ಕ್ಯಾಪ್ಟನ್ ಧೋನಿಯ ರಿತಿ ಸ್ಫೋರ್ಟ್ಸ್‌ಗೆ ಸುರೇಶ್ ರೈನಾ ಗುಡ್ ಬೈ

ಮಂಗಳವಾರ, 28 ಜುಲೈ 2015 (20:34 IST)
ಮಹೇಂದ್ರ ಸಿಂಗ್ ಧೋನಿ ಕ್ರೀಡಾ ಮ್ಯಾನೇಜ್‌ಮೆಂಟ್ ಕಂಪನಿ ರಿತಿ ಸ್ಫೋರ್ಟ್ಸ್‌ ಅನ್ನು ಸುರೇಶ್ ರೈನಾ ತ್ಯಜಿಸಿದ್ದಾರೆ. ಧೋನಿಯ ಬಲಗೈ ಬಂಟರಲ್ಲಿ ಒಬ್ಬರಾಗಿದ್ದ ರೈನಾ ಐಒಎಸ್ ಸ್ಫೋರ್ಟ್ ಮತ್ತು ಎಂಟರ್‌ಟೇನ್‌ಮೆಂಟ್ ಮೂಲಕ ಹೆಚ್ಚಿನ ಮೊತ್ತದ ಮೇಲೆ ಕಣ್ಣಿರಿಸಿದ್ದಾರೆ.  ಈ ಕಂಪನಿಯು ಇತ್ತೀಚೆಗೆ ವೃತ್ತಿಪರ ಬಾಕ್ಸರ್ ವಿಜೇಂದ್ರ ಸಿಂಗ್ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. 
 
ಟೀಂ ಇಂಡಿಯಾದ ರವೀಂದ್ರ ಜಡೇಜಾ, ಮೋಹಿತ್ ಶರ್ಮಾ ಮತ್ತು ಭುವನೇಶ್ವರ್ ಎಲ್ಲರ ವಾಣಿಜ್ಯ ಹಿತಾಸಕ್ತಿಗಳನ್ನು  ರಿತಿ ಸಂಸ್ಥೆ ನಿರ್ವಹಿಸುತ್ತಿದೆ. ಐಪಿಎಲ್‌ನಲ್ಲಿ ಚೆನ್ನೈ ಭವಿಷ್ಯ ಅನಿಶ್ಚಿತತೆಯಿಂದ ಕೂಡಿದ್ದು, ಧೋನಿ ಕಿರು ಓವರುಗಳ ವೃತ್ತಿಜೀವನದಲ್ಲಿ ಇನ್ನು ಕೆಲವೇ ವರ್ಷ ಇರುವ ಸಾಧ್ಯತೆಯಿಂದ ಸುರೇಶ್ ರೈನಾ ವ್ಯಾವಹಾರಿಕ ನಡೆ ತೋರಿಸಿದ್ದಾರೆ.
 
 ಐಒಎಸ್ ಈಗ ರೈನಾ ಅವರ ಒಪ್ಪಂದಗಳು ಮತ್ತು ಬ್ರಾಂಡ್ ಸಹಯೋಗಗಳು, ಕಾರ್ಪೊರೇಟ್ ಪ್ರೊಫೈಲ್, ಪೇಟೆಂಟ್ ಮತ್ತು ಡಿಜಿಟಲ್ ಹಕ್ಕುಗಳು, ಚಿತ್ರಗಳು ಮತ್ತು ಸಾಮಾಜಿಕ ಜಾಲತಾಣಗಳು ಮುಂತಾದುವನ್ನು ನಿರ್ವಹಿಸುತ್ತದೆ. ಮೂರು ವರ್ಷಗಳ ಒಪ್ಪಂದದಿಂದ ಸುರೇಶ್ ರೈನಾ 35 ಕೋಟಿ ರೂ.ಗಳನ್ನು ಬಾಚಿಕೊಳ್ಳಲಿದ್ದಾರೆ. 
 

ವೆಬ್ದುನಿಯಾವನ್ನು ಓದಿ