Video ಮೈದಾನದಲ್ಲಿ ಪಾಕಿಸ್ತಾನದ ಮಾನ ಮೂರು ಕಾಸಿಗೆ ಹರಾಜು ಹಾಕಿದ ಟೀಂ ಇಂಡಿಯಾ

Krishnaveni K
ಸೋಮವಾರ, 15 ಸೆಪ್ಟಂಬರ್ 2025 (09:25 IST)
Photo Credit: X
ದುಬೈ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ನಿನ್ನೆ ಮನಸ್ಸಿಲ್ಲದ ಮನಸ್ಸಿನಿಂದ ಪಂದ್ಯವಾಡಿದ ಟೀಂ ಇಂಡಿಯಾ ಸಾಂಪ್ರದಾಯಿಕ ಎದುರಾಳಿಗೆ ಇನ್ನಿಲ್ಲದಂತೆ ಅವಮಾನ ಮಾಡಿ ಮಾನ ಹರಾಜು ಹಾಕಿದೆ.

ಪಹಲ್ಗಾಮ್ ನಲ್ಲಿ ಪಾಕ್ ಪ್ರೇರಿತ ಉಗ್ರರು ದಾಳಿ ನಡೆಸಿ ಭಾರತೀಯ ಮಹಿಳೆಯರ ಸಿಂಧೂರ ಅಳಿಸಿದ್ದರು. ಹಾಗಿದ್ದರೂ ಅನಿವಾರ್ಯವಾಗಿ ಭಾರತ ಈ ಪಂದ್ಯವನ್ನು ಆಡಬೇಕಾಗಿ ಬಂತು. ಆದರೆ ಈ ಪಂದ್ಯಕ್ಕೆ ಬಹುತೇಕರು ಬಹಿಷ್ಕಾರ ಹಾಕಿದ್ದರು. ಹೀಗಾಗಿ ಪಂದ್ಯದ ಬಳಿಕ ಸೂರ್ಯಕುಮಾರ್ ಯಾದವ್ ಈ ಗೆಲುವನ್ನು ದೇಶಕ್ಕೇ ಸಮರ್ಪಿಸಿದ್ದಾರೆ.

ಈ ಪಂದ್ಯದಲ್ಲಿ ಭಾರತೀಯ ಆಟಗಾರರು ಎದುರಾಳಿಗಳ ಕಡೆಗೆ ಕಣ್ಣೆತ್ತಿಯೂ ನೋಡಲಿಲ್ಲ. ಪಂದ್ಯಕ್ಕೆ ಮೊದಲು ಟಾಸ್ ವೇಳೆ ಸೂರ್ಯಕುಮಾರ್ ಯಾದವ್ ಪಾಕ್ ನಾಯಕನ ಕೈಕುಲುಕಲಿಲ್ಲ. ಪಂದ್ಯದ ಸಂದರ್ಭದಲ್ಲಿಯೂ ಅಪ್ಪಿತಪ್ಪಿಯೂ ಪಾಕ್ ಆಟಗಾರರನ್ನು ಮಾತನಾಡಿಸುವುದಿರಲಿ, ಕಣ್ಣೆತ್ತಿಯೂ ನೋಡಲಿಲ್ಲ. ಎದುರಾಳಿ ಒಬ್ಬ ಆಟಗಾರನಿದ್ದಾನೆ ಆತನನ್ನು ಔಟ್ ಮಾಡುವುದಷ್ಟೇ ಕೆಲಸ ಎನ್ನುವ ರೀತಿಯಲ್ಲಿ ಭಾರತೀಯರು ಆಟವಾಡಿದ್ದರು.

