Publish Date: Tue, 28 Jul 2026 (18:06 IST)
Updated Date: Tue, 28 Jul 2026 (18:09 IST)
ಕರಾವಳಿ ಭಾಗದಲ್ಲಿ ಹೆಚ್ಚಾಗಿ ಮಾಡುವ ಪೇಪರ್ ಅವಲಕ್ಕಿ ಅತ್ಯಂತ ಹಗುರವಾದ, ರುಚಿಕರವಾದ ಮತ್ತು ಆರೋಗ್ಯಕರವಾದ ಆಹಾರ ಧಾನ್ಯವಾಗಿದೆ. ಇದನ್ನು ಉಪಹಾರಕ್ಕಾಗಿ ಅಥವಾ ಸಂಜೆಯ ತಿಂಡಿಯಾಗಿ ವಿವಿಧ ರೀತಿಯಲ್ಲಿ ತಯಾರು ಮಾಡಿ ಸೇವಿಸಲಾಗುತ್ತದೆ.
ಈ ಲೇಖನದಲ್ಲಿ ಅವಲಕ್ಕಿಯಿಂದ ಸಿಗುವ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಸಲಾಗಿದೆ.
ಸುಲಭ ಜೀರ್ಣಕ್ರಿಯೆ: ಪೇಪರ್ ಅವಲಕ್ಕಿ ಅತ್ಯಂತ ತೆಳುವಾಗಿರುವುದರಿಂದ ಹೊಟ್ಟೆಗೆ ಯಾವುದೇ ಭಾರ ಎನಿಸುವುದಿಲ್ಲ. ಇದು ಸುಲಭವಾಗಿ ಜೀರ್ಣವಾಗುತ್ತದೆ ಮತ್ತು ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್ ಅಥವಾ ಜೀರ್ಣಾಂಗಯೂಹದ ಸಮಸ್ಯೆ ಇರುವವರಿಗೆ ಸೂಕ್ತವಾದ ಆಹಾರವಾಗಿದೆ.
ತೂಕ ಇಳಿಕೆಗೆ ಸಹಕಾರಿ: ಇದರಲ್ಲಿ ಕ್ಯಾಲೋರಿ ಮತ್ತು ಕೊಬ್ಬಿನ ಪ್ರಮಾಣ (Fat content) ಅತ್ಯಂತ ಕಡಿಮೆ. ಕಡಿಮೆ ಎಣ್ಣೆ ಬಳಸಿ ಒಗ್ಗರಣೆ ಹಾಕಿ ಅಥವಾ ನೆನೆಸಿ ತಿಂದರೆ, ಹೊಟ್ಟೆ ತುಂಬಿದ ಅನುಭವ ನೀಡುತ್ತದೆ ಮತ್ತು ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಅತ್ಯುತ್ತಮ ಆಯ್ಕೆಯಾಗಿದೆ.
ಕಬ್ಬಿಣಾಂಶದ ಕೊರತೆ ನಿವಾರಣೆ: ಅವಲಕ್ಕಿಯನ್ನು ಭತ್ತದಿಂದ ತಯಾರಿಸುವ ಪ್ರಕ್ರಿಯೆಯಲ್ಲಿ ಅದಕ್ಕೆ ಕಬ್ಬಿಣಾಂಶ ಹೆಚ್ಚಾಗಿ ಸೇರುತ್ತದೆ. ರಕ್ತಹೀನತೆ (Anemia) ಇರುವವರು, ಗರ್ಭಿಣಿಯರು ಮತ್ತು ಮಕ್ಕಳಿಗೆ ಇದು ಕಬ್ಬಿಣಾಂಶದ ಉತ್ತಮ ನೈಸರ್ಗಿಕ ಆಕರವಾಗಿದೆ.
ಸಲಹೆ: ಅವಲಕ್ಕಿ ಸೇವಿಸುವಾಗ ಸ್ವಲ್ಪ ನಿಂಬೆರಸ ಹಿಂಡಿ ತಿಂದರೆ, ದೇಹವು ಕಬ್ಬಿಣಾಂಶವನ್ನು ಇನ್ನಷ್ಟು ಚೆನ್ನಾಗಿ ಹೀರಿಕೊಳ್ಳುತ್ತದೆ.
About Writer
ಸಂಪ್ರಿಯ
ಕನ್ನಡ ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷದಲ್ಲಿ ಬೇರೆ ಬೇರೆ ಸಂಸ್ಥೆಗಳಲ್ಲಿ ರಿಪೋರ್ಟರ್ ಆಗಿ, ಸಬ್ ಎಡಿಟರ್ ಆಗಿ, ಇದೀಗ ಕಂಟೆಂಟ್ ರೈಟರ್ ಆಗಿ ವೆಬ್ದುನಿಯಾದಲ್ಲಿ ಕೆಲಸ. ಆಳ್ವಾಸ್ ಕಾಲೇಜಿನಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋಧ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು 2016ನೇ ಸಾಲಿನಲ್ಲಿ ಪಡೆದಿರುತ್ತೇನೆ. ಮನರಂಜನೆ, ಲೈಫ್ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ವಿಶೇಷ ಆಸಕ್ತಿ. ....
ಮತ್ತಷ್ಟು ಓದಿ