ಭಜರಂಗಿ ಭಾಯಿಜಾನ್ ಸಿನಿಮಾ ನೋಡಿದ ಯಾವೊಬ್ಬ ಪ್ರೇಕ್ಷಕ ಕೂಡ ಸಿನಿಮಾದಲ್ಲಿನ ಮುದ್ದು ಹುಡುಗಿ ಮುನ್ನಿಯನ್ನು ಮರೆಯೋದಕ್ಕೆ ಸಾಧ್ಯಾನೇ ಇಲ್ಲ. ಮಾತು ಬಾರದೇ ಇರುವ ಹುಡುಗಿಯ ಪಾತ್ರವನ್ನು ಅಷ್ಟೇ ಮನೋಜ್ಞವಾಗಿ ಅಭಿನಯಿಸಿದ್ದಳು ಹರ್ಷಾಲಿ ಮಲ್ಹೋತ್ರಾ. ಸಲ್ಲುಗೂ ಮುನ್ನಿ ಅಂದ್ರೆ ತುಂಬಾನೇ ಪ್ರೀತಿ. ಇದೀಗ ಮುನ್ನಿ ಸಲ್ಲು ಅಂಕಲ್ ಅಭಿನಯಿಸಿರುವ ಸುಲ್ತಾನ್ ಸಿನಿಮಾವನ್ನು ನೋಡಿ ಫುಲ್ ಖುಷಿಯಾಗಿದ್ದಾಳೆ.
ಹೌದು... ಮೊನ್ನೆ ತಾನೇ ಹರ್ಷಾಲಿ ಮಲ್ಹೋತ್ರಾ ಸಲ್ಲು ಅಭಿನಯದ ಸುಲ್ತಾನ್ ಸಿನಿಮಾವನ್ನು ನೋಡಿದ್ದಾಳೆ. ಅಷ್ಟೇ ಅಲ್ಲ ಸಿನಿಮಾ ನೋಡಿ ಖುಷಿಯಾಗಿರುವ ಹರ್ಷಾಲಿ ಟ್ವೀಟ್ ಮಾಡಿದ್ದಾಳೆ. ನನಗೆ ಚಿತ್ರ ತುಂಬಾನೇ ಇಷ್ಟವಾಯ್ತು. ಸಿನಿಮಾದಲ್ಲಿ ಸಲ್ಲು ಅಂಕಲ್ ಅಳೋದನ್ನು ನೋಡಿ ನನಗೂ ಅಳು ಬಂತು. ನಾನು ಅತ್ತೆ. ಫೈಟಿಂಗ್ ಸೀನ್ ಗಳಲ್ಲಿ ಸಲ್ಲು ಅಂಕಲ್ ಗೆ ಗಾಯವಾದಾಗ ನನಗೆ ತುಂಬಾನ ನೋವಾಯ್ತು. ಈ ಸಿನಿಮಾದಲ್ಲಿ ಸಲ್ಲು ಅಂಕಲ್ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ. ನನಗೆ ಸಿನಿಮಾ ತುಂಬಾ ಇಷ್ಟವಾಯ್ತು ಯಾಕಂದ್ರೆ ಸಿನಿಮಾದ ಕೊನೆಯಲ್ಲಿ ಸಲ್ಲು ಅಂಕಲ್ ಒಲಿಂಪಿಕ್ ನಲ್ಲಿ ಗೆಲ್ಲುತ್ತಾರೆ.ಆಗ ನಾನು ತುಂಬಾ ಸಂತೋಷಗೊಂಡೆ ಅಂತಾ ಹರ್ಷಾಲಿ ಹೇಳಿದ್ದಾಳೆ.
ಭಜರಂಗಿ ಭಾಯಿಜಾನ್ ಸಿನಿಮಾದಲ್ಲಿ ಮುನ್ನಿ ಪಾತ್ರದಿಂದ ಗಮನ ಸೆಳೆದಿದ್ದ ಮುನ್ನಿ ಅದಕ್ಕೂ ಮುನ್ನ ಕಾಬೂಲ್ ಹೈ ಹಾಗೂ ಲೈಟ್ ಆವೋ ತ್ರಿಷಾ ಅನ್ನೋ ಧಾರಾವಾಹಿಯಲ್ಲಿ ಅಭಿನಯಿಸಿದ್ದಳು.ಆದ್ರೆ ಆಕೆಗೆ ಒಂದು ಇಮೇಜ್ ತಂದುಕೊಟ್ಟ ಸಿನಿಮಾ ಅಂದ್ರೆ ಭಜರಂಗಿ ಭಾಯಿಜಾನ್. ಕಬೀರ್ ಖಾನ್ ನಿರ್ದೇಶನದ ಈ ಸಿನಿಮಾದ ಮೂಲಕ ಹರ್ಷಾಲಿ ಮಲ್ಹೋತ್ರಾ ಎಲ್ಲರ ಪ್ರೀತಿಯ ಮುನ್ನಿಯಾಗಿದ್ದಾಳೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.