ಇದೂ ಸಾಲದೆಂಬಂತೆ ಗೆಲುವಿನ ರನ್ ಸಿಕ್ಸರ್ ಸಿಡಿಸಿದ ಬಳಿಕ ಸೂರ್ಯಕುಮಾರ್ ಯಾದವ್ ಸಹ ಆಟಗಾರ ಶಿವಂ ದುಬೆಯನ್ನು ಕರೆದುಕೊಂಡು ಸೀದಾ ಮೈದಾನ ತೊರೆದಿದ್ದಾರೆ. ಸಾಮಾನ್ಯವಾಗಿ ಎದುರಾಳಿ ಆಟಗಾರರಿಗೆ ಕೈಕುಲುಕಿ ಪೆವಿಲಿಯನ್ ಗೆ ತೆರಳುವುದು ಪದ್ಧತಿ. ಆದರೆ ಪಂದ್ಯ ಮುಗಿಯಿತು ಎಂದಾಗ ಕರ್ತವ್ಯ ಮುಗಿಸಿದವರಂತೆ ಎದುರಾಳಿಗಳ ಕಡೆಗೆ ತಿರುಗಿಯೂ ನೋಡದೇ ಪೆವಿಲಿಯನ್ ಗೆ ತೆರಳಿದ್ದಾರೆ. ಪಾಕ್ ಆಟಗಾರರು ಮಾತ್ರ ಮೈದಾನದಲ್ಲೇ ಟೀಂ ಇಂಡಿಯಾ ಆಟಗಾರರು ಕೈ ಕುಲುಕಲು ಬರಬಹುದು ಎಂದು ಮೈದಾನದಲ್ಲಿ ಕಾದು ನಿಂತಿದ್ದರು. ಆದರೆ ಟೀಂ ಇಂಡಿಯಾ ಆಟಗಾರರು ಪೆವಿಲಿಯನ್ ಬಾಗಿಲು ಬಂದ್ ಮಾಡಿ ಕುಳಿತಿದ್ದರು. ಪ್ರಶಸ್ತಿ ಸಮಾರಂಭದಲ್ಲಿ ಸೂರ್ಯಕುಮಾರ್ ಈ ಗೆಲುವನ್ನು ಭಾರತೀಯ ಸೇನೆಗೆ ಅರ್ಪಿಸಿ ಗಾಯದ ಮೇಲೆ ಉಪ್ಪು ಸವರಿದರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ವಿವಾದಗಳ ಬೆನ್ನಲ್ಲೇ ಏರ್ ಪೋರ್ಟ್ ನಲ್ಲಿ ಆಯ್ಕೆ ಸಮಿತಿಯ ಪ್ರಗ್ಯಾನ್ ಓಝಾ ಜೊತೆ ಕೊಹ್ಲಿ ಗಂಭೀರ ಚರ್ಚೆ video

ವಿರಾಟ್ ಕೊಹ್ಲಿ ಶತಕ ಸಿಡಿಸಿದಾಗ ಅಗ್ರೆಸಿವ್ ಆಗಿ ರೋಹಿತ್ ಶರ್ಮಾ ಹೇಳಿದ್ದೇನು: ಕೊನೆಗೂ ರಿವೀಲ್

ಗೌತಮ್ ಗಂಭೀರ್ ವಿರುದ್ಧ ಸೀನಿಯರ್ ಆಟಗಾರರು ಸಿಟ್ಟಾಗಿರುವುದಕ್ಕೆ ಕಾರಣ ಬಯಲು

ವಿರಾಟ್ ಕೊಹ್ಲಿ, ಧೋನಿ ಮೇಲೆ ಗೌತಮ್ ಗಂಭೀರ್ ಗೆ ವೈಮನಸ್ಯ ಹುಟ್ಟಿಕೊಂಡಿದ್ದು ಇದೇ ಕಾರಣಕ್ಕಾ

ಸ್ಮೃತಿ ಜತೆಗಿನ ಮದುವೆ ಮುಂದೂಡಿಕೆ ಬಳಿಕ ಮೊದಲ ಬಾರಿ ಪಲಾಶ್ ಮುಚ್ಚಲ್ ಕಾಣಿಸಿಕೊಂಡಿದ್ದು ಹೀಗೆ

ಮುಂದಿನ ಸುದ್ದಿ
Show comments