Publish Date: Sat, 29 Aug 2026 (11:26 IST)
Updated Date: Sat, 29 Aug 2026 (11:29 IST)
ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಅತ್ಯಂತ ಸಂತಸದ ಸುದ್ದಿ. ಭಾರತದ ಪುರುಷರ ಮತ್ತು ಮಹಿಳಾ ಕ್ರಿಕೆಟ್ ತಂಡಗಳು ತಮ್ಮ ತಮ್ಮ ಏಷ್ಯಾ ಕಪ್ ಟೂರ್ನಿಗಳಲ್ಲಿ ಶ್ರೇಷ್ಠ ಪ್ರದರ್ಶನ ನೀಡಲು ಸಜ್ಜಾಗಿವೆ. ಎರಡೂ ತಂಡಗಳ ಪ್ರಮುಖ ಪಂದ್ಯಗಳು, ದಿನಾಂಕ, ಸಮಯ ಹಾಗೂ ಲೈವ್ ಪ್ರಸಾರಕ್ಕೆ ಸಂಬಂಧಿಸಿದ ಪೂರ್ಣ ವಿವರ ಇಲ್ಲಿದೆ.
ಮಹಿಳೆಯರ ಟಿ20 ಏಷ್ಯಾ ಕಪ್ 2026
ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಯುಎಇಯ ದುಬೈ ಇಂಟರ್‌ನ್ಯಾಶನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 10ನೇ ಆವೃತ್ತಿಯ ಮಹಿಳೆಯರ ಟಿ20 ಏಷ್ಯಾ ಕಪ್‌ನಲ್ಲಿ ಭಾಗವಹಿಸುತ್ತಿದೆ. ಭಾರತ ತಂಡವು ಥೈಲ್ಯಾಂಡ್, ಹಾಂಗ್ ಕಾಂಗ್ ಮತ್ತು ಸಾಂಪ್ರದಾಯಿಕ ವೈರಿ ಪಾಕಿಸ್ತಾನದೊಂದಿಗೆ ಗ್ರೂಪ್ 'ಎ' ನಲ್ಲಿದೆ.
ಭಾರತ ಮಹಿಳಾ ತಂಡ ವಿರುದ್ಧ ಥೈಲ್ಯಾಂಡ್ ಮಹಿಳಾ ತಂಡ: ಆಗಸ್ಟ್ 30, 2026 (ಭಾನುವಾರ) - ರಾತ್ರಿ 8:00 ಗಂಟೆಗೆ (IST).
ಭಾರತ ಮಹಿಳಾ ತಂಡ ವಿರುದ್ಧ ಹಾಂಗ್ ಕಾಂಗ್ ಮಹಿಳಾ ತಂಡ: ಸೆಪ್ಟೆಂಬರ್ 3, 2026 (ಗುರುವಾರ) - ರಾತ್ರಿ 8:00 ಗಂಟೆಗೆ (IST).
ಭಾರತ ಮಹಿಳಾ ತಂಡ ವಿರುದ್ಧ ಪಾಕಿಸ್ತಾನ ಮಹಿಳಾ ತಂಡ: ಸೆಪ್ಟೆಂಬರ್ 5, 2026 (ಶನಿವಾರ) - ರಾತ್ರಿ 8:00 ಗಂಟೆಗೆ (IST).
ನಾಕೌಟ್ ಹಂತ: ಭಾರತ ಅರ್ಹತೆ ಪಡೆದರೆ, ಸೆಮಿಫೈನಲ್ ಪಂದ್ಯಗಳು ಸೆಪ್ಟೆಂಬರ್ 10 ಮತ್ತು 11, 2026 ರಂದು ನಡೆಯಲಿವೆ. ಪ್ರಶಸ್ತಿ ಸುತ್ತಿನ ಫೈನಲ್ ಪಂದ್ಯವು ಸೆಪ್ಟೆಂಬರ್ 13, 2026 (ಭಾನುವಾರ) ರಂದು ದುಬೈನಲ್ಲಿ ನಡೆಯಲಿದೆ.
ಪುರುಷರ ಟಿ20 ಏಷ್ಯಾ ಕಪ್
ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತೀಯ ಪುರುಷರ ಕ್ರಿಕೆಟ್ ತಂಡವು ಅತ್ಯುತ್ತಮ ಫಾರ್ಮ್‌ನಲ್ಲಿದ್ದು, ಏಷ್ಯಾ ಕಪ್‌ನಲ್ಲಿ ಯುಎಇ, ಪಾಕಿಸ್ತಾನ ಮತ್ತು ಒಮಾನ್ ತಂಡಗಳ ವಿರುದ್ಧ ಲೀಗ್ ಹಂತದ ಪಂದ್ಯಗಳನ್ನು ಆಡಲಿದೆ.
ಭಾರತ ಪುರುಷರ ತಂಡ ವಿರುದ್ಧ ಯುಎಇ: ರಾತ್ರಿ 8:00 ಗಂಟೆಗೆ (IST), ದುಬೈ ಇಂಟರ್‌ನ್ಯಾಶನಲ್ ಕ್ರೀಡಾಂಗಣ.
ಭಾರತ ಪುರುಷರ ತಂಡ ವಿರುದ್ಧ ಪಾಕಿಸ್ತಾನ: ರಾತ್ರಿ 8:00 ಗಂಟೆಗೆ (IST), ದುಬೈ ಇಂಟರ್‌ನ್ಯಾಶನಲ್ ಕ್ರೀಡಾಂಗಣ.
ಭಾರತ ಪುರುಷರ ತಂಡ ವಿರುದ್ಧ ಒಮಾನ್: ರಾತ್ರಿ 8:00 ಗಂಟೆಗೆ (IST), ಶೇಖ್ ಝಾಯೆದ್ ಕ್ರೀಡಾಂಗಣ, ಅಬುಧಾಬಿ.
ನಾಕೌಟ್ ಮತ್ತು ಫೈನಲ್: ಲೀಗ್ ಹಂತದ ನಂತರ ಸೂಪರ್-4 ಪಂದ್ಯಗಳು ನಡೆಯಲಿದ್ದು, ಪ್ರಮುಖ ಫೈನಲ್ ಪಂದ್ಯವು ಶೀಘ್ರದಲ್ಲೇ ನಡೆಯಲಿದೆ.
ನೆರಪ್ರಸಾರ ಮತ್ತು ಲೈವ್ ಸ್ಟ್ರೀಮಿಂಗ್ ವಿವರಗಳು
ಭಾರತದಲ್ಲಿ ಮಹಿಳೆಯರ ಏಷ್ಯಾ ಕಪ್ 2026 ರ ಪಂದ್ಯಗಳನ್ನು ದೂರದರ್ಶನದಲ್ಲಿ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್‌ಗಳಲ್ಲಿ ನೇರವಾಗಿ ವೀಕ್ಷಿಸಬಹುದು. ಇಂಟರ್ನೆಟ್ ಅಥವಾ ಮೊಬೈಲ್ ಮೂಲಕ ಲೈವ್ ನೋಡಲು ಬಯಸುವ ಅಭಿಮಾನಿಗಳು ಸೋನಿಲಿವ್ ಆಪ್ ಹಾಗೂ ವೆಬ್‌ಸೈಟ್‌ನಲ್ಲಿ ಪಂದ್ಯಗಳನ್ನು ಉಚಿತ/ಚಂದಾದಾರಿಕೆ ಆಧಾರದ ಮೇಲೆ ವೀಕ್ಷಿಸಬಹುದಾಗಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