ಫೇಸ್ಬುಕ್- ಟ್ವಿಟ್ವರ್ ನಲ್ಲಿ ರಾಗಿಣಿ ದ್ವಿವೇದಿ ಬೆತ್ತಲೆ ಚಿತ್ರಗಳು ?

ಮಂಗಳವಾರ, 5 ಆಗಸ್ಟ್ 2014 (10:08 IST)
ದಕ್ಷಿಣ ಭಾರತದಲ್ಲಿ ಗ್ಲಾಮರ್ ಪಾತ್ರಗಳಿಗೆ ಆದ್ಯತೆ ನೀಡುತ್ತಿರುವ ಹೆಣ್ಣುಮಕ್ಕಳು ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಕಳೆದ ವಾರವಷ್ಟೇ ತೆಲುಗು ತಮಿಳು ಸ್ಟಾರ್ ನಟಿ ಸಮಂತ ಅವರ ನ್ಯೂಡ್ ಚಿತ್ರಗಳ ಬಗ್ಗೆ ಹೇಳಿದ್ದೆವು. ಈಗ ಕನ್ನಡ ನಟಿ ರಾಗಿಣಿ ದ್ವಿವೇದಿ ಸ್ಥಿತಿಯು ಸಹಿತ ಅದೇ ಸಾಲಿಗೆ ಸೇರ್ಪಡೆ ಆಗಿದೆ. ಅವರ ವೈಯುಕ್ತಿಕ ಫೋಟೋಗಳು, ವೀಡಿಯೋಗಳನ್ನು ದುಷ್ಕರ್ಮಿಗಳು ಬಿಡುಗಡೆ ಮಾಡುತ್ತಿದ್ದಾರೆ!
 
ಕನ್ನಡ ಚಿತ್ರದಲ್ಲಿ ಪ್ರಸ್ತುತ ಶ್ರೀನಗರ ಕಿಟ್ಟಿ ಅವರ ಜೊತೆ ನಮಸ್ತೇ ಮೇಡಂ ಚಿತ್ರದಲ್ಲಿ ನಟಿಸಿರುವ ಈ ಚೆಲುವೆ ಸ್ಯಾಂಡಲ್ ವುಡ್ ಬೇಡಿಕೆಯ ನಟಿ . ಅಲ್ಲದೆ ಆಕೆ ತಮಿಳು, ತೆಲುಗು ಮತ್ತು ಮಲೆಯಾಳಂ ಚಿತ್ರರಂಗದಲ್ಲೂ ಸಹಿತ ತನ್ನ ಛಾಪು ತೋರಿದ್ದಾಳೆ. ಆಕೆಯ ಪ್ರತಿಭೆಯನ್ನು ಕಂಡು ಬಾಲಿವುಡ್ ಮಂದಿಯೂ ಸಹಿತ ಒಂದು ಅವಕಾಶ ನೀಡಿದ್ದಾರೆ. ರಾಗಿಣಿ ನಟನೆಯ ಜೊತೆ ಸೋಶಿಯಲ್ ನೆಟ್ವರ್ಕ್ ನಲ್ಲೂ ಸಹಿತ ತನ್ನನ್ನು ಹೆಚ್ಚಾಗಿ ತೊಡಗಿಸಿ ಕೊಂಡಿದ್ದಾಳೆ.
 
...........ಇನ್ನು ಇದೆ. ಮುಂದೆ ಓದಿ. 
 
ಇಂತಹ ಸೋಶಿಯಲ್  ನೆಟ್ ವರ್ಕ್ ಸಾವಾಸದಿಂದ ಕಲಾವಿದರು ಆಗಾಗ ಸಮಸ್ಯೆ ಎದುರಿಸುವುದು ಸಾಮಾನ್ಯ ಸಂಗತಿ. ಅದೇರೀತಿ ಆಗಿದೆ ರಾಗಿಣಿ ವಿಷಯದಲ್ಲೂ ಸಹಿತ. ಪ್ರಸ್ತುತ ತೆಲುಗು ಚಿತ್ರ ಝಂಡ ಪೈ ಕಪಿರಾಜ ಎನ್ನುವ ಚಿತ್ರದಲ್ಲಿ ನಟಿಸಿರುವ ಈಕೆಯ ಫೇಕ್ ಐಡಿಯನ್ನು  ಫೇಸ್ಬುಕ್ ಮತ್ತು ಟ್ವಿಟ್ವರ್ ನಲ್ಲಿ ತೆಗೆದಿದ್ದಾರಂತೆ. ಇದಕ್ಕೆ ಸಂಬಂಧಪಟ್ಟಂತೆ ಆಕೆ ಪೊಲೀಸರ ಮೊರೆ ಹೊಕ್ಕಿದ್ದಾಳೆ.  
 
ಅಷ್ಟೇ ಅಲ್ಲದೆ ಆ ರೀತಿ ಕ್ರಿಯೇಟ್ ಮಾಡಿದ ಅವರು ಅವಳ ಫೇಕ್ ಬೆತ್ತಲೆ ಫೋಟೋಗಳನ್ನು ಸಹಿತ ಅದರಲ್ಲಿ ಅಪ್ಲೋಡ್ ಮಾಡಿ ವಿಕೃತಾನಂದ ಪಡೆದಿದ್ದಾರೆ. ಅಲ್ಲದೆ ಫೋನ್ ನಲ್ಲಿ ಮಾತಾಡಿದ ಕೆಲವು ಧ್ವನಿ ಸುರಳಿಯನ್ನು ಸಹಿತ ಅದರಲ್ಲಿ ಲೋಡ್ ಮಾಡುತ್ತಿದ್ದಾರಂತೆ. ಅದನ್ನು ಕಂಡು ಶಾಕ್ ಆದ ಈ ಚೆಲುವೆ ಯಾವರೀತಿಯಲ್ಲೂ ಪರಿಹಾರ ಕಾಣದೆ ಪೊಲೀಸರ ಮೊರೆ  ಹೊಕ್ಕಿದ್ದಾಳೆ. 

ವೆಬ್ದುನಿಯಾವನ್ನು ಓದಿ