Select Your Language

Notifications

webdunia
webdunia
webdunia
webdunia

ಇಂದಿನ ನಿಮ್ಮ ಭವಿಷ್ಯ ನೋಡಲು ಇಲ್ಲಿ ಕ್ಲಿಕ್ಕಿಸಿ

ಇಂದಿನ ನಿಮ್ಮ ಭವಿಷ್ಯ ನೋಡಲು ಇಲ್ಲಿ ಕ್ಲಿಕ್ಕಿಸಿ
ಮೇಷ , ಮಂಗಳವಾರ, 10 ಸೆಪ್ಟಂಬರ್ 2013 (11:31 IST)
ಈ ರಾಶಿಯ ವ್ಯಕ್ತಿಗಳಿಗೆ ಹೊತಸಾದ ಉಲ್ಲಾಸವನ್ನು ತರಲಿದೆ. ಇತರರಿಗೆ ಮಾದರಿಯಾಗಲಿದ್ದೀರಿ. ಆತ್ಮೀಯ ಗೆಳೆಯರ ಸಂಪರ್ಕದೊಂದಿಗೆ ತಮಾಷೆ, ಹರಟೆಯಲ್ಲಿ ಭಾಗಿಯಾಗುವ ಸಾಧ್ಯತೆ. ನಿಮ್ಮ ಇಷ್ಟದ ಸ್ಥಳಕ್ಕೆ ಅಚ್ಚರಿಯ ಪ್ರಯಾಣ ಬೆಳೆಸುವ ಸಾಧ್ಯತೆಗಳಿವೆ. ವಿಶೇಷ ಔತಣಕೂಟಗಳಲ್ಲಿ ಪಾಲ್ಗೊಳ್ಳುತ್ತೀರಿ.

ವೃಷಭ: ಈ ರಾಶಿಯವರು ಕೆಲಮಟ್ಟಿಗೆ ನಾಚಿಕೆಪಡುವ, ವಾಸ್ತವತೆಯನ್ನು ಅರಿಯುವ ಸರಳ ಸ್ವಭಾವದ ವ್ಯಕ್ತಿಗಳಾಗಿರುತ್ತಾರೆ. ಐಷಾರಾಮಿ ಜೀವನ ಬಯಸುವುದಿಲ್ಲ. ಸರಳವಾಗಿ ಯಾರ ಹಂಗಿಲ್ಲದ ಬದುಕನ್ನು ಬಯಸುತ್ತಾರೆ. ದುಂದುವೆಚ್ಚ ಮಾಡುವವರಲ್ಲ. ನಿಸರ್ಗದ ಚೆಲುವಿಗೆ, ಪುಸ್ತಕಗಳಿಗೆ ಮಾರುಹೋಗುವ ಗುಣವನ್ನು ಹೊಂದಿರುತ್ತಾರೆ.

ಮಿಥುನ: ಈ ರಾಶಿಯವರಿಗೆ ಉಡುಗೊರೆ ತುಂಬಾ ಇಷ್ಟವಾಗುತ್ತದೆ. ಕಣ್ಣಿಗೆ ಆಕರ್ಷಕವಾಗಿ ಕಾಣುವ ಉಡುಗೊರೆ ಇವರ ಮನವನ್ನು ಸೆಳೆಯುತ್ತದೆ. ನೀವು ಪ್ರೀತಿಸುವ ವ್ಯಕ್ತಿಗಳಿಗೆ ಹೊಸ ವರ್ಷದಲ್ಲಿ ನೀಡಿದ ಕೊಡುಗೆ ತುಂಬಾ ಸ್ಮರಣಿಯವಾಗಿರಲಿದೆ. ನಿಮ್ಮ ಆಸೆಗಳು ಈಡೇರಲಿವೆ. ಬಯಸಿದ ವ್ಯಕ್ತಿಯೊಂದಿಗೆ ನಿಮ್ಮ ಮದುವೆಯಾಗಲಿದೆ.

ಕಟಕ: ಈ ರಾಶಿಯವರಿಗೆ ಉಡುಗೊರೆಯಾಗಿ ಯಾವ ವಸ್ತುಗಳನ್ನು ನೀಡಿದರೂ ಪ್ರೀತಿಯಿಂದ ಸ್ವೀಕರಿಸುತ್ತಾರೆ. ಉಡುಗೊರೆಯ ಮೌಲ್ಯಕ್ಕಿಂತ ಉಡುಗೊರೆ ನೀಡಿದ ವ್ಯಕ್ತಿ ಪ್ರಮುಖವಾಗುತ್ತಾನೆ. ನಿಮ್ಮ ಜೀವನದಲ್ಲಿ ಹೊಸ ಅವಕಾಶಗಳು ಎದುರಾಗಲಿವೆ. ವಿವಾಹ ಬಂಧನ ಸಾಧ್ಯತೆ. ದುಂದು ವೆಚ್ಚ ಬೇಡ. ಗೆಳೆಯರನ್ನು ನಂಬಿ ಹಣಕಾಸಿನ ವ್ಯವಹಾರ ಮಾಡಬೇಡಿ.

