Select Your Language

Notifications

webdunia
webdunia
webdunia
webdunia

ಮಿಥಾಲಿ ರಾಜ್ 5000 ರನ್ ದಾಖಲೆ : 2-2ರಿಂದ ಭಾರತ, ನ್ಯೂಜಿಲೆಂಡ್ ಸರಣಿ ಸಮ

ಮಿಥಾಲಿ ರಾಜ್ 5000 ರನ್ ದಾಖಲೆ : 2-2ರಿಂದ ಭಾರತ, ನ್ಯೂಜಿಲೆಂಡ್ ಸರಣಿ ಸಮ
ಬೆಂಗಳೂರು , ಸೋಮವಾರ, 6 ಜುಲೈ 2015 (20:23 IST)
ನಾಯಕಿ ಮಿಥಾಲಿ  ರಾಜ್ ಅವರ ಅಜೇಯ 81 ರನ್ ನೆರವಿನಿಂದ ಭಾರತ ತಂಡ ನ್ಯೂಜಿಲೆಂಡ್ ತಂಡವನ್ನು ನಾಲ್ಕನೇ ಏಕದಿನದಲ್ಲಿ ಎಂಟು ವಿಕೆಟ್‌ಗಳಿಂದ ಸೋಲಿಸುವ ಮೂಲಕ  ಐದು ಪಂದ್ಯಗಳ ಸರಣಿಯನ್ನು 2-2ರಿಂದ ಡ್ರಾ ಮಾಡಿಕೊಂಡಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ  ನಡೆದ ಪಂದ್ಯದಲ್ಲಿ 221 ರನ್ ಬೆನ್ನಟ್ಟಿದ ಆತಿಥೇಯರು 34 ಎಸೆತಗಳು ಬಾಕಿವುಳಿದಿರುವಂತೆ ಗೆಲುವು ಗಳಿಸಿತು. ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ  ಮಿಥಾಲಿ ಸ್ಮೃತಿ ಮಂದನಾ(66) ಜೊತೆಗೆ  2ನೇ ವಿಕೆಟ್‌ಗೆ 124 ರನ್ ಜೊತೆಯಾಟವಾಡಿದರು. 
 
ಭಾರತದ ಮಹಿಳಾ ಕ್ರಿಕೆಟ್‌ ಇತಿಹಾಸದಲ್ಲಿ  ನಾಯಕಿ ಮಿಥಾಲಿ ರಾಜ್  ಏಕ ದಿನ ಪಂದ್ಯಗಳಲ್ಲಿ 5000 ರನ್ ಮೈಲಿಗಲ್ಲನ್ನು ಮುಟ್ಟುವ ಮೂಲಕ ಹೊಸ ಅಧ್ಯಾಯವನ್ನು ತೆರೆದರು.  ಈ ಸಾಧನೆ ಮಾಡಿದ ಭಾರತದ ಪ್ರಥಮ  ಆಟಗಾರ್ತಿ ಎನಿಸಿದರು ಮತ್ತು ಒಟ್ಟಾರೆಯಾಗಿ ಎರಡನೇ ಆಟಗಾರ್ತಿಯಾದರು. 
 
ಇದಕ್ಕೆ ಮುಂಚೆ ಸೋಫಿ ಡೆವೈನ್ 102 ಎಸೆತಗಳಲ್ಲಿ 89 ರನ್ ಬಾರಿಸಿ ನ್ಯೂಜಿಲೆಂಡ್ ಮಹಿಳೆಯರು 220 ರನ್ ಸ್ಕೋರ್ ಮಾಡಲು ನೆರವಾದರು. ಬಲಗೈ ಮಧ್ಯಮ ವೇಗಿ ನಿರಂಜನಾ ನಾಗರಾಜನ್ ಮತ್ತು ಎಡಗೈ ಸ್ಪಿನ್ನರ್ ರಾಜೇಶ್ವರಿ ಗಾಯಕ್ವಾಡ್ ತಲಾ ಮೂರು ವಿಕೆಟ್‌ಗಳನ್ನು ಕಬಳಿಸಿ ನ್ಯೂಜಿಲೆಂಡ್ ತಂಡವನ್ನು ನಿರ್ಬಂಧಿಸಿದರು.
 ಸೂಜಿ ಬೇಟ್ಸ್ ನಾಯಕತ್ವದ ಕಿವೀಸ್ ಮೊದಲ ಪಂದ್ಯದಲ್ಲಿ ಸೋಲಪ್ಪಿದರೂ ಮುಂದಿನ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಮಿಥಾಲಿಯ ಭಾರತ ತಂಡದ ವಿರುದ್ಧ ಆಟದ ಎಲ್ಲಾ ವಿಭಾಗಗಳಲ್ಲೂ ಮೇಲುಗೈ ಸಾಧಿಸಿ 2-1ರಿಂದ ಮುನ್ನಡೆ ಸಾಧಿಸಿತ್ತು. 
 

Share this Story:

Follow Webdunia kannada