Select Your Language

Notifications

webdunia
webdunia
webdunia
webdunia

ಇಂಗ್ಲೆಂಡ್ ವೇಗಿ ಆಂಡರ್‌ಸನ್ ಐಸಿಸಿ ಶ್ರೇಯಾಂಕದಲ್ಲಿ ಟಾಪ್ ಸ್ಥಾನ

ಇಂಗ್ಲೆಂಡ್ ವೇಗಿ ಆಂಡರ್‌ಸನ್ ಐಸಿಸಿ ಶ್ರೇಯಾಂಕದಲ್ಲಿ ಟಾಪ್ ಸ್ಥಾನ
ನವದೆಹಲಿ , ಬುಧವಾರ, 1 ಜೂನ್ 2016 (19:48 IST)
ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್‌ಸನ್ ಐಸಿಸಿ ಟೆಸ್ಟ್ ಬೌಲರುಗಳ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಮುಟ್ಟಿದ್ದಾರೆ. ಶ್ರೀಲಂಕಾ ವಿರುದ್ಧ ಎರಡನೇ ಟೆಸ್ಟ್ ಜಯಗಳಿಸಿದ ಬಳಿಕ ಆಂಡರ್‌ಸನ್ ಈ ಸಾಧನೆ ಮಾಡಿದ್ದಾರೆ. ಆಂಡರ್ ಸನ್ ಅವರು 884 ಪಾಯಿಂಟ್ ಗಳಿಸಿದ್ದರೆ, ರವಿಚಂದ್ರನ್ ಅಶ್ವಿನ್ ಅವರು 789 ಪಾಯಿಂಟ್‌ಗಳೊಂದಿಗೆ 2 ನೇ ಸ್ಥಾನದಲ್ಲಿದ್ದಾರೆ.

ಟಾಪ್ ಟೆನ್‌ನಲ್ಲಿ ರವೀಂದ್ರ ಜಡೇಜಾ 6 ನೇ ಸ್ಥಾನ ಕಾಯ್ದುಕೊಂಡು 789 ಪಾಯಿಂಟ್ ಗಳಿಸಿದ್ದಾರೆ.  ಆಂಡರ್‌ಸನ್ ಮೊದಲ ಇನ್ನಿಂಗ್ಸ್‌ನಲ್ಲಿ 3 ವಿಕೆಟ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಕಬಳಿಸಿ ಸಹ ಆಟಗಾರ ಸ್ಟುವರ್ಟ್ ಬ್ರಾಡ್ ಮತ್ತು ಅಶ್ವಿನ್ ಅವರನ್ನು ಹಿಂದಿಕ್ಕಿ ನಂಬರ್ ಒನ್ ಸ್ಥಾನಕ್ಕೆ ಜಿಗಿದರು.  
 
 ಆಂಡರ್‌ಸನ್ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ನಾಲ್ಕನೇ ಇಂಗ್ಲೆಂಡ್ ಬೌಲರ್ ಆಗಿದ್ದು, 1980ರಲ್ಲಿ ಐಯಾನ್ ಬಾಥಮ್ ಈ ಸಾಧನೆಯನ್ನು ಮೊಟ್ಟಮೊದಲಿಗೆ ಮಾಡಿದ್ದರು.  ಟೆಸ್ಟ್‌ನಲ್ಲಿ 5 ವಿಕೆಟ್ ಕಬಳಿಸಿದ ಬ್ರಾಡ್, ಅಶ್ವಿನ್ ಅವರ ಹಿಂದೆ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ.  

Share this Story:

Follow Webdunia kannada

ಮುಂದಿನ ಸುದ್ದಿ

ರಿಯೊ ಒಲಿಂಪಿಕ್ಸ್: ಮೇರಿ ಕಾಮ್‌ಗೆ ವೈಲ್ಡ್ ಕಾರ್ಡ್ ಎಂಟ್ರಿಗೆ ಯತ್ನ