವುದು ಇಸ್ಲಾಮಿಕ್ ದೇಶಗಳಲ್ಲಿ ಹೊಸ ವಿಚಾರವೇನಲ್ಲ. ನೆರೆಯ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸಹ-ಶಿಕ್ಷಣದ ಮೇಲೆ ನಿಷೇಧ ಹೇರಿದ್ದರೆ ಇತ್ತ ಪಾಕಿಸ್ತಾನ ತನ್ನ ದೇಶದ ಸ್ತ್ರೀಯರ ಮೇಲೆ ಕಠಿಣವಾದ ನಿರ್ಬಂಧವೊಂದನ್ನು ಹೇರಿದೆ.

ಮಹಿಳೆ ಹಾಗೂ ಪುರುಷರೆನ್ನದೇ, ಯಾವುದೇ ಶಿಕ್ಷಕರೂ ಜೀನ್ಸ್ ಮತ್ತು ಟೈಟ್ ಟೀ-ಶರ್ಟ್ ಧರಿಸದಂತೆ ಪಾಕಿಸ್ತಾನದ ಕೇಂದ್ರ ಶಿಕ್ಷಣ ನಿರ್ದೇಶನಾಲಯ ಆದೇಶ ಹೊರಡಿಸಿದೆ.
"ಸರಳವಾದ ಹಾಗೂ ಸಭ್ಯವಾದ ಸಲ್ವರ್ ಕಮೀಜ಼್, ಟ್ರೌಶರ್ ಹಾಗೂ ದುಪಟ್ಟಾ/ಶಾಲ್, ಪರ್ದಾ ಪಾಲಿಸುವ ಮಹಿಳೆಯರಿಗೆ ಸ್ಕಾರ್ಫ್/ಹಿಜಬ್ ಧರಿಸಲು ಅವಕಾಶ ನೀಡಲಾಗುತ್ತದೆ. ಯಾವುದೇ ಪರಿಸ್ಥಿತಿಯಲ್ಲೂ ಜೀನ್ಸ್ ಹಾಗೂ ಟೈಟ್ಸ್ ಧರಿಸಲು ಅವಕಾಶ ಕೊಡುವುದಿಲ್ಲ. ಬರೀ ಫಾರ್ಮಲ್ ಶೂಗಳು ಧರಿಸಬಹುದು. ಆದರೆ ಚಪ್ಪಲಿಗಳನ್ನು ಧರಿಸಲು ಅವಕಾಶವಿಲ್ಲ. ಚಳಿಗಾಲದಲ್ಲಿ ಕೋಟ್, ಬ್ಲೇಜ಼ರ್ಗಳು, ಸ್ವೆಟರ್ಗಳು, ಜೆರ್ಸಿಗಳು, ಕಾರ್ಡಿಗನ್ಗಳು ಹಾಗೂ ಶಾಲ್ಗಳನ್ನು ಧರಿಸಲು ಅವಕಾಶ ಕೊಡಲಾಗುವುದು" ಎಂದು ಮಹಿಳೆಯರಿಗೆ ಕೊಡಲಾದ ಸೂಚನೆಯಲ್ಲಿ ತಿಳಿಸಲಾಗಿದೆ. ಇದೇ ನಿಯಮವನ್ನು ಶಿಕ್ಷಕೇತರ ಸಿಬ್ಬಂದಿಗೂ ಅನ್ವಯಿಸಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ʼನಿಯಮ ಸಡಿಲಿಕೆʼ ವಿಚಾರ : ಬೊಮ್ಮಾಯಿ ಹೇಳಿದ್ದೇನು?