Publish Date: Thu, 09 Jul 2026 (12:40 IST)
Updated Date: Thu, 09 Jul 2026 (12:52 IST)
ವಾಷಿಂಗ್ಟನ್: ಭಾರತದಲ್ಲಿನ ತನ್ನ ಪ್ರೇಯಸಿಗಾಗಿ ಅಮೆರಿಕದಲ್ಲಿ ಭಾರತೀಯ ಮೂಲದ ಟೆಕ್ಕಿಯೊಬ್ಬ ತನ್ನ ಪತ್ನಿಯನ್ನು ಕೊಂದು, ಅದನ್ನು ಭಾರತದಲ್ಲಿದ್ದ ತನ್ನ ಪ್ರೇಮಿಗೆ ಮೃತದೇಹದ ಫೋಟೋ ಕಳುಹಿಸಿರುವ ಭಯಾನಕ ಘಟನೆ ನಡೆದಿದೆ.
ಪತ್ನಿಯನ್ನು ಕೊಂದ ಪತಿಯನ್ನು 30 ವರ್ಷದ ಅವಿನಾಶ್ ನಾರ್ನೆ ಎಂದು ಗುರುತಿಸಲಾಗಿದೆ. 27 ವರ್ಷದ ರಾಜಿತಾ ಸಬ್ಬಿನೇನಿ ಮೃತ ಮಹಿಳೆ. ಇಬ್ಬರೂ ಅಮೆರಿಕದಲ್ಲಿ ವಾಸವಾಗಿದ್ದು, 7 ತಿಂಗಳ ಹಿಂದೆಯೇ ಈ ಘಟನೆ ನಡೆದಿದೆ.
ಅಕ್ಟೋಬರ್ 27, 2025ರಂದು ಅವಿನಾಶ್ ಪೊಲೀಸರಿಗೆ ಕರೆ ಮಾಡಿ, ನನ್ನ ಪತ್ನಿ ಬಾತ್‌ರೂಮ್‌ನಲ್ಲಿ ಲಾಕ್ ಆಗಿದ್ದಾಳೆ ಹೊರಗೆ ಬರುತ್ತಿಲ್ಲ ಎಂದು ಪೊಲೀಸರಿಗೆ ಕರೆ ಮಾಡಿದ್ದಾನೆ. ಸ್ಥಳಕ್ಕೆ ಬಂದ ಪೊಲೀಸರು ಬಾಗಿಲು ಒಡೆದು ನೋಡಿದಾಗ ರಜಿಯಾ ಶವವಾಗಿ ಪತ್ತೆಯಾಗಿದ್ದಳು.
ಇನ್ನೂ ತನಿಖೆ ವೇಳೆ ಅವಿನಾಶ್, ತಾನು ಕೆಲಸಕ್ಕೆ ಕೆಲಸಕ್ಕೆ ಹೋಗಿ 40 ನಿಮಿಷಗಳ ನಂತರ ನನಗೆ ವಿಷಯ ಗೊತ್ತಾಯಿತು ಎಂದು ಸುಳ್ಳು ಹೇಳಿ ತಪ್ಪಿಸಿಕೊಳ್ಳಲು ಮುಂದಾಗಿದ್ದ. ಆದರೆ, ಸಿಸಿಟಿವಿ ಹಾಗೂ ಇತರ ಸಾಕ್ಷ್ಯಗಳನ್ನು ಪರಿಶೀಲಿಸಿದ ಪೊಲೀಸರಿಗೆ, ಆ ಸಮಯದಲ್ಲಿ ಮನೆಗೆ ಬೇರೆ ಯಾರೂ ಬಂದಿಲ್ಲ ಎಂಬುದು ಗೊತ್ತಾಗಿದೆ.
ಮರಣೋತ್ತರ ಪರೀಕ್ಷೆಯಲ್ಲಿ ರಾಜಿತಾ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ದೃಢಪಟ್ಟಿದೆ. ಬಳಿಕ ಪೊಲೀಸರು ಪ್ರಕರಣವನ್ನು ಕೊಲೆ ಎಂದು ದಾಖಲಿಸಿ ತನಿಖೆ ಮುಂದುವರಿಸಿದಾಗ, ತನಿಖೆ ವೇಳೆ ಅವಿನಾಶ್ ಭಾರತದಲ್ಲಿದ್ದ ಮಹಿಳೆಯೊಬ್ಬಳೊಂದಿಗೆ ಹಲವು ವರ್ಷಗಳಿಂದ ಸಂಬಂಧ ಹೊಂದಿದ್ದ ಎಂಬುದು ಬೆಳಕಿಗೆ ಬಂದಿದೆ.
ಇನ್ನೂ ತನಿಖೆಯಲ್ಲಿ ಪತ್ನಿಯನ್ನು ಕೊಂದ ಬಳಿಕ ಪ್ರೇಮಿಗೆ ಹಲವು ಬಾರಿ ಕರೆ ಮಾಡಿ, ಮೃತದೇಹದ ಫೋಟೋವನ್ನು ಆಕೆಗೆ ಕಳುಹಿಸಿದ್ದಾನೆ.
About Writer
ಸಂಪ್ರಿಯ
ಕನ್ನಡ ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷದಲ್ಲಿ ಬೇರೆ ಬೇರೆ ಸಂಸ್ಥೆಗಳಲ್ಲಿ ರಿಪೋರ್ಟರ್ ಆಗಿ, ಸಬ್ ಎಡಿಟರ್ ಆಗಿ, ಇದೀಗ ಕಂಟೆಂಟ್ ರೈಟರ್ ಆಗಿ ವೆಬ್ದುನಿಯಾದಲ್ಲಿ ಕೆಲಸ. ಆಳ್ವಾಸ್ ಕಾಲೇಜಿನಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋಧ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು 2016ನೇ ಸಾಲಿನಲ್ಲಿ ಪಡೆದಿರುತ್ತೇನೆ. ಮನರಂಜನೆ, ಲೈಫ್ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ವಿಶೇಷ ಆಸಕ್ತಿ. ....
ಮತ್ತಷ್ಟು ಓದಿ