Select Your Language

Notifications

webdunia
webdunia
webdunia
webdunia

ಅನುಷ್ಕಾ ಮಡಿಲಲ್ಲಿ ತಲೆ ಇಟ್ಟು ಕೊಹ್ಲಿ ಅತ್ತಿದ್ಯಾಕೆ?

ಅನುಷ್ಕಾ ಮಡಿಲಲ್ಲಿ ತಲೆ ಇಟ್ಟು ಕೊಹ್ಲಿ ಅತ್ತಿದ್ಯಾಕೆ?
ನವದೆಹಲಿ , ಬುಧವಾರ, 3 ಜೂನ್ 2015 (12:30 IST)
ಆಕ್ರಮಣಕಾರಿ ಆಟಗಾರರಾದ ವಿರಾಟ್ ತಮ್ಮ ಬಿರುಸಿನ ಬ್ಯಾಟಿಂಗ್‌ನಿಂದಾಗಿ ಎದುರುಪಾಳೆಯದ ಬೌಲರ್‌ಗಳನ್ನು ಅಳಿಸುವುದು ಸಾಮಾನ್ಯ. ಆದರೆ ಅವರೇ ಒಮ್ಮೆ ಅತ್ತಿದ್ದರಂತೆ. ಅದು ಕೂಡ ತಮ್ಮ ಪ್ರಿಯತಮೆ ಅನುಷ್ಕಾ ಶರ್ಮಾ ಎದುರು. ಅದು ಯಾವಾಗ? ಏಕೆ ಅಂತೀರಾ?

ಈ ಕುರಿತು ಸ್ವತಃ ವಿರಾಟ್ ಮಾಧ್ಯಮವೊಂದರ ಬಳಿ ಹೇಳಿಕೊಂಡಿದ್ದಾರೆ. ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಆಡುತ್ತಿದ್ದ ವೇಲೆ ಮಹೇಂದ್ರ ಸಿಂಗ್ ಧೋನಿಯವರು ಅಚಾನಕ್ ಆಗಿ ಟೆಸ್ಟ್‌ಗೆ ವಿದಾಯ ಹೇಳಿದ್ದರು. ಹೀಗಾಗಿ ವಿರಾಟ್ ಕೊಹ್ಲಿಯವರನ್ನು ಭಾರತ ತಂಡದ ನಾಯಕನಾಗಿ ಘೋಷಿಸಲಾಯಿತು. ಇದು ವಿರಾಟ್ ಸಾಧ್ಯವಿಲ್ಲವೆಂದುಕೊಂಡಿದ್ದ ಕನಸು ನನಸಾದ ಕ್ಷಣವಾಗಿತ್ತು. 
 
ತಕ್ಷಣ ಅವರು ತಮ್ಮ ಕೋಣೆಗೆ ಹೋದರು. ಆ ಸಮಯದಲ್ಲಿ ಅನುಷ್ಕಾ ಅಲ್ಲಿದ್ದರು. ಈ ಸಿಹಿ ಸುದ್ದಿಯನ್ನು ಆಕೆಗೆ ಹೇಳಿದಾಗ ಅವಳು ಸಹ ಆಶ್ಚರ್ಯ ಚಕಿತಳಾಗಿದ್ದಾಳೆ. ಕೆಲ ಸಮಯದವರೆಗೂ ಇಬ್ಬರು ಕೂಡ ಸುಮ್ಮನೆ ಕುಳಿತಿದ್ದಾರೆ. ನಂತರ ಏಕಾಯೇಕಿ ವಿರಾಟ್ ಅಳಲು ಪ್ರಾರಂಭಿಸಿದ್ದಾರೆ.
 
"ನಾನು ಟೀಮ್ ಇಂಡಿಯಾದ ನಾಯಕನಾಗುತ್ತೇನೆ ಎಂದು ಎಂದು ಸಹ ಅಂದುಕೊಂಡಿರಲಿಲ್ಲ. ಆದರೆ ನಾನು ಕಲ್ಪಿಸಲಾಗದ್ದನ್ನು ಪಡೆದ ಸಂತೋಷದಲ್ಲಿ ಅಳು ತಡೆಯಲಾಗಲಿಲ್ಲ", ಎಂದಿದ್ದಾರೆ ಕೊಹ್ಲಿ.

Share this Story:

Follow Webdunia kannada