ಪರಶುರಾಮನ ಪಾತ್ರಕ್ಕೆ ಮದ್ಯ, ನಾನ್ ವೆಜ್ ಬಿಟ್ಟ ವಿಕ್ಕಿ ಕೌಶಾಲ್: ಪತ್ನಿ ಜೊತೆ ಅದನ್ನೂ ಮಾಡ್ಬೇಡಿ ಎಂದ ನೆಟ್ಟಿಗರು

Krishnaveni K
ಶುಕ್ರವಾರ, 7 ನವೆಂಬರ್ 2025 (11:59 IST)
ಮುಂಬೈ: ಬಾಲಿವುಡ್ ನಟ ವಿಕ್ಕಿ ಕೌಶಾಲ್ ಪೌರಾಣಿಕ ಸಿನಿಮಾ ಮಹಾವತಾರದಲ್ಲಿ ಪರಶುರಾಮನ ಪಾತ್ರ ಮಾಡುತ್ತಿದ್ದಾರೆ. ಇದಕ್ಕಾಗಿ ಅವರು ಮದ್ಯಪಾನ, ನಾನ್ ವೆಜ್ ಬಿಟ್ಟಿದ್ದಾರಂತೆ. ಇದಕ್ಕೆ ನೆಟ್ಟಿಗರು ಟ್ರೋಲ್ ಮಾಡಿದ್ದು, ಪತ್ನಿ ಜೊತೆ ‘ಅದನ್ನೂ’ ಮಾಡಬೇಡಿ ಎಂದಿದ್ದಾರೆ.

ಅಮರ್ ಕೌಶಿಕ್ ಅವರ ಮಹಾವತಾರ ಸಿನಿಮಾದಲ್ಲಿ ವಿಕ್ಕಿ ಕೌಶಾಲ್ ಲಾರ್ಡ್ ಪರಶುರಾಮನ ಪಾತ್ರ ಮಾಡುತ್ತಿದ್ದಾರೆ. ಈ ಪಾತ್ರಕ್ಕಾಗಿ ಅವರು ಎಷ್ಟು ತೊಡಗಿಸಿಕೊಂಡಿದ್ದಾರೆಂದರೆ ಮದ್ಯಪಾನ, ಧೂಮಪಾನ, ನಾನ್ ವೆಜ್ ಆಹಾರವನ್ನೂ ಸೇವಿಸುತ್ತಿಲ್ಲವಂತೆ.

ಪುಣ್ಯ ಪುರುಷನ ಪಾತ್ರ ಮಾಡಲು ಅಷ್ಟೇ ಶರೀರ ಶುದ್ಧಿಯಿಂದ ಮಾಡಲು ಹೊರಟಿದ್ದಾರೆ. ಆದರೆ ಇದಕ್ಕೆ ಕೆಲವು ವರ್ಗದ ಜನ ಸೋಷಿಯಲ್ ಮೀಡಿಯಾದಲ್ಲಿ ಅವರನ್ನು ಟ್ರೋಲ್ ಮಾಡಿದ್ದಾರೆ. ಇಷ್ಟೆಲ್ಲಾ ಡ್ರಾಮಾ ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ.

ಇದೆಲ್ಲಾ ತ್ಯಜಿಸುವ ನೀವು ಪತ್ನಿ ಜೊತೆ ರೊಮ್ಯಾನ್ಸ್ ಕೂಡಾ ಬಿಟ್ಟು ಬಿಡಿ ಎಂದು ಕಾಲೆಳೆದಿದ್ದಾರೆ. ಲೈಂಗಿಕ ಸಂಬಂಧವೂ ಒಳ್ಳೆಯದಲ್ಲ ಅಲ್ವಾ? ಎಂದು ವಿಕ್ಕಿ ಕೌಶಾಲ್ ರನ್ನು ಇನ್ನಿಲ್ಲದಂತೆ ಟ್ರೋಲ್ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರಕ್ಷಿತಾಳ ಭಾಷೆ ಬಗ್ಗೆ ಮಾತನಾಡುವ ಯಾವ ಹಕ್ಕು ನಿಮಗಿಲ್ಲ

ಧರ್ಮೇಂದ್ರ ಸಾವಿನ ವದಂತಿ ಬೆನ್ನಲ್ಲೇ ಮಗಳಿಂದ ಸ್ಪಷ್ಟನೆ

ಇದೊಂದು ಭಯಾನಕ ಘಟನೆ: ದೆಹಲಿ ಸ್ಫೋಟಕ್ಕೆ ಅಲ್ಲು ಅರ್ಜುನ್ ಸಂತಾಪ

ದರ್ಶನ್ ಜೈಲಿನಲ್ಲಿ, ಬರ್ತಡೇ ದಿನ ವಿಜಯಲಕ್ಷ್ಮಿ ಏನ್‌ ಮಾಡಿದ್ರೂ ಗೊತ್ತಾ

BBK12: ಕಿಚ್ಚ ಸುದೀಪ್ ಬಗ್ಗೆಯೇ ಗಂಭೀರ ಆರೋಪ ಮಾಡಿದ ಧ್ರುವಂತ್

ಮುಂದಿನ ಸುದ್ದಿ