ಬೆಂಗಳೂರು: ಇಂದು ಗಾಜಾದಾದ್ಯಂತ ಇಸ್ರೇಲಿ ನಡೆಸಿದ ದಾಳಿಯಲ್ಲಿ ರಾಫಾದಲ್ಲಿ ಆಹಾರ ನೆರವು ತಾಣಗಳ ಬಳಿ 70ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಪರಿಹಾರ ಕೇಂದ್ರಗಳಲ್ಲಿ ಆಹಾರಕ್ಕಾಗಿ ಕಾದು ನಿಂತಿದ್ದ ಪ್ಯಾಲೆಸ್ಟೀನಿಯನ್ನರ ಮೇಲೆ ಇಸ್ರೇಲ್ ಗುಂಡಿನ ದಾಳಿ ನಡೆಸಿದೆ.
ವಿಶ್ವ ಆಹಾರ ಕಾರ್ಯಕ್ರಮ (ಡಬ್ಲ್ಯೂಎಫ್‌ಪಿ) ಗಾಜಾದಲ್ಲಿ ಸಾವಿರಾರು ಪ್ಯಾಲೆಸ್ಟೀನಿಯರ ಮೇಲೆ ಇಸ್ರೇಲ್ ದಾಳಿ ನಡೆಸಿದೆ. ಇಸ್ರೇಲ್ ಈ ಕೃತ್ಯ ನಡೆಸುತ್ತಿದೆ ಎ'ದು ಗಾಜಾದ ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ಇದು ಹಮಾಸ್ ಬಂಡಕೋರರ ಕೃತ್ಯ ಎಂದು ಸ್ಥಳದಲ್ಲಿ ನೆರವು ನೀಡುತ್ತಿರುವ ಅಮೆರಿಕ ಹಾಗೂ ಇಸ್ರೇಲ್ ಬೆಂಬಲಿತ ಗಾಜಾ ಹ್ಯುಮನಿಟೇರಿಯನ್ ಫೌಂಟೇಶನ್ ಹೇಳಿದೆ.