Select Your Language

Notifications

webdunia
webdunia
webdunia
webdunia

ಸಲ್ಮಾನ್ ಖಾನ್ ಸಹೋದರಿ ಅರ್ಪಿತ ಮದುವೆಗೆ ಸಿದ್ಧತೆ...

ಸಲ್ಮಾನ್ ಖಾನ್ ಸಹೋದರಿ ಅರ್ಪಿತ ಮದುವೆಗೆ ಸಿದ್ಧತೆ...
ಮುಂಬೈ , ಸೋಮವಾರ, 8 ಸೆಪ್ಟಂಬರ್ 2014 (09:53 IST)
ಬಾಲಿವುಡ್ ಮಾತ್ರವಲ್ಲ ಭಾರತೀಯ ಚಿತ್ರರಂಗ ಹಾಗೂ ಸಲ್ಮಾನ್ ಖಾನ್ ಅವರ ಅಭಿಮಾನಿಗಳು ಸಾಕಷ್ಟು ಕಾಲದಿಂದ ಅವರ ಮದುವೆ ಯಾವಾಗ ಆಗುತ್ತದೆ ಎಂದು ನಿರೀಕ್ಷಿಸುತ್ತಲೇ ಇದ್ದಾರೆ. ಆದರೆ ಆತನ ಮದುವೆ ಬಗ್ಗೆ ಸುದ್ದಿಗಳು ಹರಡಿದರೂ ಸಹಿತ ಅದು ಸುದ್ದಿಯಾಗಿಯೇ ಉಳಿದಿದೆ.  ಈಗ ಹೇಳ್ತಾ ಇರೋದು ಸಲ್ಮಾನ್ ಖಾನ್ ಅವರ ಸಹೋದರಿ ಅರ್ಪಿತ ಖಾನ್  ಮದುವೆ ಬಗ್ಗೆ ಆಕೆ ಆಯುಶ್ ಶರ್ಮ ಎನ್ನುವ  ಯುವಕನಿಗೆ ಮನಸೋತು ಈಗ ಮೂರು ಗಂಟು ಹಾಕಿಸಿಕೊಳ್ಳಲು ಸಿದ್ಧ ಆಗಿದ್ದಾಳೆ. ತಂಗಿ ಮದುವೆಗೆ ಸಿದ್ಧತೆ ನಡೆಸಿರುವ ಸಲ್ಮಾನ್ ಖಾನ್ ಮತ್ತು ಆತನ ಅಪ್ಪ ಸಲೀಮ್ ಖಾನ್ ಧೂಮ್ ಧಾಮ್ ಆಗಿ ಹೈದರಾಬಾದ್ ನಲ್ಲಿರುವ ಫಲಕ್  ನೂಮ ಪ್ಯಾಲೇಸ್  ನಲ್ಲಿ ನಡೆಸಲು ನಿಶ್ಚಯಿಸಿದ್ದಾರೆ. ಈ ಬಗ್ಗೆ ಅವರ ತಂದೆ ಸಲೀಮ್  ಮಾತನಾಡುತ್ತಾ,  ಇತ್ತೀಚಿಗೆ  ಹೈದರಾಬಾದ್‌ಗೆ ಬಂದಿರಲಿಲ್ಲ. ಫಲಕ್ ನೂಮಾದಲ್ಲಿ  ಮಾಡುವ ಉದ್ದೇಶ ಹೊಂದಿದ್ದೇವೆ. ಇಲ್ಲಿ ಅದ್ಭುತವಾಗಿ ಮದುವೆಯ ಕಾರ್ಯ ಮಾಡುವ ಉದ್ದೇಶ ನಮ್ಮದಾಗಿದೆ ಎಂದು ಹೇಳಿದ್ದಾರೆ ಮಿಸ್ಟರ್ ಬಡಾ ಖಾನ್.
 
 ಸಲ್ಮಾನ್ ಖಾನ್ ಅತಿ ಪ್ರೀತಿಯ ತಂಗಿ ಅರ್ಪಿತ. ಆಕೆಯು ದೆಹಲಿಗೆ ಸೇರಿರುವ ಆಯುಶ್ ಶರ್ಮ ಜೊತೆ ಪ್ರೀತಿ ಉಂಟಾಗಿತ್ತು.  ಎರಡೂ ಕುಟುಂಬಗಳು ಈ ಪ್ರೀತಿಗೆ ಸಮ್ಮತಿ ಮುದ್ರೆ ಒತ್ತಿದ ಕಾರಣ ಈ ಜೋಡಿ ಹಸೆಮಣೆ ಏರುತ್ತಿದ್ದಾರೆ. ಇವರಿಬ್ಬರ ಮದುವೆಯನ್ನು ಹಿಂದೂ ಹಾಗೂ ಮುಸ್ಲಿಂ ಸಂಪ್ರದಾಯದ ಪ್ರಕಾರ ನೆರವೇರಿಸುವ ಉದ್ದೇಶ ಹೊಂದಿದ್ದಾರೆ. ಮದುವಣಗಿತ್ತಿ ಅರ್ಪಿತ ಜೊತೆಗೂಡಿ ಕುಟುಂಬದ ಸದಸ್ಯರು  ನೂಮಾ ಪ್ಯಾಲೇಸ್ ಸಂದರ್ಶಿಸಿ ಬಂದಿದ್ದಾರೆ. ಅಲ್ಲದೆ ಅತ್ಯಂತ ಅದ್ಧೂರಿಯಾಗಿ ನಡೆಸಲು ಇಚ್ಛಿಸಿರುವ ಈ ಮದುವೆಗಾಗಿ ಕೋಟ್ಯಂತರ ರೂಪಾಯಿಗಳನ್ನು ವೆಚ್ಚ ಮಾಡಲಾಗುತ್ತಿದೆ ಎನ್ನುವ ಸಂಗತಿ ಈಗ ಬಾಲಿವುಡ್‌ನಲ್ಲಿ ಗುಲ್ಲಾಗಿದೆ. 

Share this Story:

Follow Webdunia kannada