Select Your Language

Notifications

webdunia
webdunia
webdunia
webdunia

‘ಬಾಲ್ ಸ್ಪಿನ್ ಮಾಡಲು ಬರದವರು ಭಾರತಕ್ಕೆ ಬರಲೇಬೇಡಿ’

‘ಬಾಲ್ ಸ್ಪಿನ್ ಮಾಡಲು ಬರದವರು ಭಾರತಕ್ಕೆ ಬರಲೇಬೇಡಿ’
Mumbai , ಶುಕ್ರವಾರ, 3 ಫೆಬ್ರವರಿ 2017 (11:05 IST)
ಮುಂಬೈ: ಭಾರತದ ಪಿಚ್ ಗಳು ಸ್ಪಿನ್ನರ್ ಗಳಿಗೆ ಹೇಳಿ ಮಾಡಿಸಿದಂತವು ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಇತ್ತೀಚೆಗೆ ಇಂಗ್ಲೆಂಡ್ ಸ್ಪಿನ್ ಗೆ ದಿಂಡಿರುಳಿರುವುದನ್ನು ನೋಡಿ ಎಲ್ಲರೂ ಆಸ್ಟ್ರೇಲಿಯಾ ತಂಡಕ್ಕೆ ಎಚ್ಚರಿಕೆ ನೀಡಲು ಪ್ರಾರಂಭಿಸಿದ್ದಾರೆ.
 

ಸ್ಪಿನ್ ಮಾಡಲು ಬರದಿದ್ದರೆ ಭಾರತ ಪ್ರವಾಸ ಕೈಗೊಳ್ಳಲೇ ಬೇಡಿ ಎಂದು ಇಂಗ್ಲೆಂಡ್ ನ ಮಾಜಿ ನಾಯಕ ಕೆವಿನ್ ಪೀಟರ್ಸನ್ ಹೇಳಿದ್ದಾರೆ. ಭಾರತ ಪ್ರವಾಸ ಕೈಗೊಳ್ಳಲಿರುವ ಸ್ಟೀವ್ ಸ್ಮಿತ್ ಪಡೆ ಮೊದಲು ತಮ್ಮ ಸ್ಪಿನ್ ಡಿಪಾರ್ಟ್ ಮೆಂಟ್ ಸರಿಪಡಿಸಿಕೊಳ್ಳಬೇಕು ಎಂಬುದು ಪೀಟರ್ಸನ್ ಅಭಿಪ್ರಾಯ.

ಇಲ್ಲಿ ಸ್ಪಿನ್ ಬೌಲಿಂಗ್ ಎದುರಿಸಬೇಕೆಂದರೆ ಇಲ್ಲಿನ ಪಿಚ್ ಗಳಲ್ಲಿ ಆಡಿದ ಅನುಭವವೇ ಬೇಕೆಂದೇನಿಲ್ಲ. ಆದರೆ ಹೇಗೆ ನಿಮ್ಮ ಫೂಟ್ ವರ್ಕ್, ಬಾಲ್ ಎದುರಿಸುವ ಶೈಲಿ ಅಗತ್ಯಕ್ಕೆ  ತಕ್ಕಂತೆ ಹೊಂದಿಸಿಕೊಳ್ಳುತ್ತೀರಿ ಎಂಬುದು ಮುಖ್ಯ. ಅದಕ್ಕೆ ತಕ್ಕ ಹಾಗೆ ತಯಾರಾಗಿಯೇ ಭಾರತ ಪ್ರವಾಸ ಕೈಗೊಳ್ಳಿ ಎಂದು ಪೀಟರ್ಸನ್ ಕಿವಿ ಮಾತು ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸುರೇಶ್ ರೈನಾ ಸಿಕ್ಸರ್ ಹೊಡೆತಕ್ಕೆ ಆಸ್ಪತ್ರೆ ಸೇರಿದ ಬಾಲಕ