ಕ್ಯಾನ್ಸರ್ ರೋಗಿಗಳಿಗಾಗಿ ಸನ್ನಿ ಲಿಯೋನ್ ನಿಧಿ ಸಂಗ್ರಹ

ಶುಕ್ರವಾರ, 29 ಜನವರಿ 2016 (11:42 IST)
ತೆರೆ ಮೇಲೆ ಸನ್ನಿ ಲಿಯೋನ್ ಬಂದ್ರೆ ಸಾಕು ಪಡ್ಡೆ ಹೈಕ್ಳ ಎದೆಯಲ್ಲಿ ಮಿಂಚಿನ ಸಂಚಾರವಾಗುತ್ತೆ. ತೆರೆ ಮೇಲೆ ಸನ್ನಿ ಹೇಗೆ ಕೋಟ್ಯಂತರ ಜನರನ್ನು ರಂಜಿಸುತ್ತಾರೋ ಹಾಗೇ ಸನ್ನಿ ನಿಜ ಜೀವನದಲ್ಲೂ ನಾನು ಸ್ಟಾರ್ ಅನ್ನೋದನ್ನು ಅವರು ತೋರಿಸಿಕೊಟ್ಟಿದ್ದಾರೆ.
 
ಸನ್ನಿ ಲಿಯೋನ್ ಅಂದ್ರೆ ಆಕೆ ಬಿಚ್ಚೋಳೆ ಗೌರಮ್ಮ. ದುಡ್ಡಿಗಾಗಿ ಹೇಂಗೆ ಬೇಕಾದ್ರೂ ಸೊಂಟ ಬಳಕಿಸುತ್ತಾಳೆ ಅನ್ನೋದು ಹಲವರ ಅಭಿಪ್ರಾಯ.ಆದ್ರೆ ಇದೇ ಸನ್ನಿಯೊಳಗೊಂದು ಸುಂದರವಾದ ಮನಸ್ಸಿದೆ ಅನ್ನೋದು ಎಷ್ಟೋ ಜನರಿಗೆ ಅರ್ಥವಾಗೋದೇ ಇಲ್ಲ. ಹೌದು... ಸನ್ನಿ ತನ್ನಲ್ಲಿ ಎಷ್ಟು ಮಾನವೀಯತೆ ಇದೆ ಅನ್ನೋದು ಇದೀಗ ತೋರಿಸಿಕೊಟ್ಟಿದ್ದಾರೆ. ಕ್ಯಾನ್ಸರ್ ಪೀಡಿತರಿಗಾಗಿ ಸನ್ನಿ ಇದೀಗ ನಿಧಿ ಸಂಗ್ರಹಿಸುತ್ತಿದ್ದಾರೆ. ಆ ಮೂಲಕ ಸಾವಿನ ದವಡೆಯಲ್ಲಿರುವ ಅದೆಷ್ಟೋ ಕ್ಯಾನ್ಸರ್ ಪೀಡಿತರ ಬದುಕಿಗೆ ಆಸರೆಯಾಗೋಕೆ ಸನ್ನಿ ಮುಂದಾಗಿದ್ದಾರೆ.
 
ಈ ಬಗ್ಗೆ ಟ್ವೀಟ್ ಮಾಡಿರುವ ಸನ್ನಿ ನಾನು  ಕ್ಯಾನ್ಸರ್ ಪೀಡಿತರಿಗಾಗಿ ಹಣ ಸಂಗ್ರಹಿಸುತ್ತಿದ್ದೇನೆ.ಅದಕ್ಕಾಗಿ ನಿಮ್ಮ ಲೈಕ್ ಹಾಗೂ  ರೀ ಟ್ವೀಟ್ ಗಳ ಅವಶ್ಯಕತೆ ಇದೆ. ದಯವಿಟ್ಟು ಲೈಕ್ ಮಾಡಿಹಾಗೇ ರಿಟ್ವೀಟ್ ಮಾಡಿ ಅಂತಾ ಸನ್ನಿ ಲಿಯೋನ್ ಮನವಿ ಮಾಡಿದ್ದಾರೆ.ಆ ಮೂಲಕ ಸನ್ನಿ ಬಹುದೊಡ್ಡ ಕೆಲಸವೊಂದಕ್ಕೆ ಕೈ ಹಾಕಿದ್ದಾರೆ.

ವೆಬ್ದುನಿಯಾವನ್ನು ಓದಿ