ಕನ್ನಡಕ್ಕೆ ಬಂದೇ ಬರ್ತಾರಾ ಸೆಕ್ಸಿ ವಿದ್ಯಾಬಾಲನ್?

ಬುಧವಾರ, 4 ಜೂನ್ 2014 (10:01 IST)
ಸುದ್ದಿಗೇನು ಬರ ಸಿನಿಮಾದವರಿಂದ ಸದಾ ಸುದ್ದಿ ಬರ್ತಾನೆ ಇರುತ್ತದೆ. ಈಗ ವಿದ್ಯಾ ಬಾಲನ್ ದಕ್ಷಿಣ ಭಾರತಕ್ಕೆ ಬರ್ತಾರೆ ಎನ್ನುವ ಸುದ್ದಿ ಅದರಲ್ಲೂ ಅಜಿತ್ ಅವರ ಜೊತೆಗೆ ನಟಿಸುವ ಅವಕಾಶವನ್ನು ಆಕೆ ಪಡೆದಿದ್ದಾರೆ ಎನ್ನುವ ನ್ಯೂಸ್ ಬಗ್ಗೆ ಇತ್ತೀಚೆಗೆ  ಬರೆದಿದ್ದೆವು ಪತ್ರಿಕೆಯಲ್ಲಿ. ಆದರೆ ಅದರ ಜೊತೆಗೆ ಮತ್ತೊಂದು ಸುದ್ದಿ ಹರಡಿದೆ. ವಿದ್ಯಾಬಾಲನ್ ಕನ್ನಡದ ಬಹು ನಿರೀಕ್ಷೆಯ ಚಿತ್ರ ಉಪ್ಪಿ-2 ನಲ್ಲಿ ನಟಿಸಲು ಓಕೆ ಅಂದಿದ್ದಾರಂತೆ ಅಥವಾ ಬರ್ತಾ ಇದ್ದಾರಂತೆ.
 
 ಸದ್ಯಕ್ಕೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲವಾದರು ಆಕೆಯು ಬಂದೆ ಬರ್ತಾರೆ ಎನ್ನುವ ಆಶೆ ಮತ್ತು ಆಶಯ ಹೊಂದಿದ್ದಾರೆ ಸ್ಯಾಂಡಲ್ ವುಡ್ ಮಂದಿ. ಉಪೇಂದ್ರ ಚಿತ್ರದ ಮೊದಲ ಭಾಗದಲ್ಲಿ ರವೀನ ಟಂಡನ್ ಬಂದಿದ್ದರು. ಆಗ ಅವರು ಬಾಲಿವುಡ್ ಚಿತ್ರಗಳ ಲೀಡ್ ರೋಲ್ ಮಾಡುತ್ತಿದ್ದ ಬೇಡಿಕೆಯ ನಟಿಯಾಗಿದ್ದರು . ಹಾಗಿದ್ದಾಗಲೂ ಅವರು ತಮ್ಮ ಅಭಿನಯ ದಕ್ಷಿಣ ಭಾರತದ ಅದರಲ್ಲೂ ಅತಿ ಪುಟ್ಟ ಸಿನಿಮಾ ಇಂಡಸ್ಟ್ರಿ ಯಲ್ಲಿ  ತೋರಲು ಬಂದಿದ್ದರು. ಈಗ ಅಷ್ಟೇನೂ ಅವಕಾಶಗಳು ಇಲ್ಲ ವಿದ್ಯಾ ಬರದೆ ಇರ್ತಾರ ಅನ್ನುವ  ನಂಬಿಕೆ ಸ್ಯಾಂಡಲ್ ವುಡ್ ಮಂದಿ ಹೊಂದಿದ್ದಾರೆ.  ಸಿಲ್ಕ್ ಸ್ಮಿತಾ ಅವರ ಜೀವನ ಚರಿತ್ರೆಯ ಸಿನಿಮಾದಲ್ಲಿ ಮಾಡಿ ಆ ಬಳಿಕ ತನ್ನ ತಾರ ಬದುಕನ್ನೇ ಬದಲಾಯಿಸಿಕೊಂಡರು. ಆಕೆ ಎಂದಿಗೂ ತನ್ನ ದಪ್ಪಾಕೃತಿಯನ್ನು   ಸಿನಿಮಾಗಾಗಿ ಸಣ್ಣ ಮಾಡಿಕೊಳ್ಳಲೇ ಇಲ್ಲ. ಈಗಷ್ಟೇ ಶಾದಿ ಕಿ ಸೈಡ್ ಎಫೆಕ್ಟ್ ಚಿತ್ರದಲ್ಲಿ ನಟಿಸಿ ಗೆದ್ದ ವಿದ್ಯಾ ಬಳಿ ಇಷ್ಟಾದರೂ ಹೇಳಿಕೊಳ್ಳುವ ಅವಕಾಶಗಳು ಬಾಲಿವುಡ್ ನಲ್ಲಿ ಇಲ್ಲ. ಒಟ್ಟಾರೆ ಹೇಗಾದರೂ ಸರಿಯೇ ಉಲಾಲ ಮ್ಯಾಡಂ ಕನ್ನಡಕ್ಕೂ  ಬರಲಿ ಎನ್ನುವುದು ವಿದ್ಯಾಭಿಮಾನಿಗಳ ಆಸೆ. ಅವರ ಕನಸು ನೆರವೇರಿಸಲು ಸಾಧ್ಯವೇ ಉಪೇಂದ್ರ ಅವರಿಂದ... ? ಕಾದು ನೋಡುವಾ!
 

ವೆಬ್ದುನಿಯಾವನ್ನು ಓದಿ