Select Your Language

Notifications

webdunia
webdunia
webdunia
webdunia

ಅಂಡರ್‌ವೇರ್‌ನಲ್ಲಿ ಟಿಶ್ಯೂ ಪೇಪರ್ ಇಟ್ಟುಕೊಂಡು ಬ್ಯಾಟಿಂಗ್ ಮಾಡಿದ್ದ ಸಚಿನ್

ಅಂಡರ್‌ವೇರ್‌ನಲ್ಲಿ ಟಿಶ್ಯೂ ಪೇಪರ್ ಇಟ್ಟುಕೊಂಡು ಬ್ಯಾಟಿಂಗ್ ಮಾಡಿದ್ದ ಸಚಿನ್
ನವದೆಹಲಿ , ಸೋಮವಾರ, 24 ನವೆಂಬರ್ 2014 (10:27 IST)
ಸಚಿನ್ ತೆಂಡೂಲ್ಕರ್ ಆತ್ಮಚರಿತ್ರೆ ಹಲವು ಸತ್ಯಗಳನ್ನು ತೆರೆದಿಟ್ಟಿದೆ. ಅದರಲ್ಲೊಂದು ಪ್ರಸಂಗ ಸ್ವತಃ ಸಚಿನ್ ಅವರಿಗೆ ಮುಜುಗರ ತರುವಂತದ್ದು ಹಾಗೂ ಓದುಗರಿಗೆ ನಗುವನ್ನು ತರಿಸುವಂತದ್ದು. ಅದೇನೆಂದು ತಿಳಿಯಲು ಮುಂದೆ ಓದಿ...

ಸಚಿನ್ ತೆಂಡೂಲ್ಕರ್ ಅವರಿಗೆ ಆಟದ ಬಗ್ಗೆ ಇದ್ದ ಬದ್ಧತೆ ಯಾವ ಮಟ್ಟಿನದ್ದು ಎಂಬುದನ್ನು ಸಾದರ ಪಡಿಸುತ್ತಿದೆ ಈ ಪ್ರಸಂಗ. 
ಪಂದ್ಯವೊಂದರ ಸಂದರ್ಭದಲ್ಲಿ ಸಚಿನ್ ಅವರಿಗೊಮ್ಮೆ ಭೇದಿ ಸಮಸ್ಯೆ ಕಾಡುತ್ತಿತ್ತಂತೆ. ಆದರೆ ಪಂದ್ಯವನ್ನು ತಪ್ಪಿಸಿಕೊಳ್ಳಲಾಗದು. ಅವರೇನು ಮಾಡಿದರಂತೆ ಗೊತ್ತೆ. ಒಳ ಉಡುಪಿನಲ್ಲಿ ಟಿಶ್ಯೂ ಪೇಪರ್ ಇಟ್ಟುಕೊಂಡು ಬ್ಯಾಟಿಂಗ್‌ಗೆ ಇಳಿದಿರಂತೆ. 
 
ಇದು ನಡೆದದ್ದು 2003ರ ವಿಶ್ವಕಪ್‌ನ ಸೂಪರ್ ಸಿಕ್ಸ್ ಹಂತದ ಶ್ರೀಲಂಕಾ ವಿರುದ್ಧದ ಪಂದ್ಯದ ಸಮಯದಲ್ಲಿ . ಸಚಿನ್ ಅನುಭವಿಸಿದ ಮುಜುಗರದ, ಕ್ಲಿಷ್ಟಕರ ಸಂದರ್ಭವನ್ನು ಅವರ ಮಾತುಗಳಲ್ಲೇ ಓದಿ....
 
"ಮಾರ್ಚ್ 10ರಂದು ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್‌ನಲ್ಲಿ ಪಂದ್ಯ ನಡೆಯುತ್ತಿತ್ತು. ಈ ಸಂದರ್ಭ ನನಗೆ ಹೊಟ್ಟೆ ಸರಿ ಇರಲಿಲ್ಲ. ಭೇದಿಯ ಸಮಸ್ಯೆಯಿಂದ ಬಳಲುತ್ತಿದ್ದೆ. ಪ್ರತಿಕ್ಷಣ ನಿರ್ಜಲೀಕರಣವಾದಂತಾಗುತ್ತಿತ್ತು. ತೀರಾ ವೈಯಕ್ತಿಕ ವಿಚಾರವಾದ್ದರಿಂದ ಯಾರ ಬಳಿಯೂ ಹೇಳಿಕೊಳ್ಳಲಿಲ್ಲ. ಇಂತಹ ಸಂದರ್ಭದಲ್ಲೂ ಬ್ಯಾಟಿಂಗ್‌ಗೆ ಹೋಗಲೇಬೇಕಾದ ಅನಿವಾರ್ಯತೆ ಇತ್ತು. ಹಾಗಾಗಿ ಒಳ ಉಡುಪಿನಲ್ಲಿ ಟಿಶ್ಯೂ ಪೇಪರ್ ಇಟ್ಟುಕೊಂಡು ಬ್ಯಾಟಿಂಗ್ ಮಾಡಿದೆ" ಎಂದು ತಮ್ಮ ಆತ್ಮಕಥೆ ‘ಪ್ಲೇಯಿಂಗ್ ಇಟ್ ಮೈ ವೇ’ ಪುಸ್ತಕದಲ್ಲಿ ಸಚಿನ್ ತೆಂಡೂಲ್ಕರ್ ಹೇಳಿಕೊಂಡಿದ್ದಾರೆ.
 
ಒಳಚಡ್ಡಿಯೊಳಗೆ ಕಾಗದ ತುಂಬಿಕೊಂಡು ಬ್ಯಾಟಿಂಗ್ ಮಾಡಿದರೂ ಸಚಿನ್ 120 ಎಸೆತಗಳಲ್ಲಿ 97 ರನ್ ಗಳಿಸುವಲ್ಲಿ ಸಫಲರಾದರು.  ಅದು ಭಾರತ 188 ರನ್ ಅಂತರದಲ್ಲಿ ಪಂದ್ಯವನ್ನು ಗೆಲ್ಲಲು ಸಹಾಯಕವಾಯಿತು.
 
"ನಾನು ಹೇಗಾದರೂ ಮಾಡಿ 97 ಗಳಿಸುವಲ್ಲಿ ಯಶಸ್ವಿಯಾದೆ. ಆದರೆ ಹೊಟ್ಟೆ ನೋವಿನ ಜತೆ ಬ್ಯಾಟಿಂಗ್ ನಡೆಸುವುದು ಒಂದು ಆಹ್ಲಾದಕರ ಅನುಭವವಲ್ಲ. ನಾನು ಸಾಕಷ್ಟು ಕಷ್ಟಪಟ್ಟು ಎಲ್ಲವನ್ನು ಸಹಿಸಿಕೊಂಡೆ. ನನ್ನ ಪ್ರಯತ್ನ ಕೊನೆಯಲ್ಲಿ ನೀಡಿದ ಫಲ ನನಗೆ ಅತೀವ ಸಂತೋಷ, ತೃಪ್ತಿ ನೀಡಿತು" ಎನ್ನುತ್ತಾರೆ ತೆಂಡೂಲ್ಕರ್. 

Share this Story:

Follow Webdunia kannada