Select Your Language

Notifications

webdunia
webdunia
webdunia
webdunia

ಭುವನೇಶ್ವರ್ ಮಾರಕ ದಾಳಿ, ಅಶ್ವಿನ್ ಶತಕ: ಭಾರತಕ್ಕೆ 2-0ಯಿಂದ ಸರಣಿ ಜಯ

ಭುವನೇಶ್ವರ್ ಮಾರಕ ದಾಳಿ, ಅಶ್ವಿನ್ ಶತಕ: ಭಾರತಕ್ಕೆ 2-0ಯಿಂದ ಸರಣಿ ಜಯ
ಸೇಂಟ್ ಲೂಸಿಯಾ: , ಸೋಮವಾರ, 15 ಆಗಸ್ಟ್ 2016 (13:39 IST)
ಭಾರತ 3ನೇ ಟೆಸ್ಟ್ ಪಂದ್ಯದ ಅಂತಿಮ ದಿನದಂದು ವೆಸ್ಟ್ ಇಂಡೀಸ್ ತಂಡವನ್ನು 108 ರನ್‌ಗಳಿಗೆ ಆಲೌಟ್  ಮಾಡುವ ಮೂಲಕ 237 ರನ್ ಅಂತರದಿಂದ ಜಯಗಳಿಸಿ ಸರಣಿಯನ್ನು 2-0ಯಿಂದ ಗೆದ್ದುಕೊಂಡಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ವೆಸ್ಟ್ ಇಂ‌ಡೀಸ್ 225 ರನ್‌ಗಳಿಗೆ ಆಲೌಟ್ ಆದ ಬಳಿಕ ಭಾರತ 7 ವಿಕೆಟ್‌ಗೆ 217 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು.
 
ಭಾರತದ ವೇಗಿ ಭುವನೇಶ್ವರ್ ಕುಮಾರ್ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ವಿಂಡೀಸ್ ಬೇಗನೇ ಔಟಾಯಿತು. ಭುವನೇಶ್ವರ್ 5 ವಿಕೆಟ್ ಕಬಳಿಸಿದರು ಮತ್ತು ಅಶ್ವಿನ್‌ಗೆ 2 ವಿಕೆಟ್ ದಕ್ಕಿತು.
 
59 ರನ್‌ಗಳೊಂದಿಗೆ ಡೆರೆನ್ ಬ್ರೇವೊ ಸ್ವಲ್ಪ ಪ್ರತಿರೋಧ ತೋರಿದರು. ಭಾರತ ಬೌಲಿಂಗ್‌ನ ವೇಗ ಮತ್ತು ಸ್ಪಿನ್ ಎದುರಿಸಲು ತಾಂತ್ರಿಕವಾಗಿ ಸಜ್ಜಾಗಿರದ ವಿಂಡೀಸ್ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿ 108 ರನ್‌ಗಳಿಗೆ ಬೌಲ್ಡ್ ಆಗಿದೆ.
 
ವಿಂಡೀಸ್ ಎರಡನೇ ಇನ್ನಿಂಗ್ಸ್‌ನಲ್ಲಿ ವೇಗಿ ಮೊಹಮ್ಮದ್ ಶಮಿ ಮಾರಕ ದಾಳಿಯ ಮೂಲಕ 11ಕ್ಕೆ 3 ವಿಕೆಟ್ ಕಬಳಿಸಿದರು. ಇದು ಭಾರತಕ್ಕೆ 2-0 ಸರಣಿ ಜಯ ತಂದುಕೊಟ್ಟಿದೆಯಲ್ಲದೇ ಕ್ಯಾರಿಬಿಯನ್‌ನಲ್ಲಿ ಆಡಿದ 11 ಸರಣಿಗಳಲ್ಲಿ 1ಕ್ಕಿಂತ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಗೆದ್ದಿರುವುದು ಇದೇ ಮೊದಲಾಗಿದೆ. ಜಮೈಕಾದಲ್ಲಿ ನಾವು ಏನು ತಪ್ಪು ಮಾಡಿದ್ದೇವೆಂದು ಗುರುತಿಸಿ ಇಲ್ಲಿ ಅವುಗಳನ್ನು ಸರಿಪಡಿಸಿಕೊಂಡಿದ್ದಾಗಿ ಕೊಹ್ಲಿ ಹೇಳಿದರು.
 
