Select Your Language

Notifications

webdunia
webdunia
webdunia
webdunia

ಕಾಮನಬಿಲ್ಲಿನ ನಾಡಿನಲ್ಲಿ ಕೊನೆಗೂ ಟೀಂ ಇಂಡಿಯಾ ಕೈಗೆ ಸಿಗದ ಸರಣಿ ಗೆಲುವು

ಕಾಮನಬಿಲ್ಲಿನ ನಾಡಿನಲ್ಲಿ ಕೊನೆಗೂ ಟೀಂ ಇಂಡಿಯಾ ಕೈಗೆ ಸಿಗದ ಸರಣಿ ಗೆಲುವು
ಕೇಪ್ ಟೌನ್ , ಶುಕ್ರವಾರ, 14 ಜನವರಿ 2022 (17:11 IST)
ಕೇಪ್ ಟೌನ್: ಎಲ್ಲಾ ದೇಶಗಳಲ್ಲೂ ದಿಗ್ವಿಜಯ ಸಾಧಿಸಿದ್ದ ಟೀಂ ಇಂಡಿಯಾಗೆ ದ.ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಕನಸಿತ್ತು. ಈ ಬಾರಿ ಕೊಹ್ಲಿ-ದ್ರಾವಿಡ್ ಕಾಂಬಿನೇಷನ್ ನಲ್ಲಿ ಭಾರತ ಟೆಸ್ಟ್ ಸರಣಿ ಗೆಲ್ಲುತ್ತದೆ ಎಂದೇ ಎಲ್ಲರ ನಂಬಿಕೆಯಾಗಿತ್ತು. ಆದರೆ ಕಾಮನಬಿಲ್ಲಿನ ನಾಡಿನಲ್ಲಿ ಟೆಸ್ಟ್ ಸರಣಿ ಗೆಲ್ಲುವ ಕನಸು ಕನಸಾಗಿಯೇ ಉಳಿದಿದೆ.

ಮೂರನೇ ಟೆಸ್ಟ್ ನಲ್ಲಿ ಆಫ್ರಿಕಾ ವಿರುದ್ಧ 7 ವಿಕೆಟ್ ಗಳಿಂದ ಸೋತ ಟೀಂ ಇಂಡಿಯಾ 1-2 ಅಂತರದಿಂದ ಸೋಲು ಅನುಭವಿಸಿತು. ನಿನ್ನೆ 101 ರನ್ ಗೆ 2 ವಿಕೆಟ್ ಕಳೆದುಕೊಂಡಿದ್ದ ಆಫ್ರಿಕಾ ಇಂದು ಕೇವಲ 3 ವಿಕೆಟ್ ಕಳೆದುಕೊಂಡು 212 ರನ್ ಗಳಿಸುವ ಮೂಲಕ ಗೆಲುವಿನ ಗುರಿ ತಲುಪಿತು. ಇದರೊಂದಿಗೆ ಈ ಬಾರಿ ದ.ಆಫ್ರಿಕಾದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಗೆಲ್ಲುವ ಮಹದಾಸೆ ಹೊತ್ತಿದ್ದ ಕನಸು ಭಗ್ನವಾಯಿತು.

ಈ ಸರಣಿ ಸೋಲಿಗೆ ಭಾರತ ತನ್ನ ಬ್ಯಾಟಿಗರನ್ನೇ ಹಳಿದುಕೊಳ್ಳಬೇಕು. ದ್ವಿತೀಯ ಇನಿಂಗ್ಸ್ ನಲ್ಲಿ 198 ರನ್ ಗಳ ಪೈಕಿ ರಿಷಬ್ ಪಂತ್ ಒಬ್ಬರೇ 100 ರನ್ ಗಳಿಸಿದ್ದರು. ಉಳಿದಂತೆ 28 ರನ್ ಇತರೆ ರೂಪದಲ್ಲಿ ಬಂದಿತ್ತು. ಹಾಗಿದ್ದರೆ ಬಾಕಿ ಉಳಿದ 9 ಬ್ಯಾಟಿಗರಿಂದ ಬಂದ ರನ್ ಗಳೆಷ್ಟೆಂದು ನೋಡಿದರೆ ಬ್ಯಾಟಿಗರ ವೈಫಲ್ಯ ಎಷ್ಟಿತ್ತು ಎಂಬುದು ಗೊತ್ತಾಗುತ್ತದೆ. ಇನ್ನಾದರೂ ಟೀಂ ಇಂಡಿಯಾ ಟೆಸ್ಟ್ ಆಡಬಲ್ಲ ಬ್ಯಾಟಿಗರನ್ನು ತಯಾರು ಮಾಡುವುದರತ್ತ ಗಮನಹರಿಸಲೇಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಟಂಪ್ ಮೈಕ್ರೋಫೋನ್ ಬಳಿ ಕೆಂಡ ಕಾರಿದ ವಿರಾಟ್ ಕೊಹ್ಲಿ ಆಂಡ್ ಟೀಂ