Select Your Language

Notifications

webdunia
webdunia
webdunia
webdunia

ಅಮೆರಿಕದಲ್ಲಿ ಕ್ರಿಕೆಟ್‌ನ ಹೊಸ ಶಕೆ ಆರಂಭ: ಕುಂಬ್ಳೆ

ಅಮೆರಿಕದಲ್ಲಿ ಕ್ರಿಕೆಟ್‌ನ ಹೊಸ ಶಕೆ ಆರಂಭ: ಕುಂಬ್ಳೆ
ಫೋರ್ಟ್ ಲಾಡರ್‌ಡೇಲ್: , ಶುಕ್ರವಾರ, 26 ಆಗಸ್ಟ್ 2016 (19:14 IST)
ಐಸಿಸಿ ಪ್ರಮಾಣೀಕೃತ ಏಕಮಾತ್ರ ಸ್ಟೇಡಿಯಂ ಸೆಂಟ್ರಲ್ ಬ್ರೊವಾರ್ಡ್ ರೀಜನಲ್ ಪಾರ್ಕ್ ಸೌಲಭ್ಯಗಳಿಗೆ ಮೆಚ್ಚಿದ ಭಾರತದ ಕೋಚ್ ಅನಿಲ್ ಕುಂಬ್ಳೆ ವೆಸ್ಟ್ ಇಂಡೀಸ್ ವಿರುದ್ಧ 2 ಏಕದಿನ ಪಂದ್ಯಗಳಿಂದ ಅಮೆರಿಕದಲ್ಲಿ ಕ್ರಿಕೆಟ್‌ನ ಹೊಸ ಶಕೆಯ ಆರಂಭವಾಗಿದೆ ಎಂದಿದ್ದಾರೆ.
 
 ಭಾರತ ಮತ್ತು ವೆಸ್ಟ್ ಇಂಡೀಸ್ ಎರಡು ಪಂದ್ಯಗಳನ್ನು ಆಡುವಾಗ ಅಮೆರಿಕದಲ್ಲಿ ಕ್ರಿಕೆಟ್ ಭವಿಷ್ಯದ ಕಡೆ ಗಮನಹರಿಸಲಾಗುತ್ತದೆ.
ಇದೊಂದು ಅದ್ಭುತ ಉಪಕ್ರಮವಾಗಿದ್ದು, ನಾವು ಈ ಪಂದ್ಯಗಳಿಗೆ ಎದುರುನೋಡುತ್ತಿದ್ದೇವೆ. ಗುಣಮಟ್ಟದ ಕ್ರಿಕೆಟ್ ವೀಕ್ಷಿಸಲು ಬಯಸುವ ಅಮೆರಿಕ ಮತ್ತು ಅಪಾರ ಭಾರತೀಯರು, ವಲಸೆಗಾರರು ಇಲ್ಲಿಗೆ ಬರಲಿದ್ದಾರೆ.

ನಾವು ಹಿಂದೆ ವೆಸ್ಟ್ ಇಂಡೀಸ್‌ನಲ್ಲಿ ಆಡಿದಾಗಲೂ ಅಮೆರಿಕದಿಂದ ಅನೇಕ ಮಂದಿ ಭಾರತೀಯರು ಆಗಮಿಸಿದ್ದರು. ಆದ್ದರಿಂದ ಇದೊಂದು ಉತ್ತಮ ಅವಕಾಶವಾಗಿದ್ದು ಅಮೆರಿಕದಲ್ಲಿ ಕ್ರಿಕೆಟ್‌ನ ಹೊಸ ಶಕೆ ಆರಂಭವಾಗಲಿದೆ ಎಂದರು. ಇಲ್ಲಿ ಕಲ್ಪಿಸಿರುವ ಸೌಲಭ್ಯಗಳಿಂದ ಕೂಡ ಕುಂಬ್ಳೆ ಸಂತಸಗೊಂಡರು.

Share this Story:

Follow Webdunia kannada

ಮುಂದಿನ ಸುದ್ದಿ

ಎರಡು ದೈತ್ಯ ತಂಡಗಳ ನಡುವೆ ಅಮೆರಿಕದಲ್ಲಿ ಟಿ 20