Select Your Language

Notifications

webdunia
webdunia
webdunia
webdunia

ಉಪೇಂದ್ರ ಅವರ ಮುಂದಿನ ಸಿನಿಮಾ ಉಪೇಂದ್ರ ಮತ್ತೆ ಹುಟ್ಟಿ ಬಾ, ಇಂತಿ ಪ್ರೇಮ

ಉಪೇಂದ್ರ ಅವರ ಮುಂದಿನ ಸಿನಿಮಾ ಉಪೇಂದ್ರ ಮತ್ತೆ ಹುಟ್ಟಿ ಬಾ, ಇಂತಿ ಪ್ರೇಮ
ಮುಂಬೈ , ಸೋಮವಾರ, 23 ಮೇ 2016 (19:10 IST)
ನಟ ಉಪೇಂದ್ರ ಅವರು ಸದ್ಯ ಸುದೀಪ್ ಅವರ ಜೊತೆ ಮುಕುಂದ ಮುರಾರಿ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಹೀಗಿರುವಾಗಲೇ ನಟ ಉಪೇಂದ್ರ ಅವರ ಮುಂದಿನ ಸಿನಿಮಾ ಯಾವುದು ಇರಬಹುದು ಅಂತಾ ಅಭಿಮಾನಿಗಳು ಕಾಯುತ್ತಲೇ ಇದ್ದಾರೆ. ಇದೀಗ ತಮ್ಮ ಅಭಿಮಾನಿಗಳಿಗೆ ತಮ್ಮ ಮುಂದಿನ ಸಿನಿಮಾ ಯಾವುದು ಅನ್ನೋದನ್ನುಉಪೇಂದ್ರ ಅವರು ಹೇಳಿದ್ದಾರೆ.
ಅಂದ್ಹಾಗೆ ಉಪೇಂದ್ರ ಅವರ ಮುಂದಿನ ಸಿನಿಮಾದ ಹೆಸರು ಕೇಳಿದ್ರೆ ನಿಮಗೆ ಅಚ್ಚರಿಯಾಗುತ್ತೆ. ಯಾಕಂದ್ರೆ ಆ ಸಿನಿಮಾದ ಹೆಸರು ಉಪೇಂದ್ರ ಮತ್ತೆ ಹುಟ್ಟಿ ಬಾ , ಇಂತಿ ಪ್ರೇಮ ಅಂತಾ. ಈ ಸಿನಿಮಾದ ಹೆಸರು ಕೇಳಿದ್ರೆ ಡಿಫರೆಂಟ್ ಅನ್ಸುತ್ತೆ. ಹಾಗಾಗಿ ಸಿನಿಮಾನೂ ಕೂಡ ಅಷ್ಟೇ ಡಿಫರೆಂಟ್ ಆಗಿರುತ್ತೆ ಅನ್ನೋದು ಗೊತ್ತಾಗುತ್ತೆ.
 
ಅಂದ್ಹಾಗೆ ಈ ಸಿನಿಮಾವನ್ನು  ನಿರ್ದೇಶನ ಮಾಡುತ್ತಿರೋದು ಈ ಹಿಂದೆ ಉಪೇಂದ್ರ ಅವರ ಹೆಚ್ ಟು ಒ ಸಿನಿಮಾವನ್ನು ನಿರ್ದೇಶಿಸಿದ್ದ ನಿರ್ದೇಶಕ ಲೋಕನಾಥ್.ಸಿನಿಮಾವನ್ನು ಮುಂದಿನ ತಿಂಗಳಿನಿಂದ ಆರಂಭ ಮಾಡಲಿದ್ದಾರಂತೆ ನಿರ್ದೇಶಕರು.
 
ಸದ್ಯ ಉಪೇಂದ್ರ ಅವರು ಹಿಂದಿಯ ಓ ಮೈ ಗಾಡ್ ರಿಮೇಕ್ ಮುಕುಂದ ಮುರಾರಿ ಕನ್ನಡ ಸಿನಿಮಾದಲ್ಲಿ ಸುದೀಪ್ ಅವರ ಜೊತೆ ಅಭಿನಯಿಸುತ್ತಿದ್ದಾರೆ.ಈ ಸಿನಿಮಾದಲ್ಲಿ ಉಪೇಂದ್ರ ಅವರಿಗೆ ನಾಯಕಿಯಾಗಿ ನಿಕಿತಾ ಅವರು ಅಭಿನಯಿಸುತ್ತಿದ್ದಾರೆ.ಇನ್ನು ಇದರ ಜೊತೆಗೆ ಕಲ್ಪನಾ-2 ಸಿನಿಮಾದಲ್ಲಿಯೂ ಉಪೇಂದ್ರ ಅವರು ಅಭಿನಯಿಸುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸೋನಾಕ್ಷಿ ಬರ್ತಡೇ ಜೂನ್ 2 ಅಭಿಮಾನಿಗಳು ಸಂಪ್ರೈಸ್