ಟೆಸ್ಟ್ ಸರಣಿ ಆಡಲು ಭಾರತಕ್ಕೆ ಬರುತ್ತಿರುವ ನ್ಯೂಜಿಲೆಂಡ್ ತಂಡ ಮಂಗಳವಾರ ಪ್ರಕಟವಾಗಿದೆ. ವಿಶೇಷವೆಂದರೆ ಆಲ್‌ರೌಂಡರ್ ಜಿಮ್ಮಿ ನೀಶಾಮ್ ತಂಡಕ್ಕೆ ಹಿಂತಿರುಗಿದ್ದಾರೆ.
ಇತ್ತೀಚಿಗೆ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದ ತಂಡವನ್ನೇ ಉಳಿಸಿಕೊಂಡಿರುವ ನ್ಯೂಜಿಲೆಂಡ್ ಆಯ್ಕೆ ಸಮಿತಿ ಕೇವಲ ಮೂರು ಬದಲಾವಣೆಯನ್ನು ತಂದಿದೆ. ವೇಗಿ ಮ್ಯಾಟ್ ಹೆನ್ರಿ ಮತ್ತು ಆರಂಭಿಕ ಬ್ಯಾಟ್ಸ್‌ಮನ್ ಜೀತ್ ರಾವಲ್‌ಗೆ ಕೊಕ್ ನೀಡಲಾಗಿದೆ. ನೀಶಾಮ್ ಅವರನ್ನು ಮರಳಿ ಕರೆ ತರಲಾಗಿದೆ.
ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಆಸ್ಟೇಲಿಯಾ ವಿರುದ್ಧದ ಸರಣಿಯನ್ನಾಡುತ್ತಿದ್ದ ವೇಳೆ ಬೆನ್ನುನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನೀಶಾಮ್ ಅರ್ಧಕ್ಕೆ ತವರಿಗೆ ಮರಳಿದ್ದರು.
ಕಾನ್ಪುರ , ಕೊಲ್ಕೊತಾ ಮತ್ತು ಇಂದೋರ್‌ನಲ್ಲಿ ಮೂರು ಟೆಸ್ಟ್ ಪಂದ್ಯಗಳನ್ನಾಡಲಿರುವ ಕಿವೀಸ್ ಅಕ್ಟೋಬರ್ 16ರಿಂದ 29ರವರೆಗೆ ಐದು ಏಕದಿನ ಪಂದ್ಯಗಳನ್ನಾಡಲಿದೆ.
ಇತ್ತೀಚಿಗೆ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯನ್ನು ಸೋತಿರುವ ನ್ಯೂಜಿಲೆಂಡ್ ಸದ್ಯ ಐಸಿಸಿ ಶ್ರೇಯಾಂಕದಲ್ಲಿ 7 ನೇ ಸ್ಥಾನದಲ್ಲಿದ್ದು,ಭಾರತ 2 ನೇ ಸ್ಥಾನದಲ್ಲಿದೆ.
ತಂಡ ಇಂತಿದೆ: ಕೇನ್ ವಿಲಿಯಮ್ಸ್ ( ನಾಯಕ) , ಟ್ರೆಂಟ್ ಬ್ರಾಸ್‌ವೆಲ್, ಮಾರ್ಕ್ ಕ್ರೇಗ್, ಮಾರ್ಟಿನ್ ಗಪ್ಟಿಲ್, ಟಾಮ್ ಲಥಾಮನ್, ಜಿಮ್ಮಿ ನೀಶಾಮ್, ಹೆನ್ನಿ ನಿಕೋಲ್ಸ್, ಲೂಕ್ ರಾಂಚಿ, ಮಿಚೆಲ್ ಸ್ಯಾಂಟ್ನರ್ , ಐಸ್ ಲೋಧಿ, ಟಿಮ್ ಸೌಥಿ, ರಾಸ್ ಟೇಲರ್, ನೀಲ್ ವ್ಯಾಗ್ನರ್, ಬಿಜೆ ವಾಟ್ಲಿಂಗ್.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