Select Your Language

Notifications

webdunia
webdunia
webdunia
webdunia

ನೀವ್ಯಾಕೆ ಹಿಂದೂ ಹುಡುಗಿಯರನ್ನೇ ಮದುವೆ ಮಾಡಿಕೊಂಡ್ರಿ ಎಂಬ ಪ್ರಶ್ನೆಗೆ ಅಮೀರ್ ಖಾನ್ ಏನು ಹೇಳಿದ್ರು ನೋಡಿ

Aamir Khan wife
Photo Credit: Instagram
ಮುಂಬೈ: ಬಾಲಿವುಡ್ ನಟ ಅಮೀರ್ ಖಾನ್ ನಿನ್ನೆ ಮೂರನೇ ಬಾರಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ವೇಳೆ ಅವರ ಹಳೆಯ ಸಂದರ್ಶನವೊಂದರ ವಿಡಿಯೋ ವೈರಲ್ ಆಗಿದೆ.

61 ವರ್ಷದ ಅಮೀರ್ ಖಾನ್ ನಿನ್ನೆ ಗೌರಿ ಸ್ಪ್ರಾಟ್ ಜೊತೆ ಮದುವೆಯಾಗಿದ್ದಾರೆ. ಇದು ಅವರ ಮೂರನೇ ಮದುವೆಯಾಗಿತ್ತು. ಇದಕ್ಕೆ ಮೊದಲು ಅವರು ರೀನಾ ದತ್ತಾ ಮತ್ತು ಕಿರಣ್ ರಾವ್ ಅವರನ್ನು ಮದುವೆಯಾಗಿದ್ದರು.

ಮೂಲತಃ ಮುಸ್ಲಿಂ ಧರ್ಮೀಯರಾಗಿರುವ ಅಮೀರ್ ಖಾನ್ ಯಾಕೆ ಯಾವಾಗಲೂ ಹಿಂದೂ ಹುಡುಗಿಯರನ್ನೇ ಮದುವೆಯಾಗುತ್ತಾರೆ ಎಂದು ನಿನ್ನೆ ಹಲವರು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡಿದ್ದರು. ಹಿಂದೂ ಹುಡುಗಿಯನ್ನು ಮದುವೆಯಾಗುವುದು, ಮಕ್ಕಳನ್ನು ಕೈಗೆ ನೀಡುವುದು ಮತ್ತು ವಿಚ್ಛೇದನ ನೀಡುವುದು ಇದು ಅವರ ಅಭ್ಯಾಸವಾಗಿದೆ. ಯಾಕೆ ಅವರಿಗೆ ಹಿಂದೂ ಹುಡುಗಿಯರ ಮೇಲೆಯೇ ಲವ್ ಆಗುತ್ತದೆ ಎಂದು ಕೆಲವರು ಕಿಡಿ ಕಾರಿದ್ದರು.

ಈ ಪ್ರಶ್ನೆ ಅವರಿಗೆ ಈ ಹಿಂದೆ ಖ್ಯಾತ ನಿರೂಪಕ ರಜತ್ ಶರ್ಮಾ ಅವರ ಶೋನಲ್ಲಿ ಕೇಳಲಗಿತ್ತು. ಆಗ ಅವರು ನನಗೆ ಇಬ್ಬರು ಪತ್ನಿಯರಿಂದ ಮಕ್ಕಳಿದ್ದಾರೆ. ಎಲ್ಲಾ ಮಕ್ಕಳಿಗೂ ಪತ್ನಿಯರೇ ಹೆಸರಿಟ್ಟಿದ್ದಾರೆ. ಆ ಮಕ್ಕಳ ಪೈಕಿ ರೀನಾ ದತ್ತಾ ಜೊತೆಗಿನ ಮಕ್ಕಳಿಗೆ ಜುನೈದ್ ಮತ್ತು ಇರಾ ಎಂದು ಹೆಸರಿಡಲಾಗಿದೆ. ಇರಾ ಎಂದರೆ ಸರಸ್ವತಿಯ ಇನ್ನೊಂದು ಹೆಸರು. ಇನ್ನು, ಆಜಾದ್ ರಾವ್ ಖಾನ್ ಗೆ ಆ ಹೆಸರಿಡೋಣ ಎಂದಿದ್ದ ಕಿರಣ್. ಆಜಾದ್ ಎಂದರೆ ನಮ್ಮ ಸ್ವಾತಂತ್ರ್ಯ ಹೋರಾಟಗಾರ ಆಜಾದ್ ಚಂದ್ರಶೇಖರ್ ಅವರ ಹೆಸರು. ಅದೇ ಹೆಸರಿಡೋಣ ಎಂದು ಕಿರಣ್ ಹೇಳಿದ್ದಳು. ಆಜಾದ್ ಹೆಸರು ಮುಸ್ಲಿಂ ಹೆಸರಲ್ಲ’ ಎಂದು ಅಮೀರ್ ಹೇಳಿದ್ದರು. ಅವರ ಅಂದಿನ ಸಂದರ್ಶನದ ವಿಡಿಯೋ ಇಲ್ಲಿದೆ ನೋಡಿ.

pic.twitter.com/Hny2AiwLSY

 

— Dear Men (@Dear_Men_Life) July 6, 2026

Share this Story:

Follow Webdunia kannada

ಮುಂದಿನ ಸುದ್ದಿ

ಐ ಆಮ್ ಚೆನ್ನೈ ಬಾಯ್ ಎಂದ ಶಿವಣ್ಣ.. ಕಿಡಿಕಾರಿದ ನೆಟ್ಟಿಗರು, ಸಮರ್ಥಿಸಿದ ಕೆಲವರು Video