ಆಸೀಸ್ ಕ್ರಿಕೆಟ್ ತಂಡದ ಮಾಜಿ ಆಟಗಾರ ರಿಕ್ಕಿ ಪಾಟಿಂಗ್ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರೆಂದು ಗುರುತಿಸಿಕೊಂಡವರು. ತಮ್ಮ ಚುರುಕು ನಾಯಕತ್ವದ ಕೌಶಲ್ಯಗಳ ಹೊರತಾಗಿ ಈ ಪೀಳಿಗೆಯ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರೆಂದು ಸಹ ಅವರು ಗುರುತಿಸಿಕೊಂಡಿದ್ದಾರೆ.
ಈ ಸ್ಟೈಲಿಸ್ ಬಲಗೈ ಆಟಗಾರ, ವೇಗ ಮತ್ತು ಸ್ಪಿನ್ ಎರಡು ರೀತಿಯ ಬೌಲಿಂಗ್‌ನ್ನು ದಕ್ಷತೆಯಿಂದ ಎದುರಿಸುವುದರಲ್ಲಿ ನಿಸ್ಸೀಮರು. ಆದರೆ ತನ್ನ ಜಬರ್ದಸ್ತ್ ವೃತ್ತಿಜೀವನದ ಅವಧಿಯಲ್ಲಿ ನಿರ್ದಿಷ್ಟ ಬೌಲರ್ ತಮ್ಮನ್ನು ಬಹಳವಾಗಿ ಸಂಕಷ್ಟಕ್ಕೆ ಸಿಲುಕಿಸುತ್ತಿದ್ದ ಎಂದು ಪಾಟಿಂಗ್ ಹೇಳಿಕೊಂಡಿದ್ದಾರೆ.
ಹೌದು, ಭಾರತ ತಂಡದಲ್ಲಿ ಅವರಿಗೊಬ್ಬ ಶತ್ರುವಿದ್ದಾರಂತೆ. ಅವರು ಯಾರು ಅಂತೀರಾ? ಟರ್ಬನೇಟರ್ ಖ್ಯಾತಿಯ ಹರಭಜನ್ ಸಿಂಗ್.
'ಭಜ್ಜಿ ಕ್ರಿಕೆಟ್ ಅಂಗಳದಲ್ಲಿ ನನ್ನ ಪರಮ ಶತ್ರುವಾಗಿದ್ದರು. ಅವರ ಬೌಲಿಂಗ್‌ಗೆ ಭಯ ಪಡುತ್ತಿದ್ದ ನಾನು ಬಹಳ ಎಚ್ಚರಿಕೆಯಿಂದ ಆಡುತ್ತಿದ್ದೆ. ಈಗಲೂ ಅವರು ನನಗೆ ದುಃಸ್ವಪ್ನವಾಗಿ ಕಾಡುತ್ತಾರೆ', ಎಂದಿದ್ದಾರೆ ಪಾಟಿಂಗ್.
ಟೆಸ್ಟ್ ಕ್ರಿಕೆಟ್‌ನಲ್ಲಿ ಭಜ್ಜಿ, ಪಾಟಿಂಗ್ ಅವರನ್ನು 10 ಬಾರಿ ಪೆವಿಲಿಯನ್‌ಗೆ ಮರಳಿಸಿದ್ದಾರೆ (3 ಬಾರಿ ಶೂನ್ಯ). ಇನ್ಯಾವ ಬೌಲರ್ ಕೂಡ ಪಾಟಿಂಗ್ ಅವರನ್ನು ಇಷ್ಟು ಬಾರಿ ಬಲಿ ತೆಗೆದುಕೊಂಡಿಲ್ಲ.
ಪಾಂಟಿಂಗ್ ಅವರ ಆಕರ್ಷಕ ಸರಾಸರಿ ಸಹ ಪಂಜಾಬ್ ಬೌಲರ್ ಎದುರಿಗೆ ಕೇವಲ 22.30 ರಷ್ಟಿದೆ.
ಮತ್ತೊಂದು ಆಸಕ್ತಿದಾಯಕ ವಿಚಾರವೆಂದರೆ ಆಸೀಸ್ ದಾಂಡಿಗ ಭಜ್ಜಿ ಅವರ 300ನೇ ಬಲಿ ಸಹ ಎನ್ನಿಸಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