ಸಿಂಹ: ಈ ರಾಶಿಯ ವ್ಯಕ್ತಿಗಳು ವಿಶ್ವಾಸಪಾತ್ರ ವ್ಯಕ್ತಿಗಳಾಗಿರುತ್ತಾರೆ. ಸದಾ ಕೇಂದ್ರಬಿಂದುವಾಗಲು ಬಯಸುತ್ತಾರೆ. ಕೆಲ ಬಾರಿ ಮಕ್ಕಳಂತೆ ಕೂಡಾ ವರ್ತಿಸಿ ತಮಾಷೆಗೆ ಶರಣಾಗುತ್ತಾರೆ. ಆಕರ್ಷಕ ಉಡುಗೊರೆಗಳನ್ನು ನೀಡಿದಲ್ಲಿ ತುಂಬಾ ಸಂತಸದಿಂದ ಸ್ವೀಕರಿಸುತ್ತಾರೆ. ಸಂಜೆಯ ಸಮಯದಲ್ಲಿ ಪ್ರೀತಿ ಪಾತ್ರರೊಂದಿಗೆ ಕಳೆಯುವುದು ತುಂಬಾ ಇಷ್ಟವಾಗುತ್ತದೆ.

ಕನ್ಯಾ: ಈ ರಾಶಿಯ ವ್ಯಕ್ತಿಗಳು ಇತರರ ಜೀವನೋದ್ಧಾರಕ್ಕಾಗಿ ಶ್ರಮಿಸುತ್ತಾರೆ. ಇಂತಹ ವ್ಯಕ್ತಿಗಳಿಗೆ ಭಾರಿ ಮೌಲ್ಯದ ಉಡುಗೊರೆಗಳು ಇಷ್ಟವಾಗುತ್ತವೆ. ಶಿಸ್ತುಬದ್ಧ ಜೀವನದಿಂದಾಗಿ ಇತರರಿಗೆ ಮಾದರಿಯಾಗಿ ಕಾಣಿಸುತ್ತಾರೆ. ನೃತ್ಯ, ಪುಸ್ತಕಗಳನ್ನು ತುಂಬಾ ಇಷ್ಟಪಡುತ್ತಾರೆ. ರುಚಿ, ರುಚಿಯಾದ ಅಡುಗೆ ಮಾಡುವುದರಲ್ಲೂ ಪ್ರವೀಣರಾಗಿರುತ್ತಾರೆ.

ತುಲಾ: ಈ ರಾಶಿಯ ವ್ಯಕ್ತಿಗಳಿಗೆ ಸುಂದರವಾದ, ಕಲಾಕೃತಿಯ ಉಡುಗೊರೆಗಳು ತುಂಬಾ ಇಷ್ಟವಾಗುತ್ತವೆ. ಸುಂದರವಾದ ಹೂವುಗಳು, ಫ್ಯಾಶನ್ ಬಟ್ಟೆಗಳು, ಚಿನ್ನಾಭರಣ ಮತ್ತು ಸುಗಂಧ ದ್ರವ್ಯಗಳು ಇಷ್ಟವಾಗುತ್ತವೆ. ಹೊಸ ವರ್ಷದಲ್ಲಿ ನಿಮಗೆ ಇಷ್ಟವಾದ ಸ್ಥಳಕ್ಕೆ ಪ್ರವಾಸಕ್ಕೆ ತೆರಳುವ ಅವಕಾಶಗಳಿವೆ. ನೀವು ಮೆಚ್ಚಿದವರೊಂದಿಗೆ ವಿವಾಹವಾಗಲಿದೆ. ಗೆಳೆಯರನ್ನು ನಂಬಿ ಹಣದ ವಹಿವಾಟು ಮಾಡದಿರುವುದು ಲೇಸು.

ವೃಶ್ಚಿಕ: ಈ ರಾಶಿಯವರು ವಿಶೇಷ ಸಂದರ್ಭಗಳಲ್ಲಿ ತುಂಬಾ ತಮಾಷೆಯ ಗುಣವನ್ನು ಹೊಂದಿರುತ್ತಾರೆ. ತಾವು ನಕ್ಕು ಇತರರನ್ನು ನಗಿಸುವ ಸ್ವಭಾವದವರು. ಧಾರ್ಮಿಕ ಮತ್ತು ಸಾಹಿತ್ಯದ ಬಗ್ಗೆ ಅಭಿರುಚಿಯನ್ನು ಹೊಂದಿರುತ್ತಾರೆ. ಆಕರ್ಷಕ ವಸ್ತುಗಳನ್ನು ಉಡುಗೊರೆಯಾಗಿ ಬಯಸುತ್ತಾರೆ. ಯಾವುದೇ ಉದ್ಯೋಗದಲ್ಲಿರಲಿ ತುಂಬಾ ಬಿಜಿಯಾಗಿರಲು ಬಯಸುತ್ತಾರೆ.

