Select Your Language

Notifications

webdunia
webdunia
webdunia
webdunia

ಟೀಚರಮ್ಮ ಆಗ್ತಿದ್ದಾರೆ ಯೂ ಟರ್ನ್ ಬೆಡಗಿ ಶ್ರದ್ಧಾ

ಟೀಚರಮ್ಮ ಆಗ್ತಿದ್ದಾರೆ ಯೂ ಟರ್ನ್ ಬೆಡಗಿ ಶ್ರದ್ಧಾ
, ಸೋಮವಾರ, 11 ಜುಲೈ 2016 (08:39 IST)
ಯೂ ಟರ್ನ್ ಸಿನಿಮಾದಲ್ಲಿ ಪತ್ರಕರ್ತೆಯಾಗಿ ಕಾಣಿಸಿಕೊಂಡಿದ್ದ ಶ್ರದ್ಧಾ ಶ್ರೀನಾಥ್ ಇದೀಗ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಮ್ಮ ಮುಂದಿನ ಸಿನಿಮಾದಲ್ಲಿ ಶ್ರದ್ಧಾ ಅವರು ಶಿಕ್ಷಕಿಯಾಗಿ ಅಭಿನಯಿಸುತ್ತಿದ್ದಾರಂತೆ. 'ಸಿಂಪಲ್ಲಾಗ್ ಒಂದು ಲವ್ ಸ್ಟೋರಿ' ಸಿನಿಮಾ ಖ್ಯಾತಿಯ ಸುನಿ ನಿರ್ದೇಶನದ ಸಿನಿಮಾದಲ್ಲಿ ಶ್ರದ್ಧಾ ಅವರು ಟೀಚರಮ್ಮ ಆಗಿ ಮಿಂಚಲಿದ್ದಾರೆ.

 
ಅಂದ್ಹಾಗೆ ನಿರ್ದೇಶಕ ಸುನಿ ಅವರ ಈ ಸಿನಿಮಾದ ಹೆಸರು ಆಪರೇಶನ್ ಅಲಮೇಲಮ್ಮ. ಆಪರೇಶನ್ ಅಲಮೇಲಮ್ಮ ಸ್ವಲ್ಪ ಸಸ್ಪೆನ್ಸ್ ಇರೋ ಸಿನಿಮಾವಂತೆ. ಕಿಡ್ನಾಪ್ ಕಥೆಯೊಂದಕ್ಕೆ ತಮ್ಮದೇ ಸ್ಟೈಲ್‌ನಲ್ಲಿ ರೋಚಕತೆಯ ಟಚ್ ಕೊಟ್ಟಿದ್ದಾರೆ ಸುನಿ. ಕಿರುತೆರೆಯ ನಟ ಮನೀಷ್ ರಿಷಿ ಈ ಚಿತ್ರದ ನಾಯಕ. ನಾಯಕಿ 'ಯೂ ಟರ್ನ್' ಖ್ಯಾತಿಯ ಶ್ರದ್ಧಾ ಶ್ರೀನಾಥ್. ಶ್ರದ್ಧಾಗೆ ಇದರಲ್ಲಿ ಸ್ಕೂಲ್ ಟೀಚರ್ ಪಾತ್ರವಂತೆ. ಸಿನಿಮಾದ ತಮ್ಮ ಪಾತ್ರದ ಬಗ್ಗೆ ಶ್ರದ್ಧಾ ಅವರು ತುಂಬಾನೇ ಎಕ್ಸೈಟ್ ಆಗಿದ್ದಾರಂತೆ.ಆಗಸ್ಟ್‌ನಲ್ಲಿ ಚಿತ್ರದ ಹಾಡುಗಳ ಶೂಟಿಂಗ್ ನಡೆಸಲು ತೀರ್ಮಾನಿಸಲಾಗಿದೆ. 
 
ಇನ್ನು ಸಂತೋಷದ ವಿಚಾರ ಅಂದ್ರೆ ಶ್ರದ್ಧಾ ಅವರು ಮಣಿರತ್ನಂ ನಿರ್ದೇಶನದ ತಮಿಳು ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಪಡೆದಿದ್ದಾರೆ. ಕಾರ್ತಿ ಅಭಿನಯದ ಸಿನಿಮಾದಲ್ಲಿ ಶ್ರದ್ಧಾ  ಶ್ರೀನಾಥ್ ಅವರು ಅತಿಥಿ ಪಾತ್ರದಲ್ಲಿ ಮಿಂಚಲಿದ್ದಾರೆ.ಆ ಮೂಲಕ ಕಾಲಿವುಡ್ ನಲ್ಲೂ ಸದ್ದು ಮಾಡಲಿದ್ದಾರೆ ಶ್ರದ್ಧಾ.

Share this Story:

Follow Webdunia kannada

ಮುಂದಿನ ಸುದ್ದಿ

ಶಿವರಾಜ್ ಕುಮಾರ್ ಅವರ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ ವಸಿಷ್ಟ