ನವದೆಹಲಿ: ವೀರೇಂದ್ರ ಸೆಹ್ವಾಗ್ ಇತ್ತೀಚೆಗೆ ಟ್ವಿಟರ್ ನಲ್ಲಿ ಭರ್ಜರಿ ಟ್ವೀಟ್ ಗಳಿಗೆ ಹೆಸರು ವಾಸಿ. ತಮ್ಮ ಕಿಕ್ ಕೊಡುವ ಟ್ವೀಟ್ ಗಳಿಂದಾಗಿಯೇ ವೀರೂ ಭರ್ಜರಿ ಸಂಪಾದನೆ ಮಾಡಿದ್ದಾರಂತೆ. ಅದರ ಮೊತ್ತ ಕೇಳಿದರೆ ನೀವೂ ಬೆರಗಾಗುತ್ತೀರಿ.
ತಮ್ಮ ಟ್ವಿಟ್ ಗಳಿಂದಾಗಿಯೇ ಬರೋಬ್ಬರಿ 30 ಲಕ್ಷ ಸಂಪಾದನೆ ಮಾಡಿದ್ದಾರಂತೆ ವೀರೂ. ಎಂತಹದ್ದೇ ಪರಿಸ್ಥಿತಿಯಿರಲಿ. ಯಾರದ್ದೇ ಜನುಮದಿನವಿರಲಿ, ಸೆಹ್ವಾಗ್ ಮಾಡುವ ಜೋಕ್ ಕಿಕ್ ಟ್ವೀಟ್ ಗಳು ಮನಸೂರೆಗೊಳ್ಳುತ್ತವೆ. ಇದರಿಂದಾಗಿ ಅವರಿಗೆ ಟ್ವಿಟರ್ ನಲ್ಲಿ 7 ಮಿಲಿಯನ್ ಹಿಂಬಾಲಕರಿದ್ದಾರೆ.
ಹಾಗಾದರೆ ದುಡ್ಡು ಹೇಗೆ ಬಂತು ಅಂತೀರಾ? ಅಷ್ಟೊಂದು ಜನ ತಮ್ಮ ಟ್ವೀಟ್ ಗಳನ್ನು ರಿಟ್ವೀಟ್ ಮಾಡಿದಾಗ ಸಹಜವಾಗಿ ಸ್ಪಾನ್ಸರ್ ಗಳು ಬಂದರಂತೆ. ಇದರಿಂದಾಗಿ ತಮಗೆ ಹಣ ಬಂತು ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ವೀರೂ ಹೇಳಿಕೊಂಡಿದ್ದಾರೆ.
ಆಗಾಗ ಹೀಗೇ ಕಿಕ್ ಕೊಡುವ ಟ್ವೀಟ್ ಗಳನ್ನು ಹರಿಯಬಿಡುವುದು ಸುಮ್ಮನೆ ಅಲ್ಲ ಅಂತಾಯ್ತು ಬಿಡಿ. ಜನ ಓದಿದ್ರೆ ತಮಗೆ ಕಾಸು ಗ್ಯಾರಂಟಿ ಎನ್ನುವುದು ವೀರೂಗೂ ಗೊತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