ಧನಸ್ಸು: ಈ ರಾಶಿಯವರು ಐಷಾರಾಮಿ ಬದುಕನ್ನು ಬಯಸುವವರು. ಹೊಸ ವರ್ಷದಲ್ಲಿ ಹೊಸತೊಂದು ಪ್ರಯತ್ನಕ್ಕೆ ಕೈ ಹಾಕುತ್ತಾರೆ. ನಾಯಿ ಮತ್ತು ಕುದುರೆಗಳ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ. ಸಾಹಿತ್ಯ, ರಾಜಕೀಯ, ಮಾನವತೆ, ಧಾರ್ಮಿಕ ಭಾವನೆಗಳನ್ನು ಹೆಚ್ಚಾಗಿ ಗೌರವಿಸುತ್ತಾರೆ. ಮನೆಯಲ್ಲಿ ಶುಭಕಾರ್ಯಗಳು ನಡೆಯಲಿವೆ. ನಿಮ್ಮ ಪ್ರೇಮ ಸಲ್ಲಾಪಗಳು ಮುಂದುವರಿಯಲಿವೆ.

ಮಕರ: ಈ ರಾಶಿಯವರು ಸುಮಧುರ ಸಂಗೀತ, ನಗೆ ಚಟಾಕಿ, ಕ್ರೀಡಾಪಟುವಿನ ಗುಣಗಳನ್ನು ಹೊಂದಿರುತ್ತಾರೆ. ಉಪಯೋಗಕ್ಕೆ ಬರುವ ಉಡುಗೊರೆಗಳನ್ನು ಮಾತ್ರ ಇಷ್ಟಪಡುತ್ತಾರೆ. ಆಭರಣಗಳು, ಬ್ರೀಫ್‌ಕೇಸ್, ಸಾಹಿತ್ಯ, ಸುಗಂಧ ದ್ರವ್ಯಗಳನ್ನು ತುಂಬಾ ಇಷ್ಟಪಡುತ್ತಾರೆ. ಮನೆಯಲ್ಲಿ ಕುಟುಂಬದವರ ಇಚ್ಚೆಗೆ ಅನುಸಾರವಾಗಿ ನಡೆದು ಪ್ರೀತಿಗೆ ಪಾತ್ರರಾಗುತ್ತಾರೆ.

ಕುಂಭ: ಈ ರಾಶಿಯ ವ್ಯಕ್ತಿಗಳ ವ್ಯಕ್ತಿತ್ವ ಅಳೆಯುವುದು ಸುಲಭವಲ್ಲ. ಹೊಸವರ್ಷದಲ್ಲಿ ಅವರಿಗೆ ಇಷ್ಟವಾದ ವಸ್ತುಗಳನ್ನು ಗಮನಿಸಿ ಉಡುಗೊರೆ ಕೊಡುವುದು ಉಚಿತ. ಭವಿಷ್ಯದ ಬದಲಾವಣೆಗಳ ಬಗ್ಗೆ ಹೆಚ್ಚು ಆಸಕ್ತರಾಗಿರುತ್ತಾರೆ. ವಿಜ್ಞಾನ, ತಂತ್ರಜ್ಞಾನ ಮತ್ತು ರಾಜಕೀಯ ಬದಲಾವಣೆಗಳನ್ನು ಗಮನಿಸುತ್ತಿರುತ್ತಾರೆ. ಪ್ರೀತಿಸಿದ ವ್ಯಕ್ತಿಯೊಂದಿಗೆ ಸಂಜೆ ವಿಹಾರಕ್ಕೆ ತೆರಳಿ ಮನಬಿಚ್ಚಿ ಮಾತನಾಡಿದಲ್ಲಿ ತುಂಬಾ ಸಂತೋಷವಾಗುತ್ತದೆ.

ಮೀನ: ಈ ರಾಶಿಯ ವ್ಯಕ್ತಿಗಳು ಸೂಕ್ಷ್ಮಮತಿಯರಾಗಿರುತ್ತಾರೆ. ಇತರರು ತಮಗೆ ಇಷ್ಟವಾದ ಉಡುಗೊರೆಯನ್ನು ನೀಡಬೇಕು ಎಂದು ಬಯಸುತ್ತಾರೆ. ಕಡಿಮೆ ಮೌಲ್ಯದ ವಸ್ತುಗಳನ್ನು ಬಯಸುವುದರಿಂದ ಇತರರಿಗೆ ತೊಂದರೆಯಾಗುವುದಿಲ್ಲ. ವರ್ಷದ ಆರಂಭದಿಂದ ಅಂತ್ಯದವರೆಗೆ ಶುಭಫಲಗಳು ದೊರೆಯಲಿವೆ. ಗೆಳೆಯರನ್ನು ನಂಬಿ ಮೋಸಹೋಗಬೇಡಿ, ದುಂದು ವೆಚ್ಚ ಸಲ್ಲದು.

Share this Story:

Follow Webdunia kannada