Select Your Language

Notifications

webdunia
webdunia
webdunia
webdunia

ಯೂನಿಸ್ ಹಿಂದೆಸರಿದ ಬಳಿಕ ಪೂಜಾರಾ ಯಾರ್ಕ್‌ಶೈರ್ ಕೌಂಟಿಗೆ

ಯೂನಿಸ್ ಹಿಂದೆಸರಿದ ಬಳಿಕ ಪೂಜಾರಾ ಯಾರ್ಕ್‌ಶೈರ್ ಕೌಂಟಿಗೆ
ನವದೆಹಲಿ , ಗುರುವಾರ, 2 ಏಪ್ರಿಲ್ 2015 (16:39 IST)
ಭಾರತದ ಮಧ್ಯಮಕ್ರಮಾಂಕದ  ಟೆಸ್ಟ್ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರಾ  ಯೂನಿಸ್ ಖಾನ್‌ ಅವರಿಗೆ ಬದಲಿಯಾಗಿ ಸ್ವಲ್ಪ ಕಾಲ ಯಾರ್ಕ್‌ಶೈರ್ ಕೌಂಟಿ ತಂಡಕ್ಕೆ ಆಡಲಿದ್ದಾರೆ. 
 
ಪಾಕಿಸ್ತಾನದ ಮಧ್ಯಮಕ್ರಮಾಂಕದ ಬ್ಯಾಟ್ಸ್‌ಮನ್  ಯೂನಿಸ್ ಬಾಂಗ್ಲಾ ವಿರುದ್ಧ ಏಪ್ರಿಲ್ 28ರಿಂದ ಆರಂಭವಾಗುವ ಟೆಸ್ಟ್ ಟೆಸ್ಟ್ ಸರಣಿಯಲ್ಲಿ ಆಡದೇ  ಮೇ ಕೊನೆಯವರೆಗೆ ಯಾರ್ಕ್‌ಶೈರ್ ತಂಡಕ್ಕೆ ಆಡಲು ಒಪ್ಪಿದ್ದರು.
 
ಆದರೆ ದಿಢೀರನೇ ಮನಸ್ಸು ಬದಲಾಯಿಸಿ ಯೂನಿಸ್ ಬಾಂಗ್ಲಾ ಸರಣಿಯಲ್ಲಿ ಆಡಲು ನಿರ್ಧರಿಸಿದ್ದಾರೆ. ಯಾರ್ಕ್‌ಶೈರ್ ಕೂಡ ತಕ್ಷಣವೇ ಅವರ ಗುತ್ತಿಗೆಯನ್ನು ರದ್ದುಮಾಡಿ ಪೂಜಾರಾ ಅವರನ್ನು ಸಂಪರ್ಕಿಸಿದ್ದರಿಂದ ಯೂನಿಸ್ ಆಡಲು ಮುಂಚೆ ಒಪ್ಪಿಕೊಂಡಿದ್ದ ಅವಧಿವರೆಗೆ ಆಡಲಿದ್ದಾರೆ. ಭಾರತ ಬಾಂಗ್ಲಾಕ್ಕೆ ಟೆಸ್ಟ್ ಸರಣಿಗಾಗಿ ಪ್ರವಾಸ ಮಾಡಲಿದ್ದು, ಪೂಜಾರಾ ಮೇ ನಂತರ ಯಾರ್ಕ್‌ಶೈರ್ ಕ್ಲಬ್‌ನಲ್ಲಿ ಮುಂದುವರಿಯುವುದು ಅನುಮಾನ. 
 
ಯಾರ್ಕ್‌ಶೈರ್ ಕ್ರಿಕೆಟ್ ನಿರ್ದೇಶಕ ಮೋಕ್ಸನ್ ಈ ಕುರಿತು ಪ್ರತಿಕ್ರಿಯಿಸುತ್ತಾ, ಯೂನಿಸ್ ಜೊತೆ ಒಪ್ಪಂದ ಮುರಿದುಬಿದ್ದಿದ್ದು ದುರದೃಷ್ಟಕರ, ಆದರೆ ಪೂಜಾರಾ ಕೂಡ ಉತ್ಕೃಷ್ಟ ಆಟಗಾರರಾಗಿದ್ದು ಆರಂಭದಲ್ಲಿ ನಮಗೆ ದೊಡ್ಡ ಆಸ್ತಿಯಾಗಬಹುದು ಎಂದಿದ್ದಾರೆ. 

Share this Story:

Follow Webdunia kannada