ಸ್ಕೋರು ವಿವರ
ಭಾರತ ಮೊದಲ ಇನ್ನಿಂಗ್ಸ್
 353ಕ್ಕೆ 10 ವಿಕೆಟ್
ಲೋಕೇಶ್ ರಾಹುಲ್ 50, ರಹಾನೆ 35, ರವಿಚಂದ್ರನ್ ಅಶ್ವಿನ್ 118, ವೃದ್ಧಿಮಾನ್ ಸಹಾ 104,
ವಿಕೆಟ್ ಪತನ
9-1 (ಶಿಖರ್ ಧವನ್, 2.3), 19-2 (ವಿರಾಟ್ ಕೊಹ್ಲಿ, 5.3), 77-3 (ಲೋಕೇಶ್ ರಾಹುಲ್, 19.3), 87-4 (ರೋಹಿತ್ ಶರ್ಮಾ, 25.6), 126-5 (ಅಜಿಂಕ್ಯ ರಹಾನೆ, 49.3), 339-6 (ವೃದ್ಧಿಮಾನ್ ಸಹಾ, 121.5), 351-7 (ರವೀಂದ್ರ ಜಡೇಜ 127.1), 353-8 (ಭುವನೇಶ್ವರ ಕುಮಾರ್, 128.6), 353-9 (ರವಿಚಂದ್ರನ್ ಅಶ್ವಿನ್, 129.1), 353-10 (ಇಶಾಂತ್ ಶರ್ಮಾ, 129.4)
 ಬೌಲಿಂಗ್ ವಿವರ
ಗೇಬ್ರಿಯಲ್ 2 ವಿಕೆಟ್, ಅಲ್ಜಾರಿ ಜೋಸೆಫ್ 3 ವಿಕೆಟ್, ಕಮ್ಮಿನ್ಸ್ 3, ರೋಸ್ಟನ್ ಚೇಸ್ 2
ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್ಸ್ ಒಟ್ಟು 225ಕ್ಕೆ 10 ವಿಕೆಟ್
ಬ್ರಾತ್‌ವೈಟ್ 64, ಲೀಯಾನ್ ಜಾನ್ಸನ್ 23, ಬ್ರೇವೋ 29, ಸ್ಯಾಮುಯಲ್ಸ್ 48, ಬ್ಲಾಕ್‌ವುಡ್ 20 ಡೌರ್ವಿಕ್ 18.
 ವಿಕೆಟ್ ಪತನ
59-1 (ಲಿಯಾನ್ ಜಾನ್ಸನ್, 24), 129-2 (ಡ್ಯಾರೆನ್ ಬ್ರಾವೊ, 55.4), 135-3 (ಕ್ರೈಗ್ ಬ್ರಾಥ್ವೈಟ್, 58.1), 202-4 (ಜರ್ಮೈನ್ ಬ್ಲ್ಯಾಕ್ 87.2), 203-5 (ಮರ್ಲಾನ್ ಸ್ಯಾಮುಯೆಲ್ಸ್, 89.5), 205-6 (ರೋಸ್ಟನ್ ಚೇಸ್, 90.5), 212-7 (ಜೇಸನ್ ಹೋಲ್ಡರ್, 93.5), 212-8 (ಅಲ್ಜಾರಿ ಜೋಸೆಫ್, 95.4), 221-9 (ಮಿಗುಯೆಲ್ ಕಮಿನ್ಸ್, 102.3), 225-10 (ಶೇನ್ ಡೌರಿಕ್, 103.4)
ಬೌಲಿಂಗ್ ವಿವರ
ಭುವನೇಶ್ವರ್ ಕುಮಾರ್ 5 ವಿಕೆಟ್, ಅಶ್ವಿನ್ 2, ಇಶಾಂತ್ 1 , ಜಡೇಜಾ 1 ವಿಕೆಟ್. 
 ಭಾರತ ಎರಡನೇ ಇನ್ನಿಂಗ್ಸ್ 217ಕ್ಕೆ 7 ವಿಕೆಟ್
ಲೋಕೇಶ್ ರಾಹುಲ್ 29, ಶಿಖರ್ ಧವನ್ 26, ರಹಾನೆ 78, ರೋಹಿತ್ ಶರ್ಮಾ 41 ರನ್
ವಿಕೆಟ್ ಪತನ 
49-1 (ಲೋಕೇಶ್ ರಾಹುಲ್, 7.3), 58-2 (ವಿರಾಟ್ ಕೊಹ್ಲಿ, 11.6), 72-3 (ಶಿಖರ್ ಧವನ್ 16.3), 157-4 (ರೋಹಿತ್ ಶರ್ಮಾ, 39.2), 181-5 (ವೃದ್ಧಿಮಾನ್ ಸಹಾ, 43.3), 213-6 (ರವೀಂದ್ರ ಜಡೇಜ 47.2), 217-7 (ರವಿಚಂದ್ರನ್ ಅಶ್ವಿನ್, 47.6)
 ಬೌಲಿಂಗ್ ವಿವರ
ಕಮ್ಮಿನ್ಸ್ 6 ವಿಕೆಟ್, ರೋಸ್ಟನ್ ಚೇಸ್ 1 ವಿಕೆಟ್
ವೆಸ್ಟ್ ಇಂಡೀಸ್ 2ನೇ ಇನ್ನಿಂಗ್ಸ್ 108ಕ್ಕೆ ಆಲೌಟ್ 
ಬ್ರೇವೊ 59, ಸ್ಯಾಮುಯಲ್ಸ್ 12
 ವಿಕೆಟ್ ಪತನ 
4-1 (ಲಿಯಾನ್ ಜಾನ್ಸನ್, 3.5), 4-2 (ಕ್ರೈಗ್ ಬ್ರಾಥ್ವೈಟ್, 4.2), 35-3 (ಮರ್ಲಾನ್ ಸ್ಯಾಮುಯೆಲ್ಸ್ 13.2), 64-4 (ರೋಸ್ಟನ್ ಚೇಸ್, 25.2), 68-5 (ಜರ್ಮೈನ್ ಬ್ಲ್ಯಾಕ್ 29.1), 84-6 (ಶೇನ್ ಡೌರಿಕ್, 37.1), 88-7 (ಜೇಸನ್ ಹೋಲ್ಡರ್, 39.5), 95-8 (ಡ್ಯಾರೆನ್ ಬ್ರಾವೊ, 41.4), 95-9 (ಅಲ್‌ಜಾರಿ ಜೋಸೆಫ್, 42.1), 108-10 (ಶಾನನ್ ಗ್ಯಾಬ್ರಿಯಲ್, 47.3)
ಬೌಲಿಂಗ್ ವಿವರ
ಭುವನೇಶ್ವರ್ ಕುಮಾರ್ 1 ವಿಕೆಟ್, ಶಮಿ 3 ವಿಕೆಟ್, ಇಶಾಂತ್ ಶರ್ಮಾ 2, ಜಡೇಜಾ 2 ವಿಕೆಟ್ 

\ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೊಮ್ಮೆ 100 ಮೀಟರ್ ಓಟದ ರಾಜ ಎಂದು ಉಸೇನ್ ಬೋಲ್ಟ್ ಸಾಬೀತು