Select Your Language

Notifications

webdunia
webdunia
webdunia
webdunia

ಇಂಗ್ಲೆಂಡ್ ತಂಡವನ್ನು ಹಗುರವಾಗಿ ಪರಿಗಣಿಸಬೇಡಿ: ಟೀಂ ಇಂಡಿಯಾ ಕೋಚ್ ಅನಿಲ್ ಕುಂಬ್ಳೆ

ಇಂಗ್ಲೆಂಡ್ ತಂಡವನ್ನು ಹಗುರವಾಗಿ ಪರಿಗಣಿಸಬೇಡಿ: ಟೀಂ ಇಂಡಿಯಾ ಕೋಚ್ ಅನಿಲ್ ಕುಂಬ್ಳೆ
Rajkot , ಮಂಗಳವಾರ, 8 ನವೆಂಬರ್ 2016 (11:24 IST)
ರಾಜಕೋಟ್: ಬಾಂಗ್ಲಾದೇಶ ವಿರುದ್ಧ ಸೋತು ಸಂಕಷ್ಟದಲ್ಲಿರುವ ಇಂಗ್ಲೆಂಡ್ ತಂಡವನ್ನು ಹಗುರವಾಗಿ ಪರಿಗಣಿಸಬೇಡಿ ಎಂದು ಕೋಚ್ ಅನಿಲ್ ಕುಂಬ್ಳೆ ಟೀಂ ಇಂಡಿಯಾ ಸದಸ್ಯರಿಗೆ ಎಚ್ಚರಿಕೆ ನೀಡಿದ್ದಾರೆ.

ಭಾರತ ಇಂಗ್ಲೆಂಡ್ ವಿರುದ್ಧ ಕಳೆದ ಮೂರು ಟೆಸ್ಟ್ ಸರಣಿಗಳನ್ನು ಸೋತಿದೆ. ಆದರೂ ಗತಕಾಲದ ಲೆಕ್ಕಾಚಾರದಲ್ಲಿ ವರ್ತಮಾನವನ್ನು ನೋಡಲಾಗದು. ನ್ಯೂಜಿಲೆಂಡ್ ವಿರುದ್ಧ ಯೋಜನೆಗಳನ್ನು ಕಾರ್ಯರೂಪಕ್ಕೆ ಇಳಿಸಿದಂತೆ ಇಲ್ಲಿಯೂ ಮಾಡಿ ಎಂದು ತಮ್ಮ ಹುಡುಗರಿಗೆ ಕಿವಿ ಮಾತು ಹೇಳಿದ್ದಾರೆ.

“ಅಲೆಸ್ಟರ್ ಕುಕ್ ಇಲ್ಲಿ ಹಲವು ಬಾರಿ ಆಡಿದ್ದಾರೆ. ಜೋ ರೂಟ್ ಕೂಡಾ ಪ್ರಮುಖ ಆಟಗಾರ. ಅವರ ಬೌಲಿಂಗ್ ಕೂಡಾ ಉತ್ತಮವಾಗಿದೆ.  ಆದರೆ ಹಾಗಂತ ನಮ್ಮ ಗಮನ ಅವರ ಪ್ರಮುಖ ಆಟಗಾರರು ಮಾತ್ರವಾಗಿರಬಾರದು” ಎಂದು ಕುಂಬ್ಳೆ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಅಜಿಂಕ್ಯಾ ರೆಹಾನೆ ಹೊಗಳಿಕೆ