ಗಾಯಗೊಂಡಿರುವ ಪೃಥ್ವಿ ಶಾ ಸ್ಥಿತಿ ಏನಾಗಿದೆ ಗೊತ್ತಾ? ರವಿಶಾಸ್ತ್ರಿ ಹೇಳಿದ್ದೇನು?

ಗುರುವಾರ, 6 ಡಿಸೆಂಬರ್ 2018 (09:30 IST)
ಅಡಿಲೇಡ್: ಆಸ್ಟ್ರೇಲಿಯಾದಲ್ಲಿ ಮೊದಲ ಬಾರಿಗೆ ಟೀಂ ಇಂಡಿಯಾವನ್ನು ಪ್ರತಿನಿಧಿಸುವ ಅವಕಾಶ ಪಡೆದ ಖುಷಿಯಲ್ಲಿದ್ದ ಯುವ ಪ್ರತಿಭಾವಂತ ಬ್ಯಾಟ್ಸ್ ಮನ್ ಗಾಯದಿಂದಾಗಿ ಪೆವಿಲಿಯನ್ ನಲ್ಲಿ ಕೂರಬೇಕಾಗಿ ಬಂದಿದೆ.


ಅಭ್ಯಾಸ ಪಂದ್ಯದಲ್ಲಿ ಉತ್ತಮ ಅರ್ಧಶತಕ ಸಿಡಿಸಿದ್ದ ಪೃಥ್ವಿ ಶಾ ಬಗ್ಗೆ ಎಲ್ಲರಲ್ಲೂ ಅಪಾರ ನಿರೀಕ್ಷೆಯಿತ್ತು. ಅವರನ್ನು ಜ್ಯೂನಿಯರ್ ತೆಂಡುಲ್ಕರ್ ಎಂದೇ ಪರಿಗಣಿಸಲಾಗುತ್ತಿತ್ತು. ಆದರೆ ಕಾಲು ಉಳುಕಿಸಿಕೊಂಡು ಮೊದಲ ಟೆಸ್ಟ್ ನಿಂದ ಹೊರಗುಳಿದಿರುವ ಪೃಥ್ವಿ ಶಾಗೆ ಎರಡನೇ ಟೆಸ್ಟ್ ಆಡುವ ಅವಕಾಶವೂ ಇಲ್ಲದಾಗಿದೆ.

ಬಹುಶಃ ಅವರು ಮೂರನೇ ಟೆಸ್ಟ್ ಪಂದ್ಯದ ವೇಳೆ ಚೇತರಿಸಿಕೊಂಡು ತಂಡಕ್ಕೆ ಬರಬಹುದು ಎಂದು ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ. ‘ಪೃಥ್ವಿ ಚೇತರಿಸಿಕೊಳ್ಳುತ್ತಿದ್ದಾರೆ. ಈಗ ನಡೆದಾಡಲು ಶುರು ಮಾಡಿದ್ದಾರೆ. ಬಹುಶಃ ಈ ವಾರಂತ್ಯಕ್ಕೆ ಅವರು ಅಭ‍್ಯಾಸಕ್ಕೆ ಮರಳಬಹುದು. ಅವರನ್ನು ಈ ಸ್ಥಿತಿಯಲ್ಲಿ ನೋಡಲು ಬೇಸರವಾಗುತ್ತದೆ. ಮೂರನೇ ಟೆಸ್ಟ್ ವೇಳೆಗೆ ಅವರು ಚೇತರಿಸಿಕೊಳ್ಳುವ ವಿಶ್ವಾಸವಿದೆ’ ಎಂದು ರವಿಶಾಸ್ತ್ರಿ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಭಾರತ-ಆಸ್ಟ್ರೇಲಿಯಾ ಟೆಸ್ಟ್: ಗಡಿಬಿಡಿಯಲ್ಲಿ ವಿಕೆಟ್ ಕೈ ಚೆಲ್ಲಿದ ಟೀಂ ಇಂಡಿಯಾ